ದೇಶಕ್ಕಾಗಿ ಪ್ರಾಣತೆತ್ತವರ ಬಲಿದಾನ ಸ್ಮರಣೀಯ : ಮಾಜಿಸಂಸದ
ಶಿರಹಟ್ಟಿ 16 : ದೇಶಕ್ಕಾಗಿ ಪ್ರಾಣತೆತ್ತವರ ಬಲಿದಾನ ಸದಾ ಸ್ಮರಣೀಯವಾಗಿದ್ದು, ಪಟ್ಟಣದ ಹುತಾತ್ಮ ಯೋಧ ಮಹ್ಮದ್ ಶಬ್ಬೀರ ಅಂಗಡಿ ಸ್ಮರಣಾರ್ಥ ಸ್ಮಾರಕ ನಿರ್ಮಿಸುವ ಮೂಲಕ ಪಟ್ಟಣದ ಜನತೆ ಹಾಗೂ ಆತನ ಕುಟುಂಬಸ್ಥರ ಬಹುದಿನಗಳ ಕನಸು ನನಸಾಗಿದೆ ಎಂದು ಮಾಜಿ ಸಂಸದ ಐ.ಜಿ. ಸನದಿ ಹೇಳಿದರು.
ಪಟ್ಟಣದ ಶಬ್ಬೀರ ನಗರದಲ್ಲಿ ನೂತನವಾಗಿ ನಿರ್ಮಿಸಿದ ಸ್ಮಾರಕ ಲೋಕಾರೆ್ಣ ಮಾಡಿ ಅವರು ಮಾತನಾಡಿ, ಪಟ್ಟಣದ ಉತ್ಸಾಹಿ ತರುಣ ಮಹ್ಮದ್ ಶಬ್ಬೀರ ಅಂಗಡಿ ದೇಶ ಸೇವೆ ಮಾಡುವ ಛಲ ತೊಟ್ಟು ಬಿಎಸಎಫ್ ಸೇರಿದ್ದನು. ಆದರೆ ದುರ್ದೈವವಶಾತ್ 2002 ರಲ್ಲಿ ಓರಿಸ್ಸಾ ರಾಜ್ಯದ ರಾಯಗಡ್ ಜಿಲ್ಲೆಯ ಕಥಾಲಪದರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಶಂಕಿತ ನಕ್ಸಲೀಯರು ಅಡಗಿಸಿಟ್ಟ ನೆಲಬಾಂಬ್ ಸ್ಪೋಟಕ್ಕೆ ಬಲಿಯಾಗಿ ಪ್ರಾಣತೆತ್ತಿದ್ದು ಮರೆಯಲಾಗದ ಘಟನೆ, ದೇಶರಕ್ಷಣೆಯಲ್ಲಿ ಜೀವತೆತ್ತು ಪ್ರಾಣತ್ಯಾಗ ಮಾಡಿದ ಮಹ್ಮದ್ ಶಬ್ಬೀರನ ವೀರ ಸಾಹಸ ಮೆಚ್ಚುವಂಥದು ಅಂಥವನ ಸ್ಮರಣೆಯ ನೆನಪಿಗಾಗಿ ಸ್ಥಳೀಯ ಸಮಾಜ ಸೇವಕಿ ಶೀಲಾ ಕುಟುಂಬ ಪರಿವಾರ ಮತ್ತು ಅಭಿಮಾನಿಗಳು ಸ್ಮಾರಕ ನಿರ್ಮಿಸಿರುವ ಕಾರ್ಯ ಅಭಿಮಾನದ ಸಂಗತಿ ಎಂದರು.
ಬೆಂಗಳೂರ ಸಿಆರ್‌ಪಿಎಫ್ ನ ಎಸ್‌ಐ. ಮಂಜುನಾಥ ಹಾಗೂ ಪಪಂ.ಮಾಜಿ ಅಧ್ಯಕ್ಷ ಎಚ್.ಡಿ. ಮಾಗಡಿ ಮಾತನಾಡಿ, ದೇಶ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ನಾನೇನು ಮಾಡಬೇಕೆಂಬ ಸದ್ವಿಚಾರ ಯುವಕರಲ್ಲಿ ಒಡಮೂಡಬೇಕು. ಈ ನಿಟ್ಟಿನಲ್ಲಿ ಬಿಎಸ್‌ಎಫ್ ಯೋಧನಾಗಿ ಸೈನ್ಯಕ್ಕೆ ಸೇರಿದ ಮಹ್ಮದ್ ಶಬ್ಬೀರ ದೇಶರಕ್ಷಣೆ ವೇಳೆ ಬಾಂಬ್‌ದಾಳಿಗೆ ಬಲಿಯಾಗಿ ವೀರಯೋಧನ ಸಾಲಿಗೆ ಸೇರಿರುವುದು ಆತನ ಕುಟುಂಬ ಮತ್ತು ಪಟ್ಟಣಕ್ಕೆ ಕಳಶಪ್ರಾಯವಾಗಿದೆ ಎಂದರು.
ಇದೇ ವೇಳೆ ಮಹ್ಮದ್ ಶಬ್ಬೀರ ಕುಟುಂಬದ ಪರವಾಗಿ ಸ್ಮಾರಕ ನಿರ್ಮಾಣಕ್ಕೆ ಮುಂದಾಗ ಶೀಲಾ ಪಾಟೀಲ ಪರಿವಾರ ಮತ್ತು ಸ್ವಾಭಿಮಾನಿ ಬಳಗದವರನ್ನು ಸನ್ಮಾನಿಸಲಾಯಿತು.
ಪಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ, ಸದಸ್ಯ ಪರಮೇಶ ಪರಬ, ರವಿ ಗುಡಿಮನಿ, ಕೆ.ಎ.ಬಳಿಗೇರ, ನಿವೃತ್ತ ಯೋಧ ಅಮ್ಜದ್ ಹೆಸರೂರ, ಮುತ್ತುರಾಜ ಭಾವಿಮನಿ, ಅಕ್ಬರ ಯಾದಗೀರ, ಗೂಡುಸಾಬ ಅಂಗಡಿ, ಜೈಬುನ್ನಿಸಾ ಅಂಗಡಿ, ಅಲ್ತಾಫ ಅಂಗಡಿ, ಭೂಪಾಲ ಆಲೂರ, ರವೀಂದ್ರನಾಥ ಪಾಟೀಲ, ಶೀಲಾ ಪಾಟೀಲ, ಶಶಿಧರ ಪಾಟೀಲ, ಜಾವೇದ ಶಿಗ್ಲಿ, ಗೌಸ್ ಕರ್ಣಿ, ಇಂತಿಯಾಜ್ ಶಿಗ್ಲಿ, ಅಬ್ದುಲ್‌ಖಾದರ ಜಿಲಾನಿ, ಮೌಲಾಲಿ ಢಾಲಾಯತ್ ಇತರರಿದ್ದರು. ಕಾರ್ಯಕ್ರಮ ನಿರ್ವಹಿಸಿದರು.