ಬಳ್ಳಾರಿ27: ದಾಖಲೆ ಇಲ್ಲದೆ ಕೆಎಸ್ಆರ್ಟಿಸಿ ಬಸ್ನಲ್ಲಿ ಹಣ ಸಾಗಿಸುತ್ತಿದ್ದ 11,05,200 ರೂ.ಗಳನ್ನು (ಹನ್ನೊಂದು ಲಕ್ಷ ಐದು ಸಾವಿರ ಎರಡುನೂರು ರೂ.ಗಳು) ಶುಕ್ರವಾರ ರಾತ್ರಿ ವಶಪಡಿಸಿಕೊಳ್ಳಲಾಗಿದೆ.
ಮರಿಯಮ್ಮನಳ್ಳಿಯ ಜಿಟಿಟಿಸಿ ಬಳಿ ಸ್ಥಾಪಿಸಲಾಗಿರುವ ಸ್ಥಿರ ಕಣ್ಗಾವಲು ಪಡೆ(ಎಸ್ಎಸ್ಟಿ) ಚೆಕ್ ಪೋಸ್ಟ್ ಬಳಿ ದಾವಣಗೆರೆಯಿಂದ ಸೋಲಾಪುರಕ್ಕೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ವಾಹನವಾದ (ಕೆಎ-17,ಎಫ್-1673) ನಲ್ಲಿ ಸ್ಥಿರ ಕಣ್ಗಾವಲು ಪಡೆಯ ಸಿಬ್ಬಂದಿ ಪರಿಶೀಲಿಸುವ ಸಂದರ್ಭದಲ್ಲಿ ಈ ಹಣ ಪತ್ತೆಯಾಗಿದ್ದು, ಈ ಕುರಿತು ವಿಚಾರಿಸಲಾಗಿ ಸಮಂಜಸವಾದ ದಾಖಲೆ ನೀಡದ ಪ್ರಯುಕ್ತ ವಶಪಡಿಸಿಕೊಂಡು ಹಗರಿಬೊಮ್ಮನಹಳ್ಳಿ ಖಜಾನೆಯಲ್ಲಿಡಲಾಗಿದೆ.
ಈ ಹಣವು ಜೂಟುರು ಹನುಮೇಶ ಕುವೆಂಪು ಬಡಾವಣೆ ಗಂಗಾವತಿ (ಶ್ರೀ ರಾಮಾಂಜನೇಯ ಕಮಷರ್ಿಯಲ್ ಕಾಪರ್ೊರೇಷನ್ ಸಿ.ಬಿ.ಎಸ್ ಗಂಜ್ ಆರ್.ಜಿ ರಸ್ತೆ ಅಂಗಡಿ ಮಾಲೀಕ) ಎಂಬುವವರಿಗೆ ಸೇರಿದ್ದಾಗಿದೆ.
ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಜಹೀರ್ ಅಬ್ಬಾಸ್, ತಾಲೂಕು ನೋಡಲ್ ಅಧಿಕಾರಿ ರಾಜಪ್ಪ, ತಹಸೀಲ್ದಾರ್ ರೆಹಮಾನ್ಪಾಶಾ, ಎಂಸಿಸಿ ನೋಡಲ್ ಅಧಿಕಾರಿ ವಿಶ್ವನಾಥ ಮತ್ತು ಈಖಣ &ಖಖಖಿ ಸಿಬ್ಬಂದಿ ಇದ್ದರು.