ಸಚಿವ ಸಂಪುಟ ಸಮಿತಿಯ ಪುನರ್ ರಚನೆ; ನೇಮಕಾತಿ ಸಮಿತಿಯಲ್ಲಿ ಪ್ರಧಾನಿ ಮೋದಿ, ಶಾ

ನವದೆಹಲಿ, ಜೂ 6 (ಯುಎನ್ಐ) ಕೇಂದ್ರ ಸರಕಾರ ನೇಮಕಾತಿ ಸಮಿತಿ ಹಾಗೂ ಭದ್ರತಾ ಸಮಿತಿ ಸೇರಿದಂತೆ ಸಚಿವ ಸಂಪುಟ ಸಮಿತಿಗಳನ್ನು ಪುನರ್ ರಚಿಸಿದೆ. ನೇಮಕಾತಿ ಸಮಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾಹ್ ಮಾತ್ರ ಸದಸ್ಯರಾಗಿರಲಿದ್ದಾರೆ. ಸಚಿವ ಸಂಪುಟ ಸಚಿವಾಲಯವು ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಗೃಹ ಸಚಿವ ಅಮಿತ್ ಶಾಹ್ ಅವರನ್ನು ಎಲ್ಲಾ ಎಂಟು ಸಮಿತಿಗಳ ಸದಸ್ಯರನ್ನಾಗಿ ಮಾಡಲಾಗಿದೆ.

    ಪ್ರಧಾನಿ ಮೋದಿ ಅವರನ್ನು ವಸತಿ ಸಂಬಂಧಿಸಿದ ಹಾಗೂ ಸಂಸದೀಯ ವ್ಯವಹಾರಗಳ ಸಮಿತಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಭದ್ರತಾ ವ್ಯವಹಾರಗಳ ಮಹತ್ವದ ಸಮಿತಿಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ಐವರು ಸದಸ್ಯರಿರಲಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾಹ್, ಹಣಕಾಸು ಹಾಗೂ ಕಾಪೋರೇಟ್  ವ್ಯವಹಾರಗಳ ಸಚಿವೆ ನಿರ್ಮಾಲಾ  ಸೀತಾರಾಮನ್ ಹಾಗೂ ವಿದೇಶಾಂಗ್ ಸಚಿವ ಡಾ.ಎಸ್.ಜಯಶಂಕರ್ ಇರಲಿದ್ದಾರೆ. ರಾಜಕೀಯ ವ್ಯವಹಾರಗಳ ಸಮಿತಿಯಲ್ಲಿ ಪ್ರಧಾನಿ ಮೋದಿ ಸಹಿತ ಅಮಿತ್ ಶಾಹ್, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಹಣಕಾಸು ಹಾಗೂ ಕಾಪೋರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸಿತಾರಾಮನ್, ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್, ಕೃಷಿ ಸಚಿವ ನರೇಂದ್ರ ತೋಮರ್, ಸಂವಹನ ಸಚಿವ ರವಿಶಂಕರ್ ಪ್ರಸಾದ್, ಆಹಾರ ಸಂಸ್ಕರಣೆ ಸಚಿವ ಹರಸಿಮ್ರತ್ ಕೌರ್ ಬಾದಲ್, ಆರೋಗ್ಯ ಸಚಿವ ಡಾ.ಹರ್ಷವರ್ಧನ್, ರೈಲ್ವೆ ಸಚಿವ ಪಿಯೂಷ್ ಗೋಯಲ್, ಭಾರಿ ಉಗ್ಯೋಗ ಸಚಿವ ಅರವಿಂದ್ ಸಾವಂತ್ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ಇದ್ದಾರೆ. ಹಣಕಾಸು ವ್ಯವಹಾರಗಳ ಸಮಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾಹ್, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ರಸಾಯನ ಸಚಿವ ಡಿ.ವಿ.ಸದಾನಂದಗೌಡ, ಹಣಕಾಸು ಹಾಗೂ ಕಾಪೋರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸಿತಾರಾಮನ್, ಕೃಷಿ ಸಚಿವ ನರೇಂದ್ರ ತೋಮರ್, ಸಂವಹನ ಸಚಿವ ರವಿಶಂಕರ್ ಪ್ರಸಾದ್, ಆಹಾರ ಸಂಸ್ಕರಣೆ ಸಚಿವ ಹರಸಿಮ್ರತ್ ಕೌರ್ ಬಾದಲ್, ವಿದೇಶಾಂಗ್ ಸಚಿವ ಡಾ.ಎಸ್.ಜಯಶಂಕರ್, ರೈಲ್ವೆ ಸಚಿವ ಪಿಯೂಷ್ ಗೋಯಲ್ ಹಾಗೂ ಪ್ರಟ್ರೋಲಿಯಂ ಸಚಿವಧರ್ಮೇಂದ್ರ ಪ್ರಧಾನ್ ಅವರನ್ನು ಸೇರ್ಪಡೆಗೊಳಿಸಲಾಗಿದೆ.  ಸಂಸದೀಯ ವ್ಯವಹಾರಗಳ ಸಮಿತಿಯಲ್ಲಿ ಗೃಹ ಸಚಿವ ಅಮಿತ್ ಶಾಹ್, ಹಣಕಾಸು ಹಾಗೂ ಕಾಪೋರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸಿತಾರಾಮನ್, ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸವಿವ ರಾಮ್ ವಿಲಾಸ್ ಪಾಸ್ವಾನ್, ಕೃಷಿ ಸಚಿವ ನರೇಂದ್ರ ತೋಮರ್, ಸಂವಹನ ಸಚಿವ ರವಿಶಂಕರ್ ಪ್ರಸಾದ್, ಅರಣ್ಯ ಹಾಗೂ ಪರಿಸರ ಸಚಿವ ಪ್ರಕಾಶ್ ಜಾವಡೇಕರ್, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ಸದಸ್ಯರಾಗಿದ್ದು, ಸಂಸದೀಯ ರಾಜ್ಯ ಸಚಿವ ಅಜೆಯ್  ರಾಮ್ ಮೇಘವಾಲ್ ಹಾಗೂ ವಿ.ಮುರಳಿಧರನ್ ಅವರನ್ನು ಸಮಿತಿಯ ವಿಶೇಷ ಆಹ್ವಾನಿತ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ವಸತಿ ಸಂಬಂಧಿಸಿದ ಸಮಿತಿಯನ್ನು ಗೃಹ ಸಚಿವ ಅಮಿತ್ ಶಾಹ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದು, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಹಣಕಾಸು ಹಾಗೂ ಕಾಪೋರೇಟ್ವ್ಯವಹಾರಗಳ ಸಚಿವೆ ನಿರ್ಮಲಾ ಸಿತಾರಾಮನ್ ಹಾಗೂ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸದಸ್ಯರಾಗಿದ್ದಾರೆ. ಪ್ರಧಾನ ಮಂತ್ರಿ ಕಚೇರಿಯಲ್ಲಿ ರಾಜ್ಯ ಸಚಿವ ಡಾ.ಜಿತೇಂದ್ರ ಸಿಮಗ್ ಹಾಗೂ ನಗರ ಕಾರ್ಯ ಮತ್ತು ವಸತಿ ಸಚಿವ ಹರದೀಪ್ ಸಿಂಗ್ ಪುರಿ ಅವರನ್ನು ಸಮಿತಿಯ ವಿಶೇಷ ಆಹ್ವಾನಿತ ಸದಸ್ಯರನ್ನಾಗಿ ಮಾಡಲಾಗಿದೆ. ಹೂಡಿಕೆ ಹಾಗೂ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರಧಾನಿಯವರಾಗಿರಲಿದ್ದು, ಗೃಹ ಸಚಿವ ಅಮಿತ್ ಶಾಹ್, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಹಣಕಾಸು ಹಾಗೂ ಕಾಪೋರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸಿತಾರಾಮನ್, ರೈಲ್ವೆ ಸಚಿವ ಪಿಯೂಷ್ ಗೋಯಲ್ ಸಮಿತಿಯಲ್ಲಿದ್ದಾರೆ. ಶ್ರಮ ಮತ್ತು ಕೌಶಲ ಅಭಿಮೃದ್ಧಿ ಸಮಿತಿಯ ಅಧ್ಯಕ್ಷರನ್ನಾಗಿ ಪ್ರಧಾನಿ ಅವರನ್ನು ನೇಮಕ ಮಾಡಲಾಗಿದ್ದು, ಗೃಹ ಸಚಿವ ಅಮಿತ್ ಶಾಹ್, ಹಣಕಾಸು ಹಾಗೂ ಕಾಪೋರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸಿತಾರಾಮನ್, ಕೃಷಿ ಸಚಿವ ನರೇಂದ್ರ ತೋಮರ್, ರೈಲ್ವೆ ಸಚಿವ ಪಿಯೂಷ್ ಗೋಯಲ್, ಮಾನವ ಸಂಪನ್ಮೂಲ್ ಹಾಗೂ ಅಭಿವೃದ್ಧಿ ಸಚಿವ ರಮೇಶ್ ಪೋಖರಿಯಾಲ್, ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಕೌಶಲ ಅಭಿವೃದ್ಧಿ ಸಚಿವ ಮಹೇಂದ್ರನಾಥ್ ಪಾಂಡೆ, ಕಾಮರ್ಿಕ ಸಚಿವ ಸಂತೋಷ ಗಂಗವಾರ್ ಹಾಗೂ ನಗರ ಕಾರ್ಯ ಮತ್ತು ವಸತಿ ಸಚಿವ ಹರದೀಪ್ ಸಿಂಗ್ ಕೌರ್ ಅವರನ್ನು ಆಯ್ಕೆ ಮಾಡಲಾಗಿದೆ. ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಆಹಾರ ಸಂಸ್ಕರಣೆ ಸಚಿವ ಹರಸಿಮ್ರತ್ ಕೌರ್ ಬಾದಲ್, ಜವಳಿ ಸಚಿವೆ ಸ್ಮೃತಿ ಇರಾನಿ ಹಾಗೂ ಸಂಸ್ಕೃತಿ ಸಚಿವ ಪ್ರಲ್ಹಾದ್ ಸಿಂಗ್ ಪಟೇಲ್ ಸಮಿತಿಯ ವಿಶೇಷ ಆಹ್ವಾನಿತ ಸದಸ್ಯರಾಗಿದ್ದಾರೆ.