ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವೆ: ಶಶೀಲ್ ಜಿ ನಮೋಶಿ

Responding to Teacher Issues: Shasheel G Namoshi

ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವೆ: ಶಶೀಲ್ ಜಿ ನಮೋಶಿ 

ಹೂವಿನ ಹಡಗಲಿ 02:  ಪ್ರೌಢಶಾಲಾ ಸರ್ಕಾರಿ ಅನುದಾನಿತ ಶಿಕ್ಷಕರ ಸಮಸ್ಯೆಗಳಿಗೆ ಸದಾ ಸ್ಪಂದಿಸುವುದಾಗಿ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಹೇಳಿದರು.ಪಟ್ಟಣದ ಸೊಪ್ಪಿನ ಕಾಳಮ್ಮ ಬಾಲಕಿಯರ ಪ್ರೌಢಶಾಲೆಯಲ್ಲಿ ಬುಧವಾರ ಜಿಲ್ಲಾ ಹಾಗೂ ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಅವರು ಮಾತನಾಡಿದರು.  

ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಎನ್ ಜಿ ಮನೋಹರ್  ಶಿಕ್ಷಕರ ವಿವಿಧ ಸಮಸ್ಯೆಗಳ ಕುರಿತು ಶಾಸಕರಿಗೆ ಮನವರಿಕೆ ಮಾಡಿಕೊಟ್ಟರು.ಸಂಘಟನೆಯ ಪ್ರತಿನಿಧಿಗಳು ಹಾಗೂ ಸಹ ಶಿಕ್ಷಕರು ತಮಗಾಗುತ್ತಿರುವ ಮಾನಸಿಕ ಒತ್ತಡಗಳ ಕುರಿತು ಮಾಹಿತಿ ಹಂಚಿಕೊಂಡರು.ತಮ್ಮ ಬೇಡಿಕೆ ಹಾಗೂ ಸಮಸ್ಯೆಗಳನ್ನು ಆಯುಕ್ತರು ಹಾಗೂ ಶಿಕ್ಷಣ ಸಚಿವರ ಜೊತೆ ಈ ಹಿಂದೆ ಕೂಡ ಚರ್ಚಿಸಿದೆ. ಮತ್ತೊಂದು ಬಾರಿ ಈ ಬಗ್ಗೆ ಗಮನ ಸೆಳೆಯಲಾಗುವುದು. ಜಿಲ್ಲಾ ಹಂತದ ಪದಾಧಿಕಾರಿಗಳ ಜೊತೆ ಮಾನ್ಯ ಆಯುಕ್ತರ ಸಭೆಯನ್ನು ಕೂಡ ನಿಗದಿ ಮಾಡುವ ಭರವಸೆ ನೀಡಿದರು.ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ ಶಿವಲಿಂಗಪ್ಪ, ಕೋಶಾಧ್ಯಕ್ಷ ಬಸಪ್ಪ ಕೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ವಿ ಬಿ ಜಗದೀಶ್, ಸರ್ಕಾರಿ ನೌಕರರ ಸಂಘದ ನೂತನ ನಿರ್ದೇಶಕರಾದ ಗಡ್ಡಿ ಶಿವಕುಮಾರ್, ಜಗದೀಶ್ ಜಿ,ಪಿಯುಸಿ ಉಪನ್ಯಾಸಕರ ಸಂಘದ ಅಧ್ಯಕ್ಷ ಬಸೆಟ್ಟಿ ಪ್ರಕಾಶ್, ಸಹ ಶಿಕ್ಷಕರ ಸಂಘದ ನಿರ್ದೇಶಕರಾದ ಎಚ್ ಕಾಂತೇಶ್, ಎಲ್ ಖಾದರಬಾಷಾ, ಉಪ ಪ್ರಾಂಶುಪಾಲ ರವೀಂದ್ರನಾಥ ಬಿ, ರಾಮಪ್ಪ ಕೋಟಿಹಾಳ ಸುಂಕದ ಬಸವರಾಜ ಇತರರು ಉಪಸ್ಥಿತರಿದ್ದರು.ಎಸ್ಸೆಸ್ಸೆಲ್ಸಿ ಗುಂಪು ಅಧ್ಯಯನ ವೀಕ್ಷಣೆ: ಇದೇ ವೇಳೆ ಎಸ್ ಕೆ ಜಿ ಜಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರ ಗುಂಪು ಅಧ್ಯಯನ ವೀಕ್ಷಿಸಿ ಸೂಕ್ತ ಮಾರ್ಗದರ್ಶನ ನೀಡಿದರು.ಪ್ರೌಢಶಾಲೆಯ ಶಿಕ್ಷಕರು ಹಾಜರಿದ್ದರು.