ರಸ್ತೆ ಚರಂಡಿ ಶೌಚಾಲಯಗಳ ದುರಸ್ತಿ ಕಾಮಗಾರಿಗಳಿಗೆ ಮಂಜೂರಾತಿ ಎಂ.ಬಿ. ಘಸ್ತಿ

Sanction for repair works of road drainage toilets M.B. Ghasti

ರಸ್ತೆ ಚರಂಡಿ ಶೌಚಾಲಯಗಳ ದುರಸ್ತಿ ಕಾಮಗಾರಿಗಳಿಗೆ ಮಂಜೂರಾತಿ ಎಂ.ಬಿ. ಘಸ್ತಿ  

ಸಂಕೇಶ್ವರ 16: ದಿ 16ರಂದು ಪುರಸಭೆ ಕಾರ್ಯಾಲಯದಲ್ಲಿ ಸ್ಥಾಯಿ ಸಮಿತಿ ಚೇರಮನ್ನ ಪ್ರಮೋದ ಹೊಸಮನಿ ಇವರ ಮಾರ್ಗದರ್ಶನದಲ್ಲಿ ಸಭೆ ನಡೆಯಿತು ಪ್ರಾರಂಭದಲ್ಲಿ ನೂತನ ಸ್ಥಾಯಿ ಸಮೀತಿಯ ಅಧ್ಯಕ್ಷರಿಗೆ ಅಭಿನಂದನೆಗಳು ಸಲ್ಲಿಸುವ ಮೂಲಕ ಚರ್ಚಿಸತಕ್ಕ ವಿಷಯಗಳಿಗೆ ಚಾಲನೆ ನೀಡಿದರು.  

ಸಾರ್ವಜನಿಕ ಶೌಚಾಲಯಗಳ ದುರುಸ್ತಿ ಮಾಡಿಸುವ ಬಗ್ಗೆ ಜನನ ಮರಣ ಪ್ರಮಾಣ ಪತ್ರದ ತಿದ್ದುಪಡಿ ಹಾಗೂ ಅವಧಿ ಮೀರಿ ದಾಖಲಿಸುವ ಜನನ ಮರಣ ದಾಖಲೆಗಳ ಶುಲ್ಕ ನಿಗದಿಪಡಿಸುವುದು, ಚಾಳಕೆ ಪ್ಲಾಟದಲ್ಲಿ ಹಾಯ್ದು ಹೋಗಿರುವ ಪೈಪಲೈನ ಸ್ಥಳಾಂತರಿಸುವುದು, ವಾರ್ಡ ನಂ.21 ರ ಸಪಕಾಳ ಗಲ್ಲಿಗೆ ಹೋಗುವ ರಸ್ತೆ ಎಡಬದಿಗೆ ಸಮುದಾಯ ಶೌಚಾಲಯ ದುರುಸ್ತಿ, ಸಂಕೇಶ್ವರ ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಹಿಡಕಲ್ ಜಲಾಶಯ ಜಾಕ್ವೇಲ್‌ದಲ್ಲಿಯ ಪೆನಲ ಬೋರ್ಡ ನವೀಕರಣ ಹಾಗೂ ದುರುಸ್ತಿ ಮಾಡುವುದು, ಹರಗಾಪೂರ ಗ್ರಾಮದ ರಿಸ ನಂ. 335ಎ/1- 50 ಎಕರೆ ಜಮೀನಿಗೆ ಹೋಗಲು ಸಂಪರ್ಕ ರಸ್ತೆ ಸಲುವಾಗಿ 11ಇ ಸ್ಕೆಚ್ ತಯಾರಿಸಲು ಎ.ಡಿ.ಎಲ್‌.ಆರ್‌. ಹುಕ್ಕೇರಿ ಇವರಿಗೆ ಫೀ ಭರಣಾ ಮಾಡುವುದು ಮತ್ತು ಅದಕ್ಕೆ ಸಂಕೇಶ್ವರ ಕುರಿಗಾಹಿಗಳ ಸಲುವಾಗಿ ಮತ್ತು ಉಣ್ಣೆಯ ಉತ್ಪಾದಕ ಸಂಘದವರಿಗೆ ಸರ್ಕಾರದವರು ಮಂಜೂರಾತಿ ನೀಡಿದ ಜಮೀನಿನಲ್ಲಿ 2 ಎಕರೆ ಜಮೀನನ್ನು ಕುರುಬರ ಸಮಾಜದ ಮುಖಂಡ ಗಜಾನನ ನಿಂಗಪ್ಪಣ್ಣಾ ಕ್ವಳ್ಳಿ ಅವರು ರಸ್ತೆ ಸಂಪರ್ಕಕ್ಕೆ ಜಮೀನು ನೀಡಲು ಒಪ್ಪಿಕೊಂಡಿದ್ದಾರೆ. ಇದರಿಂದ ಕುರಿಗಾಹಿಗಳಿಗೆ ಅನುಕೂಲ ಹಾಗೂ ರಸ್ತೆ ಸಂಪರ್ಕಕ್ಕೆ ಅನುಕೂಲವೆಂದು ಈ ವಿಷಯದ ಬಗ್ಗೆ ಚರ್ಚೆ ಮಾಡಲಾಯಿತು. 

 ವಾರ್ಡ ನಂ.4 ರ ಉಪಾಧ್ಯೆ ಚಾಳದಲ್ಲಿ ಸಿಮೆಂಟ ಫೇವರ್ಸ ಮತ್ತು ವ್ಹಿ-ಶೇಪ ಚರಂಡಿ ನಿರ್ಮಿಸುವ ಬಗ್ಗೆ 25 ವರ್ಷಗಳ ನಂತರ ಈ ಅಭಿವೃದ್ಧಿಗೆ ಜೀವ ನೀಡಲಾಗಿದೆ. ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡಗಳಲ್ಲಿ ಸಣ್ಣ ಪುಟ್ಟ ರಸ್ತೆ ಮತ್ತು ಚರಂಡಿ ದುರುಸ್ತಿ ಕಾಮಗಾರಿ ಮಾಡಿಸುವುದು, ಈ ಎಲ್ಲ 14 ವಿಷಯಗಳ ಬಗ್ಗೆ ಚರ್ಚೆ ನಡೆದು ಈ ಅಭಿವೃದ್ಧಿ ಕಾಮಗಾರಿಯ ನಡೆಯಲು ಎಲ್ಲರೂ ಸರ್ವಾನುಮತದಿಂದ ಒಪ್ಪಿಗೆ ನೀಡಿದರು.  

ಜಯಗೌಡಾ ಪ್ಲಾಟದಲ್ಲಿ ಅಲ್ಲಿಯ ಜನರಿಗೆ ಮೂಲಭೂತ ಸೌಕರ್ಯಗಳಿಂದ ವಂಚಿತರಾದ ಬಗ್ಗೆ ವಿಷಯ ಸದಸ್ಯರು ಪ್ರಸ್ತಾಪಿಸಿದಾಗ ಜಯಗೌಡಾ ಪಾಟೀಲರು ಮೂಲಭೂತ ಸೌಕರ್ಯಗಳ ಶುಲ್ಕ ಸುಮಾರು 56 ಲಕ್ಷಗಳನ್ನು ರೂಪಾಯಿಗಳನ್ನು ನೀಡಿಲ್ಲ ಅವರು ಪುರಸಭೆಗೆ ನೀಡಿದ ಚೆಕ್ ಬೌನ್ಸ ಆಗಿ ಈಗ ಈ ಪ್ರಕರಣವು ನ್ಯಾಯಾಲಯದ ಹಂತದಲ್ಲಿ ಇರುವುದರಿಂದ ಇದರ ಬಗ್ಗೆ ಹೆಚ್ಚಿನ ಚರ್ಚೆ ಬೇಡ ಎಂದು ಮುಖ್ಯಾಧಿಕಾರಿ ಪ್ರಕಾಶ ಮಠದ ಮತ್ತು ಪುರಸಭೆಯ ಕಿರಿಯ ಅಭಿಯಂತ ರವೀಂದ್ರ ಗಡಾದ, ಇವರು ಸದಸ್ಯರಿಗೆ ಈ ಮಾಹಿತಿಯನ್ನು ನೀಡಿದರು, ಸ್ಥಾಯಿ ಸಮೀತಿಗೆ ಅಭಿವೃದ್ಧಿ ಕಾರ್ಯಗಳ 15 ಲಕ್ಷ ರೂಪಾಯಿಗಳ ವರೆಗೆ ಮಂಜೂರಾತಿ ನೀಡುವುದು ಮತ್ತು ಅದನ್ನು ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಮಂಡಿಸುವುದು ವಿವಿಧ ಕಾಮಗಾರಿಗಳ 30 ಲಕ್ಷ ರೂಪಾಯಿಗಳ ಮಂಜುರಾತಿಗೆ ಅಧಿಕಾರವು ಸಾಮಾನ್ಯ ಸಭೆಗೆ ಇರುತ್ತದೆ, ಸ್ಥಾಯಿ ಸಮೀತಿಯ ಈ ಎಲ್ಲ ಕಾಮಗಾರಿಗಳ ಬಗ್ಗೆ ನಡುವಳಿಗೆಗಳನ್ನು ಓದಿ ದೃಢೀಕರಿಸಿ ಇವುಗಳನ್ನು ಸಾಮಾನ್ಯ ಸಭೆಯಲ್ಲಿ ಮಂಜೂರಾತಿ ಪಡೆದುಕೊಂಡು ಈ ಎಲ್ಲ ಕಾಮಗಾರಿಗಳ ಗೊತ್ತುವಳಿ ನಿಲುವನ್ನು ಎಲ್ಲ ಸದಸ್ಯರು ಒಮ್ಮತದಿಂದ ಪಾಸ ಮಾಡಿ ಜಿಲ್ಲಾಧಿಕಾರಿಗಳ ಕಛೇರಿಗೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ಸಭೆಯಲ್ಲಿ ಹೇಳಿದರು.  

 ಸಭೆಯಲ್ಲಿ ಸ್ಥಾಯಿ ಸಮೀತಿಯ ಸದಸ್ಯರುಗಳಾದ ಗಂಗಾರಾಮ ಭೂಸಗೋಳ, ಸುಚಿತಾ ಪಿಂಟೂ ಪರೀಟ, ಸೇವಂತಾ ಕಬ್ಬೂರಿ, ಚಿದಾನಂದ ಕರ್ದನ್ನವರ, ವಿನೋದ ನಾಯಿಕ, ಇವರೆಲ್ಲರೂ ಸ್ಥಾಯಿ ಸಮೀತಿಯ ಸಭೆಯಲ್ಲಿ ಹಾಜರಿದ್ದರು. ಸ್ಥಾಯಿ ಸಮೀತಿಯ ಚೇರಮನ್ ಪ್ರಮೋದ ಹೊಸಮನಿ ಇವರು ನಗರದಲ್ಲಿ ಇರುವ ಚರಂಡಿ ದುರುಸ್ತಿ ಮತ್ತು ಶೌಚಾಲಯಗಳ ದುರುಸ್ತಿ ಇವುಗಳನ್ನು ಬೇಗನೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. 

 ಶಂಕರಲಿಂಗ ಜಾತ್ರೆಯ ಫೆಬ್ರುವರಿ ತಿಂಗಳಲ್ಲಿ ಜರುಗುವುದು ಬೇಗನೆ ಈ ಕಾಮಗಾರಿಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಅಧಿಕಾರಿಗಳಿಗೆ ಪುನರುಚ್ಛರಿಸಿದರು.