ಎಸ್ಕೆ ಮೋದಿ ಶಾಲೆಗೆ ದಶಕದ ಸಂಭ್ರಮ: ಜನತೆಗೆ ಪರಿಸರ ಸಂರಕ್ಷಣೆಯ ಜಾಗೃತಿ

SK Modi School celebrates decade: Awareness of environmental protection among the people

ಎಸ್ಕೆ ಮೋದಿ ಶಾಲೆಗೆ ದಶಕದ ಸಂಭ್ರಮ: ಜನತೆಗೆ ಪರಿಸರ ಸಂರಕ್ಷಣೆಯ ಜಾಗೃತಿ 

ಬಳ್ಳಾರಿ ನಗರದ ಪ್ರತಿಷ್ಠಿಗ್ಪಿ ವೀರಶೈವ ವಿದ್ಯಾವರ್ಧಕ ಸಂಘದ- ಎಸ್ಕೆ ಮೋದಿ ನ್ಯಾಷನ ಶಾಲೆಯ ವತಿಯಿಂದ ದಿನಾಂಕ 9 ಮಾರ್ಚ 2025 ಭಾನುವಾರದಂದು ಮ್ಯಾರಥನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಎಸ್ಕೆ ಮೋದಿ ಶಾಲೆಯ ದಶಕದ ಸಂಭ್ರಮದ ನಿಮಿತ್ತ ಈ ಕಾರ್ಯಕ್ರಮವನ್ನು ಬಳ್ಳಾರಿಯ ಶ್ರೀಕನಕದುರ್ಗಮ್ಮ ದೇವಸ್ಥಾನದಿಂದ ಪ್ರಾರಂಭಿಸಲಾಯಿತು. ಈ ಒಂದು ಕಾರ್ಯಕ್ರಮದಲ್ಲಿ ಎಸ್ಕೆ ಮೋದಿ ಶಾಲೆಯ ಮಕ್ಕಳು, ಪೋಷಕರು ಹಾಗೂ ಶಾಲಾ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾದರು.  ಮ್ಯಾರಥಾನ್ ಓಟವು ಬಳ್ಳಾರಿಯ ಕನಕದುರ್ಗಮ್ಮದೇವಸ್ಥಾನದಿಂದ ಪ್ರಾರಂಭವಾಗಿ ರಾಯಲ ವೃತ್ತವಾರ್ಗವಾಗಿ ಮೋತಿವೃತ್ತದವರೆಗೆ ತಲುಪಿ ಅಲ್ಲಿಂದ ಪುನಃದೇವಸ್ಥಾನದ ಬಳಿ ಅಂತ್ಯಗೊಂಡಿತು. ಈ ಒಂದು ಕಾರ್ಯಕ್ರಮವು ಬಳ್ಳಾರಿಯ ನಗರದ ಪೊಲೀಸ್ ಇಲಾಖೆಯ ಜೊತೆಗೆ ನಡೆಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಳ್ಳಾರಿವಲಯ ಐಜಿಪಿ ಲೋಕೇಶ ಜಿಲ್ಲಾ ಪೋಲಿಸ್ವರಿಷ್ಠಾಧೀಕಾರಿ ಡಾ. ಶೋಭಾರಣಿ ಅವರು ಚಾಲನೆ ನೀಡಿದರು. ಎಸ್‌.ಕೆ ಮೋದಿ ಶಾಲೆಯ ಅಧ್ಯಕ್ಷರಾದ ಏಳು ಬೇಂಚಿ ರಾಜಶೇಖರ ಹಾಗೂ ಶಾಲೆಯ ಪ್ರಾಂಶುಪಾಲರಾದ ಸುನಂದ ಎಂ ಪಾಟೀಲ್ ಇವರು ಕಾರ್ಯಕ್ರಮವನ್ನು ಆಯೋಜಿಸಿದ್ದಷ್ಟೇ ಅಲ್ಲದೆ ಕಾರ್ಯಕ್ರಮದಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಮಕ್ಕಳನ್ನು ಪ್ರೋತ್ಸಾಹಿಸಿದರು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಹಸಿರನ್ನು ಉಳಿಸಿ ಹಸಿರನ್ನು ಬೆಳೆಸಿ ಹಾಗೂ ಪ್ಲಾಸ್ಟಿಕ್ಮುಕ್ತ ಸಮಾಜವು ನಮ್ಮೆಲ್ಲರ ಕರ್ತವ್ಯ ಎಂಬ ಧ್ಯೇಯವಾಕ್ಯವನ್ನು ಮುಂದಿಟ್ಟುಕೊಂಡು ಎಸ್ಕೆ ಮೋದಿ ನ್ಯಾಷನ ಶಾಲೆಯು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಮಾಜದ ಜನತೆಗೆ ಪರಿಸರ ಸಂರಕ್ಷಣೆಯ ಅಗತ್ಯತೆ ಪರಿಸರ ಸಂರಕ್ಷಣೆಯ ಅವಶ್ಯಕತೆ ಏನಿದೆ ಎಂಬುದನ್ನು ತಿಳಿಸುವ ಉದ್ದೇಶದಿಂದ ಶಾಲೆಯು ಈ ಒಂದು ಉತ್ತಮ ಕಾರ್ಯಕ್ರಮವನ್ನು ಆಯೋಜಿಸಿ ಜನರಲ್ಲಿ ಜಾಗೃತಿಯನ್ನು ಮೂಡಿಸಿತು.