ನವದೆಹಲಿ 20:ರಾಜ್ಯಸಭೆಯಲ್ಲಿ ತಮ್ಮ ಆಸನ ಬದಲಾವಣೆ ಮಾಡಿರುವುದು ಅವಮಾನಕರ ಮತ್ತು ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯಸಭೆಯಲ್ಲಿ ತಮ್ಮ ಆಸನ ಬದಲಿಸಿರುವುದು ಅವಮಾನವಾಗಿದೆ ಎಂದು ಅವರು ದೂರಿದ್ದಾರೆ. ಮಹಾರಾಷ್ಟ್ರ ಅಧಿಕಾರ ಹಂಚಿಕೆ ವಿಚಾರವಾಗಿ ಶಿವಸೇನೆ ಮತ್ತು ಬಿಜೆಪಿ ಮೈತ್ರಿ ನಡುವೆ ಬಿರುಕು ಬಿಟ್ಟ ಕಾರಣ ಆಡಳಿತರೂಢ ಬಿಜೆಪಿ ಸಂಸತ್ತಿನಲ್ಲಿ ಆಸನ ಬದಲಿಸಿದೆ ಎಂದೂ ಶಿವಸೇನೆ ಆರೋಪಿಸಿದೆ .
ರಾಜ್ಯಸಭೆಯಲ್ಲಿ ತಮ್ಮ ಆಸನವನ್ನು ಮೂರನೇ ಸಾಲಿನಿಂದ ಐದನೇ ಸಾಲಿಗೆ ಬದಲಿಸಿರುವುದು ತೀವ್ರ ಅಚ್ಚರಿ,ಆಘಾತ ಉಂಟು ಮಾಡಿದೆ. ಯಾರೋ ಒಬ್ಬರ ಈ ನಿರ್ಧಾರದಿಂದ ಶಿವಸೇನೆಯ ಭಾವನೆಗಳಿಗೆ ಧಕ್ಕೆಯಾಗಿದೆ ಅಪಮಾನವಾಗಿದೆ ಎಂದು ಪ್ರತ್ರದಲ್ಲಿ ಹೇಳಿಕೊಂಡಿದ್ದಾರೆ
ಮೇಲಾಗಿ ನಮ್ಮ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದೂ ಅಸಮಾದಾನ ಹೊರಹಾಕಿದ್ದಾರೆ.
ಉದ್ದೇಶಪೂರ್ವಕವಾಗಿ, ಅವಮಾನ ಮಾಡಬೇಕು ಎಂಬ ಕಾರಣದಿಂದಲೇ ಮೂರನೇ ಸಾಲಿನಿಂದ ಎರಡು ಸಾಲುಗಳ ಹಿಂದಕ್ಕೆ ಹಾಕಿರುವುದು ಇದರಿಂದ ಸ್ಪಷ್ಟವಾಗಿದೆ ಎಂದು ರಾವತ್ ಸಭಾಪತಿಯವರಿಗೆ ಪತ್ರ ಬರೆದಿದ್ದಾರೆ.