ಧಾರವಾಡ,.21 : ನಗರದ ಸಪ್ತಾಪುರ ಆರಾಧ್ಯ ದೇವತೆ ಗಾಳಿದುರ್ಗಮ್ಮ ದೇವಿಯ ಜಾತ್ರಾ ಮಹೋತ್ಸವ ಇತ್ತೀಚೆಗೆ ವಿಜೃಂಬಣೆಯಿಂದ ನಡೆಯಿತು. ಜಾತ್ರೆಯ ಅಂಗವಾಗಿ ಜರುಗಿದ ಪಲ್ಲಕ್ಕಿ ಉತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು. ದೇವಿ ಮೂತರ್ಿಗೆ ಮಹಾಭಿಷೇಕ, ಉಡಿ ತುಂಬುವದು, ಕುಂಭಮೇಳದ ಮೆರವಣಿಗೆ ಮತ್ತು ಇತರೇ ಸೇವೆಗಳು ಶ್ರೀಮಾತೆ ಗಾಳಿದುರ್ಗಮ್ಮ ದೇವಿಯ ಸಾನ್ನಿಧ್ಯದಲ್ಲಿ ಜರುಗಿದವು. ಮಧ್ಯಾಹ್ನ ನೆಡೆದ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಹಿಂದೂಸ್ತಾನಿ ಸಂಗೀತಗಾರರಾದ ಪದ್ಮಶ್ರೀ ಡಾ|| ಎಂ. ವೆಂಕಟೇಶಕುಮಾರ್ ಅವರನ್ನು ಸನ್ಮಾನಿಸಲಾಯಿತು. ವೆಂಕಟೇಶಕುಮಾರವರು ತಮ್ಮ ಗುರುಗಳಾದ ಗದುಗಿನ ಪುಟ್ಟರಾಜ ಗವಾಯಿಗಳು ದೇವಿಯ ಮಹಿಮೆ ಕುರಿತು ರಚಿಸಿರುವ ಭಕ್ತಿಗೀತೆಯನ್ನು ಪ್ರಸ್ತುತಪಡಿಸಿ ಜನಮನ ಸೂರೆಗೊಂಡರು.
ದೇವಾಲಯ ಸೇವಾ ಸಮಿತಿ ಕಾರ್ಯದಶರ್ಿ ಉದಯ ಲಾಡ್ ಕಳೆದ 20ವರ್ಷಗಳಲ್ಲಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದರು. ಮುಂದೆ ಯೋಜಿಸಲಾಗಿರುವ ಅಭಿವೃದ್ಧಿಗಳ ಕುರಿತು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಚ್. ವಿ. ಕಟ್ಟಿ ದೇವಿಯ ಪವಾಡಗಳ ಕುರಿತು ತಮಗಾದ ಅನುಭವಗಳನ್ನು ಹಂಚಿಕೊಂಡರು. ಡಾ. ಎಸ್. ಆರ್. ಕೌಲಗುಡ್ಡ ಮತ್ತು ಡಾ. ವಸ್ತ್ರದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಳಿನಾಕ್ಷಿ ಅರಳಗುಪ್ಪಿ 'ನಗು ಮತ್ತು ಆರೋಗ್ಯ ಕುರಿತು ಮಾತನಾಡಿದರು. ಕುಮಾರಿ ವೇದಶ್ರೀ ಮರಾಠೆ ಭರತನಾಟ್ಯ ಪ್ರಸ್ತುತ ಪಡಿಸಿ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದರು. ಬಾಗಿರಥಿ ಕಲ್ಕಂಕರ ನಿರೂಪಿಸಿದರು.
ಗಿರಿಜಾ ಹಿರೇಮಠ ವಂದಿಸಿದರು. ದಾನಿಗಳಾದ ಪುರಂದರಶೆಟ್ಟಿ ಮತ್ತು ಇಂಜಿನಿಯರ್ ಕೆ. ಎನ್. ಕುಪಾಟಿಯವರನ್ನು ಸನ್ಮಾನಿಸಲಾಯಿತು. ಜಗದೀಶ ವಡವಡಗಿ, ಪಂಪಾಪತಿ ಹಿರೇಮಠ, ಉದಯಕುಮಾರ ದೇಸಾಯಿ, ನಿಜಗುಣಿ ರಾಜಗುರು, ಅನಸೂಯಾ ಚೌಗಲೆ ಮತ್ತಿತ್ತರ ದೇವಸ್ಥಾನದ ಸಮಿತಿ ಸದಸ್ಯರು ಮತ್ತು ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.