ಬಜೆಟ್‌ನಲ್ಲಿ ಕೊಳಗೇರಿಗಳ ಅಭಿವೃದ್ಧಿಗೆ 5 ಸಾವಿರ ಕೋಟಿ ಅನುದಾನ ಮೀಸಲಿಡಲು ಆಗ್ರಹಿಸಿ ಮನವಿ

Request to allocate 5 thousand crores in the budget for the development of slums

ಬಜೆಟ್‌ನಲ್ಲಿ ಕೊಳಗೇರಿಗಳ ಅಭಿವೃದ್ಧಿಗೆ 5 ಸಾವಿರ ಕೋಟಿ ಅನುದಾನ ಮೀಸಲಿಡಲು ಆಗ್ರಹಿಸಿ ಮನವಿ 

ಗದಗ 13: ರಾಜ್ಯ ಸರ್ಕಾರದ ಬಜೇಟ್ ಪೂರ್ವಭಾವಿಯಾಗಿ ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಮಿತಿಯಿಂದ ವಿಕಾಸ ಸೌಧದಲ್ಲಿರುವ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಅವರಿಗೆ ಮನವಿ ನೀಡಿ ಈ ಬಾರಿ ಸರ್ಕಾರದ ಬಜೇಟ್ ನಲ್ಲಿ ರಾಜ್ಯದ ಕೊಳಗೇರಿಗೆ ಅಭಿವೃದ್ಧಿಗಾಗಿ 5 ಸಾವಿರ ಕೋಟಿ ಅನುದಾನ ಮೀಸಲಿಡಬೇಕೆಂದು ಆಗ್ರಹಿಸಿದರು. 

 ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ 50 ವರ್ಷಗಳ ಸುವರ್ಣ ಮಹೋತ್ಸವದ ನೆನಪಿಗಾಗಿ ರಾಜ್ಯದ ಸ್ಲಂ ನಿವಾಸಿಗಳ ಜನಸಂಖ್ಯೆ ಅನುಗುಣವಾಗಿ 5 ಸಾವಿರ ಕೋಟಿ ಅನುದಾನವನ್ನು ಕೊಳಗೇರಿಗಳ ಅಭಿವೃದ್ಧಿ ಮತ್ತು ವಸತಿಗಾಗಿ ಮೀಸಲಿಡಬೇಕು, ರಾಜ್ಯದ 2816 ಕೊಳಗೇರಿ ಪ್ರದೇಶಗಳ ಮೂಲ ಸೌರ್ಯಗಳಿಗಾಗಿ 4 ಸಾವಿರ ಕೋಟಿ ಅನುದಾನ ಮೀಸಲಿಟ್ಟು ಸ್ಲಂ ನಿವಾಸಿಗಳ ವಸತಿ, ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ, ಒಳಚರಂಡಿ, ಶೌಚಾಯಲಗಳು, ಸಮುದಾಯ ಭವನಗಳು, ಶಾಲಾ ಕಟ್ಡಡಗಳ ಅಭಿವೃಧ್ದಿ ಒಳಗೊಂಡು ಬೇಂಚ್ ಮಾರ್ಕ್ಸ ಸೌಲಭ್ಯಗಳನ್ನು ಒದಗಿಸಲು ಒನ್ ಟೈಮ್ ಗ್ರ್ಯಾಂಟನ್ನು ಘೋಷಿಸಬೇಕು, ರಾಜ್ಯಾದ್ಯಂತ 704 ಖಾಸಗಿ ಮಾಲಿಕತ್ವದ ಕೊಳಚೆ ಪ್ರದೇಶಗಳನ್ನು ಕಲಂ-17ರಲ್ಲಿ ಭೂಸ್ವಾಧೀನ ಪಡಿಸಿಕೊಳ್ಳಲು 500 ಕೋಟಿ ಅನುದಾನ ಮೀಸಲಿಡಬೇಕು, ಸ್ಲಂ ನಿವಾಸಿಗಳ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣಕ್ಕಾಗಿ ಪ್ರತ್ಯೇಕ ಸಚಿವಾಲಯ ಘೋಷಿಸಬೇಕು, 2017-18 ರ ಬಜೇಟ್ ಭಾಷಣದಲ್ಲಿ ಘೋಷಿಸಿರುವ  ನಗರ ಲ್ಯಾಂಡ್ ಬ್ಯಾಂಕ್ ಯೋಜನೆಯನ್ನು ಜಾರಿಗೆ ತಂದು ರಾಜ್ಯದ ನಿವೇಶನ ರಹಿತರಿಗೆ ವಸತಿ ಸೌಲಭ್ಯ ದೊರಕಿಸಲು ಬಡವರಿಗೆ, ಎಸ್‌.ಸಿ ಮತ್ತು ಎಸ್‌.ಟಿ ಸಮುದಾಯಗಳಿಗೆ ಸ್ವಂತ ಮನೆಯನ್ನು ಉಚಿತವಾಗಿ ನೀಡಲು ಸರ್ಕಾರ ಮುಂದಾಗಬೇಕು. 

 ಸಾಮಾಜಿಕ ಅಸಮಾನತೆಯ ಭಾಗವಾದ ಸ್ಲಂ ಜನರ ಆರ್ಥಿಕ ಅಭಿವೃದ್ಧಿಗೆ ನಗರ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತರಬೇಕು, ವಸತಿ ವಿಸಯ ಸಂವಿಧಾನದ ಪಟ್ಟಿಯಲ್ಲಿರುವುದ್ದರಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಬದಲಾಗಿ ಮುಖ್ಯಮಂತ್ರಿಗಳ ಶ್ರಮ ನಿವಾಸ್ ಯೋಜನೆ ಎಂದು ಘೋಷಿಸಬೇಕು, ರಾಜ್ಯದಲ್ಲಿ ಘೋಷಣೆಯಾಗಿರುವ 2,816 ಸ್ಲಂ ಪ್ರದೇಶಗಳ ಜನಸಖ್ಯೆಯನ್ನು ಪುನರ ಸಮೀಕ್ಷೆ ನಡೆಸಿ ಪ್ರತಿ ನಗರದಲ್ಲಿ 50 ಎಕರೆ ಭೂಮಿಯನ್ನು ಖರೀದಿಸಿ ವಸತಿ ಯೋಜನೆಯನ್ನು ಕಲ್ಪಿಸಬೇಕು, ಜನವರಿ 16-2025 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ತೀರ್ಮಾನದಂತೆ ರಾಜ್ಯದಲ್ಲಿ ಬಾಕಿ ಉಳಿದಿರುವ 61,894 ಮನೆಗಳ ನಿರ್ಮಾಣ ಪೂರ್ಣಗೊಳಿಸಲು ಹಣವನ್ನು ಬಿಡುಗಡೆ ಮಾಡಿ ತುರ್ತು ಕ್ರಮ ಕೈಗೊಂಡು ಕರ್ನಾಟಕ ಕೊಳಗೇರಿ ಅಭಿವೃಧ್ದಿ ಮಂಡಳಿಯಿಂದ ನಿರ್ಮಾಣವಾಗುತ್ತಿರುವ ವಸತಿ ಯೋಜನೆಯ ಫಲಾನುಭವಿಗಳ ಶುಲ್ಕವನ್ನು 25 ಸಾವಿರ ರೂಗಳಿಗೆ ಇಳಿಕೆ ಮಾಡಲು ಪ್ರಸಕ್ತ ಬಜೇಟನಲ್ಲಿ ಘೋಷಣೆ ಮಾಡಬೇಕೆಂದು ಮನವಿಯ ಮೂಲಕ ಒತ್ತಾಯಿಸಲಾಗಿದೆ. 

ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ, ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಹಾಗೂ ರಾಜ್ಯ ಸಂಚಾಲಕ ಇಮ್ತಿಯಾಜ.ಆರ್‌.ಮಾನ್ವಿ, ರಾಜ್ಯ ಸಂಘಟನಾ ಸಂಚಾಲಕ ಜನಾರ್ಧನ ಹಳ್ಳಿಬೆಂಚಿ, ರಾಜ್ಯ ಮಹಿಳಾ ಸಂಚಾಲಕಿ ಚಂದ್ರಮ್ಮ, ರೇಣುಕಾ ಸರಡಗಿ, ವೆಂಕಮ್ಮ, ಮಂಜುಬಾಯಿ, ರೇಣುಕಾ ಯಲ್ಲಮ್ಮ, ಅರುಣ,ಟಿ, ಹನುಮಂತ, ಸುಧಾ ಹಾಗೂ ರಾಜ್ಯದ ವಿವಿಧ ಜಿಲ್ಲೆಯ ಮುಂತಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.