ಗುಲಾಬಿ ಟೆಸ್ಟ್: ಪಂತ್, ಗಿಲ್ ತಂಡದಿಂದ ಬಿಡುಗಡೆ, ಭರತ್ ಗೆ ಅವಕಾಶ

ನವದೆಹಲಿ, 23 ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದ ರಿಷಭ್ ಪಂತ್ ಹಾಗೂ ಶುಭ್ ಮನ್ ಗಿಲ್ ಅವರನ್ನು ಕೈ ಬಿಡಲಾಗಿದ್ದು, ಸೈಯದ್ ಮುಷ್ತಾಕ್ ಅಲಿ ಟಿ- 20 ಕ್ರಿಕೆಟ್ ಟೂನರ್ಿಯಲ್ಲಿ ತಮ್ಮ ರಾಜ್ಯದ ಪರ ಆಡಲು ಅನುವುಮಾಡಿಕೊಟ್ಟಿದೆ.     ವಿಕೆಟ್ ಕೀಪರ್ ವೃದ್ಧಮನ್ ಸಹಾ ಅವರ ಜೊತೆ ಎರಡನೇ ವಿಕೆಟ್ ಕೀಪರ್ ಆಗಿ ಕೋನ್ ಶ್ರೀಕರ್ ಭರತ್ ಅವರ ಹೆಸರನ್ನು ಸೂಚಿಸಲಾಗಿದೆ.     ಪಂತ್, ಅವರು ವಿಂಡೀಸ್ ವಿರುದ್ಧದ ಟಿ-20 ಸರಣಿಗೂ ಮುನ್ನ ಡೆಲ್ಲಿ ತಂಡದ ಪರ ಎರಡು ಪಂದ್ಯಗಳನ್ನು ಆಡಲಿದ್ದಾರೆ. ಇವರು ಹರಿಯಾಣ, ರಾಜಸ್ಥಾನ ವಿರುದ್ಧ ನ.24 ಹಾಗೂ ನ.27 ರಂದು ಅಂಗಳ ಪ್ರವೇಶಿಸಲಿದ್ದಾರೆ.     ಗಿಲ್ ಸಹ ಪಂಜಾಬ್ ಪರ ಕನರ್ಾಟಕ (ನ.24) ಹಾಗೂ ತಮಿಳುನಾಡು (ನ.25) ವಿರುದ್ಧದ ಪಂದ್ಯಕ್ಕೆ ಲಭ್ಯರಿದ್ದಾರೆ.     ಭರತ್ ಅವರು ದೇಶಿಯ ಟೂನರ್ಿಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದು, 3909 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 8 ಶತಕ ಹಾಗೂ 20 ಅರ್ಧಶತಕ ಸೇರಿವೆ.     ಈ ಬಗ್ಗೆ ಮಾತನಾಡಿರುವ ಭರತ, ದುಲೀಪ್ ಟ್ರೋಫಿ ವೇಳೆ ಗುಲಾಬಿ ಚೆಂಡಿನಲ್ಲಿ ಆಡಿದ ಅನುಭವವಿದೆ. ವಿರಾಟ್ ಕೊಹ್ಲಿ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವ ಕನಸು ಕಂಡಿದ್ದೆ. ಇಂದು ಬೆಳಗ್ಗೆ ತಂಡ ಸೇರುವಂತೆ ಕರೆ ಬಂದಿದ್ದು ಸಂತಸ ತಂದಿದೆ ಎಂದಿದ್ದಾರೆ.