ಅಕ್ಕಿ ಜಿಲಾನ್‌ಗೆ ಸಂಗೀತ ಭಾರ್ಗವ ಪ್ರಶಸ್ತಿ ಪುರಸ್ಕಾರ
ಕಂಪ್ಲಿ 27: ಹೊಸಪೇಟೆ ನಗರದಲ್ಲಿ ಸಂಗೀತ ಭಾರತಿ ಸಂಸ್ಥೆಯಿಂದ ರಕ್ತದಾನ, ಸಮಾಜ ಸೇವೆ ಗುರುತಿಸಿ, ಕಂಪ್ಲಿ ನಿವಾಸಿ ಹಾಗೂ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಟ್ರಸ್ಟ್ ಅಧ್ಯಕ್ಷ ಯು.ಜಿಲಾನ್ ಇವರಿಗೆ ರಾಜ್ಯ ಮಟ್ಟದ ಸಮಾಜ ಸೇವಾ ಸಂಗೀತ ಭಾರ್ಗವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ಅಕ್ಕಿ ಜಿಲಾನ್ ಅವರು ಪ್ರಶಸ್ತಿ ಸ್ವೀಕರಿ ಮಾತನಾಡಿ, ಕಂಪ್ಲಿ ಸೇರಿದಂತೆ ನಾನಾ ಭಾಗದಲ್ಲಿರುವ ಕೆಲ ಬಡವರಿಗೆ ರಕ್ತದಾನ ಮಾಡುವ ಜತೆಗೆ ಹಲವು ಸಮಾಜ ಸೇವೆ ಕಾರ್ಯಗಳನ್ನು ಮಾಡಿಕೊಂಡು ಬಂದಿರುವುದು ಮನಸ್ಸಿಗೆ ನೆಮ್ಮದಿ ತರಿಸಿದೆ. ಈ ಸೇವೆಯನ್ನು ಗುರುತಿಸಿ, ನಮ್ಮನ್ನು ಸಂಗೀತ ಭಾರ್ಗವ ಪ್ರಶಸ್ತಿಗೆ ಆಯ್ಕೆ ಮಾಡಿ, ಪುರಸ್ಕಾರ ನೀಡಿರುವುದು ಸಂತಹ ತಂದಿದೆ.
ಎಲೆಮರೆ ಕಾಯಿಯಂತಿರುವ ಸಾಧಕರನ್ನು ಹೊಸಪೇಟೆ ಸಂಗೀತ ಭಾರತಿ ಸಂಸ್ಥೆಯು ಪ್ರಶಸ್ತಿ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಈ ಪ್ರಶಸ್ತಿಯಿಂದ ಇನ್ನಷ್ಟು ಸೇವೆಗಳನ್ನು ಮಾಡಬೇಕೆಂಬ ಹಂಬಲವಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಎಚ್.ಪಿ.ಕಲ್ಲಂಭಟ್, ಪ್ರೊ.ಯು.ರಾಘವೇಂದ್ರರಾವ್, ಹರ್ಷ ಪಂತರ್, ಇಂತಿಯಾಜ್, ಬಳೇ ಮಲ್ಲಿಕಾರ್ಜುನ, ಬಡಿಗೇರ ಜಿಲಾನ್‌ಸಾಬ್, ಬಿ.ಕೆ.ವಾಸೀಮ್, ಸೈಯ್ಯದ್ ಬುಡೇನ್, ಮರ್ದಾನ್, ಶ್ರೀಕೃಷ್ಣ, ಗಾದಿಲಿಂಗಪ್ಪ, ಎಸ್.ಡಿ.ಬಸವರಾಜ, ಎಲಿಗಾರ ವೆಂಕಟರೆಡ್ಡಿ, ಎಸ್.ಶಾಮಸುಂದರರಾವ್, ಬಂಗಿ ದೊಡ್ಡ ಮಂಜುನಾಥ ಸೇರಿ ಇತರರಿದ್ದರು.