ಕಾರ್ಯಕರ್ತೆಯರ ಗೌರವಧನ ಹೆಚ್ಚಳಕ್ಕೆ ಮನವಿ

Request for increase in honorarium of workers

ಕಾರ್ಯಕರ್ತೆಯರ ಗೌರವಧನ ಹೆಚ್ಚಳಕ್ಕೆ ಮನವಿ 

ಹೂವಿನಹಡಗಲಿ 02: ಗೌರವಧನಹೆಚ್ಚಿಸುವಂತೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ಪದಾಧಿಕಾರಿಗಳು ಶಾಸಕ ಕೃಷ್ಣನಾಯ್ಕ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಶಾಲಾ ಪೂರ್ವ ಶಿಕ್ಷಣ ನೀಡುವುದರ ಜೊತೆಗೆ ದುರ್ಬಲ ವರ್ಗದ ಮಕ್ಕಳ ಪಾಲನೆ ಮಾಡುತ್ತಿದ್ದಾರೆ.  

ಆದರೆ, ಸೇವೆಗೆ ತಕ್ಕಗೌರವಧನ ನೀಡದೆ ಸರ್ಕಾರಗಳು ಶೋಷಣೆ ಮಾಡುತ್ತಿವೆ. ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ಫೋಷಿಸಿದಂತೆ ಆರನೇ ಗ್ಯಾರಂಟಿಯಾಗಿ ಗೌರವಧನ ಹೆಚ್ಚಿಸಬೇಕು. ಪ್ರಸಕ್ತ ಬಜೆಟ್ನಲ್ಲೇ ಈ ಘೋಷಣೆ ಮಾಡಲು ಶಾಸಕರು ಒತ್ತಡ ತರಬೇಕು ಎಂದು ಮನವಿ ಮಾಡಿದರು.ಎಐಟಿಯುಸಿ ಮುಖಂಡ ಸುರೇಶ ಹಲಗಿ, ಫೆಡರೇಷನ್ ಅಧ್ಯಕ್ಷೆ ಬಿ. ಜಯಲಕ್ಷ್ಮಿ, ಕಾರ್ಯದರ್ಶಿ ಸುನಿತಾ, ಎನ್‌. ಮಂಜುಳಾ, ಕಮಲಾಕ್ಷಿ, ವಿ. ಅಮೃತೇಶ್ವರಿ, ಎಚ್‌. ಗೌರಮ್ಯ ಕೆ.ಇದ್ದರು.