ಕರ್ಜಗಿಯಲ್ಲಿ ರೋಜಗಾರ್ ದಿನ ಆಚರಣೆ

Rojagar Day celebration in Karjagi

ಕರ್ಜಗಿಯಲ್ಲಿ ರೋಜಗಾರ್ ದಿನ ಆಚರಣೆ 

ಕಾರವಾರ 13: ಸಿದ್ದಾಪುರ ತಾಲೂಕಿನ ಹಸರಗೋಡ ಗ್ರಾಮ ಪಂಚಾಯತ್‌ನ ಕರ್ಜಗಿ ಗ್ರಾಮದಲ್ಲಿ ಗುರುವಾರ "ರೋಜಗಾರ್ ದಿನ" ಆಚರಿಸಿ ಕೂಲಿಕಾರರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಸಿಗುವ ವೈಯಕ್ತಿಕ ಹಾಗೂ ಸಾಮೂದಾಯಿಕ ಕಾಮಗಾರಿಗಳ ಕುರಿತು ಮಾಹಿತಿಯನ್ನು ನೀಡಲಾಯಿತು. 

ನರೇಗಾ ಸಹಾಯಕ ನಿರ್ದೇಶಕ ಹರ್ಷ ರಾಥೋಡ್ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಪಡೆಯುವುದು ನಿಮ್ಮ ಹಕ್ಕು. ಹಾಗಾಗಿ ಈ ಯೋಜನೆಯಡಿ ನಿಮ್ಮ ಗ್ರಾಮವನ್ನು ಅಭಿವೃದ್ಧಿಪಡಿಸಿಕೊಳ್ಳಿ ಎಂದು ಕೂಲಿಕಾರರಿಗೆ ಕರೆ ನೀಡಿದರು.  

ಇನ್ನೂ ಗ್ರಾಮೀಣ ಪ್ರದೇಶದ ಕುಟುಂಬಕ್ಕೆ ವರ್ಷದಲ್ಲಿ 100 ದಿನಗಳ ಕೆಲಸ ಖಾತರಿ, ಗಂಡು-ಹೆಣ್ಣಿಗೆ ಸಮಾನ ಕೂಲಿ, ಪ್ರತಿ ದಿನಕ್ಕೆ 349ರೂ, ಒಂದು ದಿನದ ಕೂಲಿ ಪಡೆಯಲು ಮಾಡಬೇಕಾದ ಕೆಲಸದ ಪ್ರಮಾಣ ಮತ್ತು ಕೆಲಸದ ಅವಧಿ, ಕಾಮಗಾರಿ ಪ್ರಮಾಣದಲ್ಲಿ ಹಿರಿಯ ನಾಗರಿಗರಿಗೆ ಮತ್ತು ವಿಶೇಷ ಚೇತನರಿಗೆ ಶೇ. 50 ರಷ್ಟು ರಿಯಾಯಿತಿ. ಕಾಮಗಾರಿ ಸ್ಥಳದಲ್ಲಿ ಒದಗಿಸಬೇಕಾದ ಸೌಲಭ್ಯಗಳು ಹಾಗೂ ಇತರೆ ವಿಷಯಗಳ ಕುರಿತು ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮಂಜುನಾಥ್ ನಾಯ್ಕ, ಸಿಬ್ಬಂದಿ ಅಭಿಜಿತ್ ನಾಯ್ಕ, ತಾಲೂಕು ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ ಹಾಜರಿದ್ದರು.