ಅಂಜುಮನ್ ಸಂಸ್ಥೆಯ ಸದಸ್ಯತ್ವ ನೋಂದಣೆಗೆ ಕಾಲಾವಧಿ ವಿಸ್ತರಿಸಲು ಆಗ್ರಹಿಸಿ ಮನವಿ
ಗದಗ 8 : ಗದಗ-ಬೆಟಗೇರಿ ಅಂಜುಮನ ಸಂಸ್ಥೆ ಚುನಾವಣೆಗಾಗಿ ವಕ್ಫ್ ಬೋರ್ಡನಿಂದ ಸದಸ್ಯತ್ವ ನಡೆಸಲಾಗುತ್ತಿದ್ದು, ಸದಸ್ಯತ್ವ ನೋಂದಣೆಗೆ ಕಾಲಾವಧಿಯನ್ನು ವಿಸ್ತರಿಸಬೇಕೆಂದು ಆಗ್ರಹಿಸಿ ವೆಲ್ಫೇರ್ ಪಾರ್ಟಿ ಆಫ ಇಂಡಿಯಾದ ಮುಖಂಡರು ಜಿಲ್ಲಾ ವಕ್ಫ್ ಬೋರ್ಡ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ, ಪಾರ್ಟಿಯ ಅಧ್ಯಕ್ಷರಾದ ಜೀವನಸಾಬ ಉಮಚಗಿ ಮಾತನಾಡಿ ಗದಗ ಜಿಲ್ಲೆಯಲ್ಲಿ ಅತೀ ಹೆಚ್ಚು ಮುಸ್ಲಿಂ ಸಮುದಾಯ ಜನರು ಗದಗ-ಬೆಟಗೇರಿ ನಗರದಲ್ಲಿ ವಾಸವಾಗಿದ್ದಾರೆ, ನಮ್ಮ ಸಮುದಾಯದ ದೊಡ್ಡ ಸಂಸ್ಥೆಯಾದ ಗದಗ-ಬೆಟಗೇರಿ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಚುನಾವಣೆ ನಡೆಸಲು ಜಿಲ್ಲಾ ವಕ್ಫ್ ಬೋರ್ಡನಿಂದ ಚುನಾವಣೆ ಅಧಿಕಾರಿಯನ್ನು ನೇಮಿಸಲಾಗಿದೆ, ಚುನಾವಣೆ ಅಧಿಕಾರಿಗಳು ಈಗಾಗಲೇ ಎಸ್.ಎಂ ಕೃಷ್ಣಾನಗರದಲ್ಲಿರುವ ಅಂಜುಮನ್ ಸಂಸ್ಥೆಯ ಕಾರ್ಯಾಲಯದಲ್ಲಿ ದಿನಾಂಕ: 27-01-2025 ರಿಂದ ಅಂಜುಮನ್ ಸಂಸ್ಥೆ ಚುನಾವಣೆಗಾಗಿ ಸದಸ್ಯತ್ವ ನೋಂದಣೆ ಕಾರ್ಯವನ್ನು ಪ್ರಾರಂಭಿಸಿದ್ದಾರೆ, ಸದಸ್ಯತ್ವ ನೋಂದಣೆ ಮಾಡಿಕೊಳ್ಳಲು ಕೊನೆಯ ದಿನಾಂಕ: 20-02-2025 ರಂದು ಪ್ರಕಟಿಲಾಗಿದ್ದು, ಗದಗ-ಬೆಟಗೇರಿ ನಗರದ ಮುಸ್ಲಿಂ ಸಮಾಜದ ಜನಸಂಖ್ಯೆ ಅನುಗುಣವಾಗಿ ಸದಸ್ಯತ್ವ ನೋಂದಣೆ ಮಾಡಿಕೊಳ್ಳಲು ಇನ್ನು ಹೆಚ್ಚಿನ ಕಾಲಾವಕಾಶ ನೀಡಬೇಕು, ಗದಗ ಹಾಗೂ ಬೆಟಗೇರಿ ನಗರದ ಮಧ್ಯಭಾಗದಲ್ಲಿರುವ ಎಸ್.ಎಂ ಕೃಷ್ಣಾನಗರದಲ್ಲಿರುವ ಅಂಜುಮನ್ ಸಂಸ್ಥೆಯ ಕಾರ್ಯಾಲಯದಲ್ಲಿಯೇ ಸದಸ್ಯತ್ವ ನೋಂದಣೆ ಕಾರ್ಯವನ್ನು ನಡೆಸಬೇಕು, ಯಾವುದೇ ಕಾರಣಕ್ಕೊ ಬೇರೇ ಯಾವುದೇ ಸ್ಥಳದಲ್ಲಿ ಅಂಜುಮನ್ ಸದಸ್ಯತ್ವ ನೋಂದಣೆ ಮಾಡಲು ಅವಕಾಶ ಮಾಡಿ ಕೊಡಬಾರದೆಂದು ಒತ್ತಾಯಿಸುತ್ತೇವೆ, ಗದಗ-ಬೆಟಗೇರಿ ನಗರದ ನಮ್ಮ ಸಮಾಜದ ಜನರು ಯಾರು ಸದಸ್ಯತ್ವ ಪಡೆದುಕೊಳ್ಳಲು ಮುಂದಾಗುತ್ತಾರೆ ಅಂತಹವರು ಸ್ವಯಂ ಪ್ರೇರಿತರಾಗಿ ಬಂದು ಸದಸ್ಯತ್ವ ಪಡೆಯಬೇಕು, ವಕ್ಫ್ ಬೋರ್ಡ ಅಧಿಕಾರಿಗಳು ಯಾವುದೇ ಪ್ರಭಾವಿಗಳ ಒತ್ತಡಕ್ಕೆ ಮಣ್ಣಿದ್ದು ಬೇರೆ ಕಡೆ ಸದಸ್ಯತ್ವ ಪಡೆಯಲು ಮುಂದಾದರೆ ಜಿಲ್ಲಾ ವಕ್ಫ್ ಬೋರ್ಡ ಮುಂದೆ ಪ್ರತಿಭಟನೆ ನಡೆಸಲಾಗುವುದೆಂದು ಮನವಿ ಮೂಲಕ ಎಚ್ಚರಿಸಲಾಗಿದೆ. ರಶೀದ ಗೋಕಾವಿ, ಉಜೇಪಾ ಉಮಚಗಿ, ಮೆಹಬೂಬ ರೋಣ, ನಫೀಸ ಮಕಾನದಾರ, ಮುಸ್ತಾಫಾ ಶರಹಟ್ಟಿ ಮುಂತಾದವರು ಮನವಿ ನೀಡುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.