ಸೌದಿ ಅರೇಬಿಯಾ ಮಕ್ಕಾ ಮದೀನಾ ಉಮ್ರಾ ಯಾತ್ರಾರ್ಥಿಗಳ ಬೀಳ್ಕೊಡುಗೆ
ಹೊಸಪೇಟೆ 28: ಸೌದಿ ಅರೇಬಿಯಾ ಮಕ್ಕಾ ಮದೀನಾ ಉಮ್ರಾ ಯಾತ್ರಾರ್ಥಿಗಳ ಬೀಳ್ಕೊಡುಗೆ ಸಮಾರಂಭ ದೇಶ ರಾಜ್ಯ ಸಮೃದ್ಧಿವಾಗಲೆಂದು ಅಲ್ಲಾಹನರಲ್ಲಿ ಪ್ರಾರ್ಥಿಸಿ ದುವಾದಲ್ಲಿ ಪ್ರತಿಯೊಬ್ಬರಿಗೂ ನೆನಪಿಸಿ ಹಾಜಿ ಅಬ್ದುಲ್ ನಬಿ ಸಿರುಗುಪ್ಪ ಸರ್ವ ಧರ್ಮದವರು ಒಂದೇ ಆರ್ಥಿಕ ಸಾಮಾಜಿಕ ರಾಜಕೀಯ ಶಕ್ತಿ ತುಂಬಬೇಕು.
ಸೌದಿ ಅರೇಬಿಯಾದ ಮಕ್ಕಾ ಮತ್ತು ಮದೀನಾ ಉಮ್ರಾ ಯಾತ್ರಾರ್ಥಿಗಳು ಅಲ್ಲಾಹ ರ ಸೂಲರಲ್ಲಿ ಪ್ರಾರ್ಥಿಸಿ ದುವಾದಲ್ಲಿ ನೆನಪಿಸಿ ಸಲಾಂ ತಿಳಿಸಬೇಕು ಎಂದು ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಬಳ್ಳಾರಿ ಜಿಲ್ಲಾ ಮಾಜಿ ಸದಸ್ಯರು ಸಮಾಜ ಸುಧಾರಕರಾದ ಹಾಜಿ ಅಬ್ದುಲ್ ನಬಿ ಚಿಸ್ತಿ ನಿಜಾಮಿ ಅವರು ಹೇಳಿದರು. ಕುಡುತಿನಿ ಪಟ್ಟಣದ ಹೆಚ್. ಅಲ್ಲಾಭಕ್ಷಿ ಸಾಹೇಬ್ ಮತ್ತು ಅವರ ಕುಟುಂಬದವರು ಹೊಸಪೇಟೆ ನಗರದ ಬಾಪುರ್ ಮೊಹಮ್ಮದ್ ರಫಿ ಅವರು ಮತ್ತು ಅವರ ಸಹೋದರಿಯರು ಸೇರಿದಂತೆ ಅವರಿಗೆ ಪರಸ್ಪರ ವಿನಿಮಯ ದೊಂದಿಗೆ ಮಾಲಾರೆ್ಣ ಶಾಲು ಹೊಂದಿಸಿ ಗೌರವಿಸಿ ಸನ್ಮಾನಿಸಿ ಉಮ್ರಾ ಪ್ರಯಾಣ ಸುಖಕರ ವಾಗಲಿ ಎಂದು ಶುಭ ಹಾರೈಸಿದರು.
ಸಮಾಜದಲ್ಲಿ ಸಾಮರಸ್ಯ ಸೌಹಾರ್ದತೆ ಶಾಂತಿ ನೆಲೆಸಲಿ ಮಳೆಯಾಗಿ ಬೆಳೆ ಬರಲಿ ನಾಡು ಸಮೃದ್ಧವಾಗಲಿ ಅಲ್ಲಾಹ ರಸೂಲರಲ್ಲಿ ಪ್ರಾರ್ಥಿಸಿ ದುವಾದೊಂದಿಗೆ ಸಲಾಂ ಹೇಳಿ ಸಮಾಜದ ಗುರುಗಳು ಹಿರಿಯರು ಗಣ್ಯರು ಮೊಹಮ್ಮದ್ ನೌಷಾದ್ ಅಲಿ ಸಂಬಂಧಿಕರು ಮಿತ್ರರು ಭಾಗವಹಿಸಿ ಪರಸ್ಪರ ವಿನಿಮಯ ಮಾಡಿ ಶುಭ ಹಾರೈಸಿದರು.