ಪ್ರತಿಭೆ ಅನಾವರಣಕ್ಕೆ ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆ
ಹೂವಿನಹಡಗಲಿ 08: ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆ ಮೂಲಕ ಪ್ರತಿಭೆಗಳನ್ನು ಗುರುತಿಸಲು ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆ ಎಂದು ಮಲ್ಲಿಗೆ ಚಾರಿಟೆಬಲ್ ಟ್ರಸ್ಟ ಅದ್ಯಕ್ಷ ಕೋಡಿಹಳ್ಳಿ ಕೊಟ್ರೇಶ ಹೇಳಿದರು.
ಹೂವಿನಹಡಗಲಿ ತಾಲೂಕಿನ ಮಿರಾಕೊರನಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ಶಾರದ ಪೂಜೆ.ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ವಿದ್ಯಾರ್ಥಿಗಳಳಿಗೆ ಪಠ್ಯೆದ ಜತೆಯಲ್ಲಿ ಯೋಗ ಮಾಡಬೇಕು .ಕೋವಿಡ್ ಸಂದರ್ಭದಲ್ಲಿ ರೋಗಿಗಳಿಗೆ ಯೋಗಾ ನೀಡುವ ಮೂಲಕ ಅವರಿಗೆ ಆತ್ಮ ಸ್ಥ್ಯೆರ್ಯವನ್ನು ನಮ್ಮ ಟ್ರಸ್ಟ್ ನೀಡಿದ್ದನ್ನು ನೆನಪಿಸಿಕೊಂಡರು. ಗ್ರಾ.ಪಂ.ಸದಸ್ಯ ಶರಣಗೌಡ.ಶಿಕ್ಷಕರಾದ ಗುರುಸಿದ್ದಪ್ಪ.ಅನಿತಾ. ಯು.ಹಾಲೇಶ್ ಮಾತನಾಡಿ ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣ ಇದ್ದು. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಎಂದರು. ಅದ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ.ಕೆ.ಶಶಿಧರ ಮಾತನಾಡಿದರು.ಇದೇ ವೇಳೆ ಕಳೆದ ವರ್ಷ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಶೇ.93 ಅಂಕಪಡೆದ ವಿದ್ಯಾರ್ಥಿ ಮಂಜುನಾಯ್ಕ ಸನ್ಮಾನಿಸಲಾಯಿತು. ಗ್ರಾ.ಪಂ.ಸದಸ್ಯ ವೀಣಾ, ಪತ್ರಕರ್ತ ಎಂ.ಅಶೋಕ ಶಿಕ್ಷಕರಾದ ಬುಡೇನ ಸಾಹೇಬ್, ಲಿಂಗೇಗೌಡ ಗೋಪಿನಾಯ್ಕ, ತೇಜುನಾಯ್ಕ, ಜಯಶ್ರೀ, ರಾಜೇಶ್ವರಿ, ರೇಣುಕಮ್ಮ, ಶಾಂತ, ಧರ್ಮೇಂದ್ರ ಇದ್ದರು.
ಶಿಕ್ಷಕ ಪ್ರಕಾಶ ನಾಯ್ಕ ಶಾಲಾ ವರದಿ ವಾಚನ ಮಾಡಿದರು. ಶಿಕ್ಷಕಿ ಜ್ಯೋತಿ ಸ್ವಾಗತಿದರು.ಜಾನಪದ ಕಲಾವಿದಅಂಗೂರು ಪರಶುರಾಮ ಭಾವಗೀತೆ ಹಾಡಿದರು.ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಗಮನ ಸೆಳೆದವು