ರುದ್ರಣ್ಣ ಗುಳಗುಳಿಗೆ ಸುವರ್ಣಶ್ರೀ ಪ್ರಶಸ್ತಿ ಪ್ರದಾನ

ಲೋಕದರ್ಶನ ವರದಿ

ಗದಗ 19: ಬೆಂಗಳೂರಿನ ಸುವರ್ಣಮುಖಿ ಸಂಸ್ಕೃತಿಧಾಮದ 4 ನೇ ವಾಷರ್ಿಕೋತ್ಸವದಲ್ಲಿ ಸಂಸ್ಕೃತಿಧಾಮದ ಸಂಸ್ಥಾಪಕ ಆಚಾರ್ಯ ಡಾ. ಅಮೇರಿಕಾ ನಾಗರಾಜ  ಅವರು ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷರಾದ ರುದ್ರಣ್ಣ ಗುಳಗುಳಿ ಅವರಿಗೆ ಸುವರ್ಣಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.  

ಈ ಸಂದರ್ಭದಲ್ಲಿ ಬಾಗಲಕೋಟೆ ರಾಮರೂಡ ಬ್ರಹ್ಮವಿದ್ಯಾಶ್ರಮದ ಪೂಜ್ಯಶ್ರೀ ಪರಮ ರಾಮರೂಢ ಮಹಾಸ್ವಾಮಿಗಳು, ರಾಮೋಹಳ್ಳಿ ರಾಮಕೃಷ್ಣ ಯೋಗಾಶ್ರಮದ ಯೋಗೇಶ್ವರಾನಂದ ಸ್ವಾಮಿಗಳು, ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠ ಕಬ್ಬಳಿಯ ಶಿವಪುತ್ರನಾಥ ಸ್ವಾಮಿಗಳು, ಮುಧೋಳದ ಚಿನ್ಮಯಾನಂದ ಸ್ವಾಮೀಜಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.