ಬ್ರಾಡಗೇಜ್ ರೇಲ್ವೆ ಮಾರ್ಗ ರಚನೆಗಾಗಿ ಸಂಗಣ್ಣ ಕರಡಿ ಭೇಟಿ
ಗಂಗಾವತಿ 15: ಕಂಪ್ಲಿ ರೇಲ್ವೆ ಹೋರಾಟ ಸಮಿತಿಯ ಪದಾಧಿಕಾರಿಗಳು, ಕೊಪ್ಪಳ ಕ್ಷೇತ್ರದ ಮಾಜಿ ಸಂಸದ ಸಂಗಣ್ಣ ಕರಡಿಯವರನ್ನು ಭೇಟಿಯಾಗಿ ದರೋಜಿ-ಗಂಗಾವತಿ ನೂತನ ಬ್ರಾಡಗೇಜ್ ರೇಲ್ವೆ ಮಾರ್ಗ ರಚನೆಗಾಗಿ ರಾಜ್ಯ ಮತ್ತು ಕೇಂದ್ರದ ಅನುದಾನ ಬಿಡುಗಡೆಗಾಗಿ ಪ್ರಯತ್ನಿಸುವಂತೆ ಕೋರಿದರು. ಈ ಸಂಧರ್ಭದಲ್ಲಿ ಕಂಪ್ಲಿ ರೇಲ್ವೆ ಹೋರಾಟ ಸಮಿತಿಯ ಅಧ್ಯಕ್ಷ ಹೇಮಯ್ಯಸ್ವಾಮಿ,ಕಾರ್ಯದರ್ಶಿ ಕಾಳಿಂಗವರ್ಧನ,ಇಂಗಳಗಿ ನಾರಾಯಣಪ್ಪ,ಗಂಗಾವತಿ ನಗರಸಭೆಯ ಸದಸ್ಯ ಮನೋಹರ ಸ್ವಾಮಿ ಮುದೇನೂರ ಹಿರೇಮಠ,ಕೊಪ್ಪಳ ಜಿಲ್ಲಾ ಓಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಗಂಗಾವತಿಯ ವಾಣಿಜ್ಯೊಧ್ಯಮಿಗಳಾದ ಉಗಮರಾಜ, ಮಹಾವೀರ ಜೈನ್,ಕೆ.ವಿಶ್ವನಾಥ ಉಪಸ್ಥಿತರಿದ್ದರು.