ರೇಣುಕಾಚಾರ್ಯ ಜಯಂತಿ: ಪೂರ್ವಭಾವಿ ಸಭೆ

Renukacharya Jayanti: Preliminary meeting

ರೇಣುಕಾಚಾರ್ಯ ಜಯಂತಿ: ಪೂರ್ವಭಾವಿ ಸಭೆ   

ತಾಳಿಕೋಟಿ 03: ರೇಣುಕಾಚಾರ್ಯರ ಜಯಂತಿ ಅಂಗವಾಗಿ ಪಂಚಾಚಾರ್ಯ ಸಹಕಾರಿ ಪತ್ತಿನ ಸಂಘದ ಸಭಾಂಗಣದಲ್ಲಿ ತಾಳಿಕೋಟಿ ತಾಲೂಕಿನ ಬೇಡ ಜಂಗಮ ಸಮಾಜದ ಗೌರವಧ್ಯಕ್ಷ ರಾಮಲಿಂಗ ಮಹಾಸ್ವಾಮಿಗಳು, ಚಬನೂರ ಇವರ ನೇತೃತ್ವದಲ್ಲಿ ಹಾಗೂ ದೇವರ ಹಿಪ್ಪರಗಿಯ ಶಿವಯೋಗಿ ಮಹಾಸ್ವಾಮಿಗಳು ಇವರ ಸಾನಿಧ್ಯದಲ್ಲಿ ಪೂರ್ವಭಾವಿ ಸಭೆ ಜರುಗಿತು. 

     ಸಭೆಯಲ್ಲಿ ಪ್ರತಿ ವರ್ಷ ದಂತೆ ಈ ವರ್ಷವೂ ಕೂಡಾ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಣೆಯನ್ನು ಮಾಡಲು ತೀರ್ಮಾನಿಸಲಾಯಿತು. ಮಾರ್ಚ್‌ 12ರಂದು ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.ತಾಲೂಕಿನ ಸರ್ವ ಜಂಗಮ ಸಮಾಜದ ಬಂಧುಗಳನ್ನು ಸೇರಿಸಲು ತೀರ್ಮಾನಿಸಲಾಯಿತು. ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸಭೆಯಲ್ಲಿ ಎಲ್ಲರೂ ಒಮ್ಮತ ಅಭಿಪ್ರಾಯ ವ್ಯಕ್ತ ಪಡಿಸಿದರು. ಸಭೆಯಲ್ಲಿ ಬೇಡ ಜಂಗಮ ಸಮಾಜದ ಅಧ್ಯಕ್ಷರು, ಸರ್ವ ಪದಾಧಿಕಾರಿಗಳು, ಸಮಾಜದ ಹಿರಿಯರು ಭಾಗವಹಿಸಿದ್ದರು.