ಸಾವಿತ್ರಿಬಾಯಿ ಪುಲೆ ಶಿಕ್ಷಣದ ಜೊತೆಗೆ ಸಾಮಾಜಿಕ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿದ ಪಥಮ ಮಹಿಳೆ
ಕಂಪ್ಲಿ 01: ಶೋಷಿತರ ಹಾಗೂ ಬಡವರ ಬಂಧು ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸಮಾನತೆ ನೀಡಿದ್ದಾರೆ. ಇವರಂತೆಯೇ ಸಾವಿತಿ ಬಾಯಿ ಪುಲೆ ಅವರು ಶಿಕ್ಷಣದ ಮೂಲಕ ವಿದ್ಯಾದಾನದ ಕೊಡುಗೆ ನೀಡಿದ್ದಾರೆ. ಎಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ರಾಮಚಂದ್ರ ಹೇಳಿದರು ಇಲ್ಲಿನ ಭಾರತೀಯ ಶಿಶು ವಿದ್ಯಾಲಯ ಆವರಣದಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯಿಂದ ಶುಕ್ರವಾರ ಸಾವಿತ್ರಿ ಬಾಯಿ ಪುಲೆ ಅವರ ಜಯಂತಿ ನಿಮಿತ್ಯದ ವಿಶೇಷ ಉಪನ್ಯಾಸ, ಕ್ಷೇತ್ರ, ತಾಲೂಕು, ಗ್ರಾಮ ಘಟಕ ಉದ್ಘಾಟನೆ, ನೂತನ ಪದಾಧಿಕಾರಿಗಳ ಪದಗ್ರಹಣ, ಹಾಗೂ ವಿಶೇಷ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಾವಿತ್ರಿ ಬಾಯಿ ಪುಲೆ ಅವರು ಮಹಿಳಾ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಸಿದ್ದರು. ಶಿಕ್ಷಣದ ಜತೆಗೆ ಸಾಮಾಜಿಕ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿದ ಪಥಮ ಮಹಿಳೆ. ಅವರ ಆದರ್ಶಗಳು ಪ್ರತಿಯೊಬ್ಬರಿಗೂ ಪ್ರೇರಣೆಯಾಗಿವೆ. ಅಂಬೇಡ್ಕರ್ ಸ್ವಾಭಿಮಾನಿ ಸೇನೆಯು ಇಡೀ ರಾಜ್ಯಾದ್ಯಂತ ಹಲವು ಚಳುವಳಿಗಳ ಮೂಲಕ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಎಂದರು. ಉಪನ್ಯಾಸಕ ಸಿದ್ದೇಶ ಉಪನ್ಯಾಸ ನೀಡಿ ಮಾತನಾಡಿ, ಅಂದಿನ ಕಾಲಘಟದ ಅಸಮಾನತೆಯ ವ್ಯವಸ್ಥೆಯಲ್ಲಿ ಯಾವುದಕ್ಕೂ ಹಿಗ್ಗದೆ ಕುಗ್ಗದೆ ತಮ್ಮ ಜೀವನ ಮೂಡುಪಾಗಿಟ್ಟು, ಎಲ್ಲ ವರ್ಗದ ಜನರಿಗೆ ವಿಶೇಷವಾಗಿ ಮಹಿಳೆಯರಿಗೆ ಶಿಕ್ಷಣ ಕೊಟ್ಟರು. ಅಂದಿನ ಅವರ ತ್ಯಾಗವೇ ಇಂದಿನ ಮಹಿಳೆಯರ ನೆಮ್ಮದಿಯ ಬದುಕಿಗೆ ಸಾಕ್ಷಿಯಾಗಿದೆ ಎಂದರು. ಕ್ಷೇತ್ರ ಅಧ್ಯಕ್ಷ ಸಿ.ಎ.ಚನ್ನಪ್ಪ ಪಾಸ್ತಾವಿಕವಾಗಿ ಮಾತನಾಡಿ, ಅಂಬೇಡ್ಕರ್ ಸ್ವಾಭಿಮಾನಿ ಸೇನೆಯು ರಾಜ್ಯಾಧ್ಯಕ ಕೋದಂಡರಾಮ ಅವರ ನೇತೃತ್ವದಲ್ಲಿ ನಾಡಿನಾದ್ಯಂತ ಹೋರಾಟಗಳೊಂದಿಗೆ ನೊಂದ ಜೀವಗಳಿಗೆ ನ್ಯಾಯ ಕೊಡಿಸಲಾಗುತ್ತಿದೆ. ಸೇನೆಯನ್ನು ಬಲಪಡಿಸಿ, ಜನರ ಸಂಕಷ್ಟಗಳಿಗೆ ಸ್ಪಂದಿಸಿ, ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು. ಪುರಸಭೆ ಭಟ್ಟ ಪಸಾದ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ವಿವಿಧ ರಂಗದಲ್ಲಿ ಸಾಧನೆ ಮಾಡಿದ ಸಾಧಕರಾದ ಎಸ್.ಶಿವಲಿಂಗಮ್ಮ, ವಾಲ್ಮೀಕಿ ಜಿ.ಈರಮ್ಮ, ಸುನೀತಾ ಪೂಜಾರ, ಉಮಾ, ಎಚ್.ಪಿ.ಸೋಮಶೇಖರ, ಚಿದಾನಂದಪ್ಪ, ಎಸ್.ಈರೇಶ, ಬಡಿಗೇರ್ ಜಿಲಾನಸಾಬ್, ಎಂ.ಭರತ್‌ಕುಮಾರ್, ಪಿ.ವಿರೇಶ, ಹಾದಿಮನಿ ಹುಸೇನಪ್ಪ, ಖಾಜಿ ಗೌಸ್ ಪೀರ್ ಇವರಿಗೆ ಪಶಸ್ತಿ ನೀಡಿ, ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಘವೇಂದ್ರ, ರಂಗಸ್ವಾಮಿ, ಎಂ.ಸಿ.ಮಾಯಪ್ಪ, ವಿಪ್ರದ ನಾರಾಯಣಪ್ಪ, ಎಮ್ಮಿಗನೂರು ರಾಮು, ಶಾಮ್ ಸುಂದರ್, ಸಿ.ಎಸ್.ರಮೇಶ, ಎನ್.ನಿಂಗಪ್ಪ, ಎಂ.ರಾಜಶೇಖರ, ಕಿರಣ್, ಎನ್.ಮಣಿಕಂಠ, ಎಸ್.ಮಣಿಕಂಠ, ಸಿ.ವಿಶ್ವನಾಥ, ಜಿ.ಮುರಾರಿ, ಮುಖಂಡರಾದ, ವಿರೇಶ, ಲಿಂಗರಾಜ ಸೇರಿದಂತೆ ಅನೇಕರಿದ್ದರು
ಫೆ.001: ಕಂಪ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.