ಲೋಕದರ್ಶನ ವರದಿ
ಗದಗ 25: ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನು ಒಂದೇ ಸೂರಿನಡಿ ಮಾರಾಟ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಇಲ್ಲಿಯ ಎಪಿಎಂ.ಸಿ. ಯಾರ್ಡನಲ್ಲಿರುವ ಸ್ವಾಮಿ ವಿವೇಕಾನಂದ ಸಭಾಗೃಹದಲ್ಲಿ ಜಿಲ್ಲಾ ಗಣೇಶ ಮೂತರ್ಿ ತಯಾರಕರ ಸಂಘ ವ್ಯವಸ್ಥೆ ಮಾಡಿದೆ.
ಕಳೆದ ವರ್ಷ ಗಣೇಶ ಮೂತರ್ಿಗಳನ್ನು ಮಾರಾಟ ಮಾಡಲು ಸಂಭಾಪೂರ ರಸ್ತೆಯಲ್ಲಿರುವ ಅಗ್ನಿಶಾಮಕ ದಳದ ಕಚೇರಿ ಪಕ್ಕದಲ್ಲಿ ಮಾಡಲಾಗಿತ್ತು.
ಈ ಬಾರಿ ಸ್ವಾಮಿ ವಿವೇಕಾನಂದ ಸಭಾಗೃಹದಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ಬದಲಾವಣೆಯನ್ನು ಸಾರ್ವಜನಿಕರು ಗಮನಿಸುವಂತೆ ಜಿಲ್ಲಾ ಗಣೇಶ ಮೂತರ್ಿ ತಯಾರಕರ ಸಂಘದ ಪ್ರಧಾನ ಕಾರ್ಯದರ್ಶಿ ಮುತ್ತಣ್ಣ ಭರಡಿ ಕೋರಿದ್ದಾರೆ.