ಚಿಕ್ಕೋಡಿ 30: ರಾಜ್ಯವನ್ನು ಆಳುವ ಜನಪ್ರತಿನಿಧಿಗಳಿಗೆ ಕನ್ನಡ ಭಾಷೆ ಬಗ್ಗೆ ಅಭಿಮಾನ ಇದ್ದಾಗ ಮಾತ್ರ ರಾಜ್ಯದಲ್ಲಿ ಕನ್ನಡ ಭಾಷೆಗೆ ಗಟ್ಟಿತನ ಬರುತ್ತದೆ. ರಾಜ್ಯದ ಗಡಿ ಭಾಗದ ನಗರಗಳು ಮತ್ತು ಬೆಂಗಳೂರು ನಗರದಂತಹ ಪ್ರದೇಶಗಳಲ್ಲಿ ಶೇ 70 ರಷ್ಟ್ರು ಅನ್ಯ ಭಾಷೆಗಳ ಮಾತನಾಡುವ ಜನರು ಇರುವದರಿಂದ ಕನ್ನಡ ಭಾಷೆ ಪ್ರಾಧಾನ್ಯತೆ ಕಡಿಮೆಯಾಗುತ್ತಿದೆ. ರಾಜ್ಯ ಸಕರ್ಾರ ದಿಟ್ಟತನದಿಂದ ಕನ್ನಡ ಭಾಷೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಒತ್ತಾಯಿಸಿದರು.
ಗಡಿ ಗ್ರಾಮವಾದ ಕಾರದಗಾ ಕನ್ನಡ ಬಳಗದ ವತಿಯಿಂದ ಹಮ್ಮಿಕೊಂಡ ಮೂರನೆೆ ಕನ್ನಡ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಇದ್ದುಕೊಂಡು ಅನ್ಯ ಭಾಷೆಗೆ ಜೈಕಾರ ಹಾಕುವಂತಹ ಜನರು ಇರುವಾಗ ಕನ್ನಡಕ್ಕೆ ಪೆಟ್ಟಾಗುತ್ತದೆ. ಬೆಳಗಾವಿ ಜಿಲ್ಲೆಯ ಶಾಸಕರು-ಸಂಸದರು ಕೂಡಾ ಮರಾಠಿಗೆ ಅಂಟಿಕೊಂಡಿರುವುದರಿಂದ ಗಡಿ ಭಾಗದಲ್ಲಿ ಕನ್ನಡ ಹೇಗೆ ಬೆಳೆಯಬೇಕೆಂದು ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇಡೀ ರಾಜ್ಯದ ಗಡಿ ಭಾಗಗಳಲ್ಲಿ ಸಂಚಾರ ಮಾಡಿದರೇ ಶೇ 70 ರಷ್ಟು ಅನ್ಯ ಭಾಷೆ ನಾಮಫಲಕಗಳನ್ನು ನೋಡಲು ಸಿಗುತ್ತದೆ. ಗಡಿ ಜಿಲ್ಲೆ ಬೆಳಗಾವಿ ಸುತ್ತಮುತ್ತ ಪ್ರದೇಶಗಳಲ್ಲಿಯೂ ಸಹ ಇದೆ ಸ್ಥಿತಿ ನಿಮರ್ಾಣವಾಗಿದೆ. ರಾಜ್ಯ ಸಕರ್ಾರ ಎಚ್ಚೆತ್ತುಕೊಂಡು ಗಡಿ ಭಾಗದ ಕಡೆ ಹೆಚ್ಚಿನ ಗಮನ ಹರಿಸಿ ಕನ್ನಡ ಶಾಲೆಗಳಿಗೆ ಹೆಚ್ಚಿನ ಮಾನ್ಯತೆ ನೀಡುವ ಮೂಲಕ ಕನ್ನಡ ಗಟ್ಟಿತನಗೊಳಿಸಲು ಪ್ರಯತ್ನ ಮಾಡಬೇಕು ಎಂದರು.
ಈ ಹಿಂದೆ ನಾನು ಶಿಕ್ಷಣ ಸಚಿವನಾಗಿದ್ದ ವೇಳೆಯಲ್ಲಿ ಗಡಿ ಭಾಗದ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚಬಾರದು ಅವುಗಳಿಗೆ ಮರುಜೀವ ನೀಡಬೇಕು. ಅಲ್ಲಿಯ ಮಕ್ಕಳು ಕನ್ನಡದಲ್ಲಿ ಅಧ್ಯಯನ ಮಾಡಬೇಕು ಮತ್ತು ಆ ಶಾಲೆಯಲ್ಲಿ ಕೆಲಸ ಮಾಡುವ ಶಿಕ್ಷಕರಿಗೂ ಶಾಶ್ವತ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ 27 ಸಾವಿರ ಶಿಕ್ಷಕರಿಗೆ 398 ಕೋಟಿ ರೂ ಅನುದಾನ ನೀಡಲಾಗಿದ್ದು, ಅನುದಾನ ರಹಿತ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲಾಗಿದೆ. ಆದರೆ ನಂತರ ಬಂದ ಸಕರ್ಾರಗಳು ಗಡಿ ಭಾಗದ ಶಾಲೆಗಳನ್ನು ನಿರ್ಲಕ್ಷೆ ಮಾಡಿರುವುದು ದುದರ್ೈವದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಡಿ ಭಾಗದ ಚಿಕ್ಕೋಡಿ ತಾಲೂಕು ಮತ್ತು ನಿಪ್ಪಾಣಿ ತಾಲೂಕುಗಳ ವ್ಯಾಪ್ತಿಯ ಶಾಲೆಗಳಲ್ಲಿ ಕನ್ನಡಕ್ಕೆ ಮೊದಲು ಒತ್ತು ಕೊಡಬೇಕು. ಕನ್ನಡ ಶಾಲೆಗಳಲ್ಲಿ ಮರಾಠಿ ಕಂಡು ಬಂದರೆ ಅಂತಹ ಶಾಲೆಗಳ ಅನುದಾನ ಕಡಿತ ಮಾಡಬೇಕೆಂದು ಸಕರ್ಾರದ ಮುಖ್ಯ ಕಾರ್ಯದಶರ್ಿ ಅವರಿಗೆ ಪತ್ರ ಬರೆಯಲಾಗುತ್ತದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಉಪನಿದರ್ೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕನ್ನಡ ಶಾಲೆಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು.
ಕನ್ನಡ ಸಮಾವೇಶದ ಸವರ್ಾಧ್ಯಕ್ಷ ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ(ಚಂಪಾ) ಮಾತನಾಡಿ, ಗಡಿ ಭಾಗದಲ್ಲಿ ಕನ್ನಡ ನಶಿಸುತ್ತದೆ. ಇಲ್ಲಿರುವ ಕನ್ನಡ ಶಾಲೆಗಳಲ್ಲಿ ನಾಮ ಫಲಕ ಕಾಣುತ್ತಿಲ್ಲ, ಇದಕ್ಕೆ ಅಧಿಕಾರಿ ವರ್ಗದವರಲ್ಲಿ ನೇರ ಹೊಣೆಗಾರರು, ಅವರಲ್ಲಿ ಕನ್ನಡ ಪ್ರೀತಿ, ಅಭಿಮಾನ ಮೂಡಿದರೇ ಕನ್ನಡ ಬೆಳೆಯುತ್ತದೆ. ಗಡಿ ಭಾಗದ ಹೊರಗಡೆ ನೋಡಿದರೇ ಅಲ್ಲಿ ಮರಾಠಿ ನಾಮಫಲಕ ಕಾಣುತ್ತದೆಯೋ ಹಾಗೇ ನಮ್ಮ ಗಡಿ ಭಾಗದಲ್ಲಿ ಕನ್ನಡ ನಾಮಫಲಕ ಕಾಣುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು. ಕನ್ನಡ ಭಾಷೆ ಬೆಳೆಸಲು ಹಿಂದೆಟ್ಟು ಹಾಕುವ ಅಧಿಕಾರಿ ವರ್ಗದವರ ಮೇಲೆ ಸಕರ್ಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಜಗತ್ತಿನಲ್ಲಿ ಇರುವ ಸಾವಿರಾರು ಭಾಷೆಗಳಲ್ಲಿ ಕನ್ನಡ ಭಾಷೆಯು ಪ್ರಾಚಿನವಾಗಿದೆ. ಮತ್ತು ಕನ್ನಡ ಭಾಷೆಗೆ ತನ್ನದೆಯಾದ ಇತಿಹಾಸ ಹೊಂದಿದೆ. ಭಾಷಾ ಸಂಶೋಧಕರು ಸಂಶೋಧನೆ ಮಾಡಿದ ಹಾಗೇ ಕನ್ನಡವು ಅತೀ ಹಳೆಯ ಭಾಷೆಯಾಗಿದೆ. ಕನ್ನಡ ಹುಟ್ಟುವಕ್ಕಿಂತ ಪೂರ್ವದಲ್ಲಿ ಯಾವುದೇ ಭಾಷೆ ಜನ್ಮತಾಳಿಲ್ಲ, ಕನ್ನಡ ಭಾಷೆ ಬಂದ ಮೇಲೆ ಆಯಾ ಭಾಷೆಗಳು ಹುಟ್ಟಿಕೊಂಡಿವೆ ಎಂದರು.
ಸಕರ್ಾರದ ಮುಖ್ಯ ಸಚೇತಕ ಗಣೇಶ ಹುಕ್ಕೇರಿ ಚಿಕ್ಕೋಡಿ ಚರಮೂತರ್ಿಮಠದ ಸಂಪಾದನ ಮಹಾಸ್ವಾಮಿಗಳು ಮಾತನಾಡಿದರು.
ಸಹಕಾರಿ ದುರೀಣ ಅಣ್ಣಾಸಾಹೇಬ ಹವಲೆ, ಸಾಹಿತಿಗಳಾದ ಎಸ್.ವೈ.ಹಂಜಿ, ಪಿ.ಜಿ.ಕೆಂಪನ್ನವರ, ಯ.ರು.ಪಾಟೀಲ, ಎಂ.ಕೆ.ಶಾಂತಲಾ, ಮಹೇಶ ಮಗದುಮ್ಮ, ಕೆ.ಬಿ.ಹೊನ್ನಾಯಿಕ, ಜಿ.ಪಂ.ಸದಸ್ಯೆ ಸುಮಿತ್ರಾ ಉಗಳೆ, ಅಭಿನಂದನ ಮೂರಾಬಟ್ಟೆ, ನಂದಿನಿ ಹೆಗಡೆ, ಡಾ| ಬಾಳೇಶಾ ಮಾನೆ, ತಹಶೀಲ್ದಾರ ಎಂ.ಎಸ್.ಬನಸಿ, ಕಸಾಪ ಚಿಕ್ಕೋಡಿ ಘಟಕದ ಅಧ್ಯಕ್ಷ ಶ್ರೀಪಾದ ಕುಂಬಾರ, ವಿರೇಂದ್ರ ಖೋತ, ಮಂಗಲಾ ಕುಂಬಾರ ಮುಂತಾದವರು ಉಪಸ್ಥಿತರಿದ್ದರು.
ಕನ್ನಡ ಸಮಾವೇಶದ ಗೌರವ ಅಧ್ಯಕ್ಷರು ರಾಜು ಖಿಚಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.