ಕಾರವಾರ 28: ನಗರದಲ್ಲಿ ರೋಟರಿ ಕ್ಲಬ್ ಪ್ರಾರಂಭವಾಗಿ 59 ವರ್ಷಗಳಾಗಿದ್ದು, ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಘಟಕ ಸ್ಥಾಪಿಸುವುದರ ಮೂಲಕ ಸಾಮಾಜಿಕ ನೆರವಿಗೆ ಮುಂದಾಗಿದೆ. ಸಕರ್ಾರಿ ಶಾಲೆಗಳಿಗೆ ಸಣ್ಣಪುಟ್ಟ ನೆರವು ನೀಡುವ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ರೋಟರಿ ತೊಡಗಿಸಿಕೊಂಡಿದೆ. ಆ ಮೂಲಕ ತನ್ನ ಸಾಮಾಜಿಕ ಜವಾಬ್ದಾರಿಯನ್ನು ತಕ್ಕಮಟ್ಟಿಗೆ ನಿರ್ವಹಿಸುತ್ತಿದೆ ಎಂದು ರೋಟರಿ ಸದಸ್ಯ ಕೃಷ್ಣಾನಂದ ಬಾಂದೇಕರ್ ಹೇಳಿದರು.
ಅವರು ಇಲ್ಲಿನ ಜಿಲ್ಲಾ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ರೋಟರಿ ಇಂಟರನ್ಯಾಶನಲ್ ಅಸ್ತಿತ್ವಕ್ಕೆ ಬಂದು ಸುಮಾರು 114 ವರ್ಷಗಳಾಗಿದೆ. ಇದು ವಿಶ್ವಸಂಸ್ಥೆ ಗುರುತಿಸಿದ ಮೊದಲ ಸಾಮಾಜಿಕ ಸೇವಾ ಸಂಸ್ಥೆಯಾಗಿದೆ. ಅದರಂತೆ ಕಾರವಾರದಲ್ಲೂ ಸಹ ಅನೇಕ ಸಾಮಾಜಿಕ ಜವಾಬ್ದಾರಿಯನ್ನು ರೋಟರಿ ಈ ಹಿಂದಿನಿಂದಲೂ ನಿರ್ವಹಿಸುತ್ತಿದೆ. ಪಲ್ಸ್ ಪೋಲಿಯೊ ಕಾರ್ಯಕ್ರಮವಲ್ಲದೇ ರೋಟರಿ ಅಂಬುಲೆನ್ಸ್ ಸೇವೆಗೆ ಸುಮಾರು ಎರಡು ದಶಕಕ್ಕೂ ಹೆಚ್ಚು ಸೇವೆಯ ಇತಿಹಾಸವಿದೆ. ಜನರ ಆರೋಗ್ಯಕ್ಕಾಗಿ, ಪರಿಸರಕ್ಕಾಗಿ, ವಿದ್ಯಾಥರ್ಿಗಳಿಗಾಗಿ, ವಿಕಲಚೇತನರಿಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಕಾರವಾರ ರೋಟರಿ ಕ್ಲಬ್ಗೆ ರೋಟರಿ ಜಿಲ್ಲಾ 3170ದಲ್ಲಿ ಗೌರವ ಸ್ಥಾನವನ್ನು ಪಡೆದಿದೆ ಎಂದರು.
ಕಳೆದ ವರ್ಷ ರೋಟರಿಯ ಅಧ್ಯಕ್ಷ ರಾಜೇಶ ವೆಣರ್ೇಕರ್ ಅವರ ಅವಧಿಯಲ್ಲಿ ನಗರದ ಗ್ರೀನ್ ಸ್ಟ್ರೀಟ್ ಉದ್ದಕ್ಕೂ ಹಸಿರು ಗಿಡಗಳನ್ನು ನೆಡಲಾಗಿತ್ತು. ಆಥರ್ಿಕವಾಗಿ ಹಿಂದುಳಿದ ಆಯ್ದ ಸುಮಾರು ಮುನ್ನೂರಕ್ಕೂ ಹೆಚ್ಚು ಬಡ ವಿದ್ಯಾಥರ್ಿಗಳಿಗೆ ಸ್ಕೂಲ್ ಬ್ಯಾಗ್, ಡ್ರೆಸ್, ಬೆಡ್ಶೀಟ್, ಬ್ಲಾಂಕೇಟ್, ರೆನ್ಕೋಟ್ ಇತ್ಯಾದಿ ಅಗತ್ಯ ಪರಿಕರಗಳನ್ನು ಓದಗಿಸಲಾಗಿತ್ತು. ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿ ದಿನನಿತ್ಯವು ಬಸ್ನಲ್ಲಿ ಸಂಚರಿಸುವ ಸಾವಿರಾರು ಜನರಿಗೆ ವಿಶೇಷವಾಗಿ ವಿದ್ಯಾಥರ್ಿಗಳಿಗೆ, ಗ್ರಾಮೀಣ ಮಹಿಳೆಯರಿಗೆ, ವಿಕಲಚೇತನರಿಗೆ ಅನುಕೂಲ ಕಲ್ಪಿಸಲು ಯೋಜಿಸಲಾಗಿತ್ತು. ಅದರಂತೆ ನ.30 ರಂದು ನಗರದ ಬಸ್ ನಿಲ್ದಾಣದಲ್ಲಿ ಕುಡಿಯುವ ಶುದ್ಧ ನೀರಿನ ಘಟಕ ಲೋಕಾರ್ಪಣೆಗೊಳ್ಳಲಿದೆ. ಈ ಘಟಕವನ್ನು ವಾಯುವ್ಯ ಕನರ್ಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಸುದರ್ಶನ ಹೆಬ್ಬಾಳ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಉಪಪ್ರಾಂತಪಾಲ ರೋ.ವಿನಾಯಕ ಶಾನಭಾಗ ಬಾಳೇರಿ ಹಾಗೂ ಡಿಪೋ ವ್ಯವಸ್ಥಾಪಕ ತುಷಾರ ಎಚ್.ಸಿ ಪಾಲ್ಗೊಳ್ಳಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಅನಮೋಲ್ ರೇವಣಕರ್, ಸದಸ್ಯರಾದ ಅಮರನಾಥ ಶೆಟ್ಟಿ,, ದಿಲೀಪ್ ವೆಣರ್ೇಕರ್ ಉಪಸ್ಥಿತರಿದ್ದರು.