ಶಬರಿಮಲೆ ದೇವಸ್ಥಾನದಲ್ಲಿ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶಾವಕಾಶ ವಿರೋಧಿಸಿ ಮನವಿ

ಲೋಕದರ್ಶನ ವರದಿ

ಹಳಿಯಾಳ,15: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶಾವಕಾಶ ನೀಡಿರುವ ಆದೇಶವನ್ನು ಹಿಂಪಡೆಯುವಂತೆ ಕೋರಿ ಹಳಿಯಾಳದಲ್ಲಿ ಗುರುವಾರ ಮನವಿ ಸಲ್ಲಿಸಲಾಯಿತು.

ಮಾಜಿ ಶಾಸಕ ಹಾಗೂ ಭಾಜಪ ಮುಖಂಡ ಸುನೀಲ ಹೆಗಡೆ ಅವರ ನೇತೃತ್ವದಲ್ಲಿ 'ವಿಶ್ವ ಹಿಂದು ಪರಿಷತ್ ಹಾಗೂ 'ಅಯ್ಯಪ್ಪ ಸ್ವಾಮಿ ಸೇವಾ ಸಮಾಜ' ವತಿಯಿಂದ ನಡೆದ ಈ ಮನವಿ ಸಲ್ಲಿಕೆಗಿಂತ ಮುಂಚೆ ಹಿಂದು ಸಂಘಟನೆಗಳ ಪದಾಧಿಕಾರಿಗಳು, ಭಾಜಪ ಕಾರ್ಯಕರ್ತರು ಮತ್ತು ಅಯ್ಯಪ್ಪ ಮಾಲಾಧಾರಿಗಳು ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಸಭೆ ಸೇರಿ ಮೆರವಣಿಗೆಯಲ್ಲಿ ತಾಲೂಕ ಕಚೇರಿಗೆ ಬಂದು ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು.

ಹಿಂದು ಧಾಮರ್ಿಕ ಆಚಾರ ಪಾಲನೆ ಆಯಾ ದೇವಾಲಯದ ಆಡಳಿತ ವ್ಯಾಪ್ತಿಗೆ ಹಾಗೂ ಆಯಾ ದೇವರ ಭಕ್ತರಿಗೆ ಸಂಬಂಧಪಟ್ಟದ್ದಾಗಿದ್ದು ಅವರ ಪರಿವ್ಯಾಪ್ತಿಗೆ ಒಳಪಟ್ಟ ನಿಯಮ ಇದಕ್ಕೆ ವಿರುದ್ಧವಾದ ಸವರ್ೋಚ್ಛ ನ್ಯಾಯಾಲಯದ ಆದೇಶವನ್ನು ಸಡಿಲಿಸಿ ದೇವಸ್ಥಾನದ ಪಾವಿತ್ರ್ಯತೆಯನ್ನು ಕಾಪಾಡಲು, ಮಹಿಳೆಯರಿಗೆ ದೇವಸ್ಥಾನದ ಒಳಗೆ ಪ್ರವೇಶಾವಕಾಶ ನೀಡಿರುವ ಆದೇಶವನ್ನು ಹಿಂಪಡೆಯುವಂತೆ ಸೂಕ್ತ ನಿದರ್ೇಶನ ನೀಡಲು ವಿಶ್ವ ಹಿಂದು ಪರಿಷತ್, ಅಯ್ಯಪ್ಪ ಸ್ವಾಮಿ ಭಕ್ತರು ಹಿಂದು ಪರ ಸಂಘಟನೆಗಳ ಪರವಾಗಿ ಮತ್ತು ಧಾಮರ್ಿಕ ವಿಧಿ-ವಿಧಾನ ಒಪ್ಪಿಕೊಳ್ಳುವ ಸಮಸ್ತ ಮಹಿಳೆಯರ ಪರವಾಗಿ ಕೋರುತ್ತಿರುವದಾಗಿ ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಜಮಾಯಿಸಿದ್ದವರನ್ನು ಉದ್ದೇಶಿಸಿ ಸುನೀಲ ಹೆಗಡೆ ಮಾತನಾಡಿದರು. ವಿಶ್ವ ಹಿಂದು ಪರಿಷತ್ನ ತಾಲೂಕಾಧ್ಯಕ್ಷ ಶ್ರೀಪತಿ ಭಟ್, ಗೌರವಾಧ್ಯಕ್ಷ ನಾರಾಯಣ ಪಾಠಣಕರ, ಉಪಾಧ್ಯಕ್ಷ ಶಂಕರ ರೇಣಕೆ, ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ವಿಲಾಸ ತೇಲಂಗ, ಭಾಜಪ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ ಹಾಗೂ ಭಾಜಪ ಪದಾಧಿಕಾರಿಗಳು ಮತ್ತು ಮುಖಂಡರಾದ ಮಂಗೇಶ ದೇಶಪಾಂಡೆ, ಸಂತೋಷ ಘಟಕಾಂಬ್ಳೆ, ಅನಿಲ ಮುತ್ನಾಳೆ, ವಿನೋದ ಗಿಂಡೆ, ಅನಿಲ ಗಿರಿ, ಶಾಂತಾ ಹಿರೇಕರ, ವಿಜಯಲಕ್ಷ್ಮೀ ಚವ್ಹಾಣ, ರೂಪಾ ಗಿರಿ, ವನಮಾಲಾ ಹುಂಡೇಕರ, ಆನಂದ ಕಂಚನಾಳಕರ, ನಾಗರಾಜ ಬಾಂದೇಕರ, ಜಯಕನರ್ಾಟಕ ಸಂಘಟನೆಯ ವಿಲಾಸ ಕಣಗಲಿ, ಕನರ್ಾಟಕ ರಕ್ಷಣಾ ವೇದಿಕೆಯ ಬಸವರಾಜ ಬೆಂಡಿಗೇರಿಮಠ, ನಾಗೇಂದ್ರ ಈರಪ್ಪಾ ವಡ್ಡರ ಕಾಳಗಿನಕೊಪ್ಪ, ಮಾರುತಿ ಸಡೇಕರ ಮುರ್ಕವಾಡ, ಮಂಜು ಕೊರವರ ಹವಗಿ ಮೊದಲಾದವರು ಪಾಲ್ಗೊಂಡಿದ್ದರು.