ಗದಗ 26: ಗದಗ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಲ್ಲಿ ಅತ್ಯಗತ ಗಂಭೀರ ಪರಿಸ್ಥಿತಿ ಇದೆ. ಮನೆಗಳಿಗೆ, ಬೆಳೆಗಳಿಗೆ ರಸ್ತೆ ಸೇತುವೆ ಮುಂತಾದ ಮೂಲ ಸೌಲಭ್ಯಗಳಿಗೆ ಅಪಾರ ಹಾನಿಯಾಗಿದ್ದು ಇವುಗಳ ಸುಧಾರಣೆ, ಪುನರ್ವಸತಿಗಾಗಿ ಸಾಕಷ್ಟು ಸಮಯ ಹಿಡಿಯಬಹುದು ಎಂದು ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದಶರ್ಿ ಪ್ರಕಾಶ ಅವರು ನರಗುಂದ ಹಾಗೂ ರೋಣ ತಾಲೂಕಿನಲ್ಲಿ ಮಲಪ್ರಭಾ ನವಿಲುತೀರ್ಥ ಜಲಾಶಯದ ಹೊರ ಹರಿವಿನ ನೆರೆಯಿಂದ ಹಾನಿಗೊಳಗಾಗಿರುವದನ್ನು ವೀಕ್ಷಿಸಿ ಹೊಳೆಆಲೂರನಲ್ಲಿ ಜನ ಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ನಂತರ ಕೊಣ್ಣೂರಿನಲ್ಲಿ ಜರುಗಿದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬೆಳೆ ಹಾನಿ ಕುರಿತಂತೆ ಮತ್ತೊಂದು ಕೇಂದ್ರ ತಂಡ ಸಮೀಕ್ಷೆಗೆ ಬರಲಿದೆ. ಈಗಾಗಲೇ ಮನೆ, ಬೆಳೆ, ರಸ್ತೆ, ಸೇತುವೆ ಹಾನಿಯ ಪ್ರಾಥಮಿಕ ವರದಿಯನ್ನಾಧರಿಸಿ ರಾಜ್ಯ ಸರ್ಕಾರ ರಾಜ್ಯದ ನೆರೆ ಜಿಲ್ಲೆಗಳ ಸಮಗ್ರ ಹಾನಿ ಕುರಿತು ಪ್ರಸ್ತಾವನೆಯನ್ನು ಮಂಗಳವಾರ ರಾಜ್ಯ ಸಕರ್ಾರ ನೀಡಲಿದೆ. ಗದಗ ಜಿಲ್ಲೆಯ ನೆರೆ ಪೀಡಿತ ಗ್ರಾಮಸ್ಥರನ್ನು ನೆರೆ ನೀರಿಕ್ಷೆಯಲ್ಲಿ ಸಾಕಷ್ಟು ಮುಂಜಾಗ್ರತೆಯಾಗಿ ಜನ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಿದ್ದರಿಂದ ಆಗಬಹುದಾದ ಬಾರಿ ಹಾನಿಯನ್ನು ತಡೆದಂತಾಗಿದೆ. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ವ್ಯವಸ್ಥಿತವಾಗಿ ಉತ್ತಮ ಕಾರ್ಯವೆಸಗಿದೆ ಎಂದರು.
ಮಳೆ ಬರದೆ ಇಡೀ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತವೆಂದು ರಾಜ್ಯ ಸರ್ಕಾರ ಘೋಷಿಸಿತ್ತು. ಆದರೆ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಭಾರಿ ಮಳೆಯಿಂದ ನವಿಲುತೀರ್ಥ ಜಲಾಶಯದಿಂದ 70 ಸಾವಿರ ರಿಂದ 1.20 ಲಕ್ಷ ಕ್ಯೂಸೆಕ್ಸ ವರೆಗೆ ಎರಡು ದಿನಗಳ ಕಾಲ ಹೊರ ಹರಿವುನಿಂದಾಗಿ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ, ಲಖಮಾಪುರ, ಬೂದಿಹಾಳ, ಶಿರೋಳ, ಕುರ್ಲಗೇರಿ, ಮೂಗನೂರ, ಬನಹಟ್ಟಿ, ಸುರಕೋಡ, ಹದಲಿ, ಗಂಗಾಪುರ, ಖಾನಾಪುರ, ವಾಸನ, ಬೆಳ್ಳೇರಿ, ರೋಣ ತಾಲೂಕಿನ ಹೊಳೆ ಆಲೂರು, ಕುರುವಿನಕೊಪ್ಪ, ಮೆಣಸಗಿ, ಅಮರಗೋಳ, ಹೊಳೆಮಣ್ಣೂರ, ಬಸರಕೋಡ, ಬಿ.ಎಸ್.ಬೆಲೇರಿ, ಬೋಪಳಾಪುರ, ಗಾಡಗೋಳಿ, ಯಾವಗಲ್ಲ, ಕರಮಡಿ, ಅಸೂಟಿ ಗ್ರಾಮಗಳು ಹಾಗೂ ಶಿರಹಟ್ಟಿಯ 8 ಗ್ರಾಮಗಳು ತುಂಗಭದ್ರಾ ಪ್ರವಾಹದಿಂದ ಜಲಾವೃತಗೊಂಡು ಅಪಾರ ಹಾನಿ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು. ಗದಗ ಜಿ.ಪಂ. ಅಧ್ಯಕ್ಷ ಎಸ್.ಪಿ.ಬಳಿಗಾರ, ಸಂಸದ ಪಿ.ಸಿ.ಗದ್ದಿಗೌಡರ, ವಿಧಾನ ಪರಿಷತ ಸದಸ್ಯ ಎಸ್.ವಿ.ಸಂಕನೂರ, ಜಿ.ಪಂ. ಸದಸ್ಯರಾದ ರಾಜುಗೌಡ ಕೆಂಚನಗೌಡ್ರ ಪಡಿಯಪ್ಪ ಪೂಜಾರ, ಜನಪ್ರತಿನಿಧಿಗಳು, ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೇಂದ್ರ ನೆರೆ ಅಧ್ಯಯನ ತಂಡದಲ್ಲಿ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದಶರ್ಿ ಪ್ರಕಾಶ ಅವರೊಂದಿಗೆ ಕೇಂದ್ರ ಹಣಕಾಸು ಸಚಿವಾಲಯದ ಲೆಕ್ಕಪತ್ರ ಶಾಖೆಯ ನಿದರ್ೆಶಕ ಎಸ್.ಸಿ.ಮೀನಾ, ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯ ಎಣ್ಣೆಕಾಳು ವಿಭಾಗದ ಜಂಟಿ ನಿರ್ದೇಶಕ ಪುಣ್ಣುಸ್ವಾಮಿ, ಕೇಂದ್ರ ಜಲಸಂಪನ್ಮೂಲದ ಇಲಾಖೆ ಬೆಂಗಳೂರಿನ ಪ್ರಾದೇಶಿಕ ಕಚೇರಿಯ ಅಧೀಕ್ಷಕ ಅಭಿಯಂತ ಜಿತೇಂದ್ರ ಪನವಾರ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಬೆಂಗಳೂರು ಪ್ರಾದೇಶಿಕ ಕಚೇರಿಯ ವಿಜಯಕುಮಾರ, ಕೇಂದ್ರ ಗ್ರಾಮೀಣಾಭಿವೃದ್ದಿ ಸಚಿವಾಲಯ ದಿಶಾ ವಿಭಾಗದ ಉಪಕಾರ್ಯದರ್ಶಿ ಮಾಣಿಕ ಚಂದ್ರ ಪಂಡಿತ ಹಾಗೂ ಕೇಂದ್ರ ಇಂಧನ ಸಚಿವಾಲಯದ ಉಪನಿರ್ದೇಶಕ ಓ.ಪಿ.ಸುಮನ್ ಕೇಂದ್ರ ಅಧ್ಯಯನ ತಂಡದಲ್ಲಿದ್ದರು.