ರಾಯಣ್ಣನ ದೇಶಪ್ರೇಮ ಯುವಜನತೆಗೆ ಸ್ಫೂರ್ತಿ: ಪಾಟೀಲ

ಲೋಕದರ್ಶನ ವರದಿ

ಸಂಬರಗಿ: ಸಂಗೊಳ್ಳಿ ರಾಯಣ್ಣನ ಆಚಾರ ವಿಚಾರ ಇಗಿನ ಯುವ ಪಿಳಿಗೆ ಪಡೆದುಕೊಂಡು ಸಂಗೊಳ್ಳಿ ರಾಯಣ್ಣನಂತೆ ಯುವಕರು ನಿಮರ್ಾಣವಾಗಬೇಕೆಂದು ರಾಜ್ಯ ಕುರುಬರ ಸಂಘದ ನಿರ್ದೇಶಕರಾದ ಓಂಪ್ರಕಾಶ ಪಾಟೀಲ ಹೇಳಿದರು.

  ಆಜೂರ ಗ್ರಾಮದಲ್ಲಿ ಬುಧವಾರ ಸಾಯಂಕಾಲ ಸಂಗೊಳ್ಳಿ ರಾಯಣ್ಣ ಜಯಂತಿ ನಿಮಿತ್ಯ ಅವರ ಭಾವಚಿತ್ರದ ಪೂಜೆ ನೆರೆವೆರೆಸಿ ಮಾತನಾಡಿ ಅವರು ರಾಯಣ್ಣ ನಿಸ್ವಾರ್ಥ ಹೋರಾಟ, ದೇಶಪ್ರೇಮ ಯುವ ಜನತೆಯಲ್ಲಿ ಸ್ಪೂರ್ತಿಯನ್ನು ತುಂಬುತ್ತದೆ ಇದ್ದರೆ ರಾಯಣ್ಣನಂತಹ ದೇಶಪ್ರೇಮಿಗಳಿರಬೇಕು ಎನ್ನುವುದು ಎಲ್ಲರ ಮಾತಾಗಿದೆ. ರಾಯಣ್ಣನ ದಂಡಿನಲ್ಲಿ ಸ್ಮರಿಸಬೇಕಾದ ಅತ್ಯಂತ ಮಹತ್ವದ ವಿಷಯವೆಂದರೆ ಒಗ್ಗಟ್ಟು ಉಂಟು ಮಾಡಿರುವ ಬಗೆಯನ್ನು ತಿಳಿಯುವುದು. ರಾಯಣ್ಣ ಹೆಸರನ್ನು ಅಮರವಾಗಿಸಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದು ಹೆಸರಿಡಲಾಗಿದೆ

  ರಾಯಣ್ಣನ ಬದುಕನ್ನು ಆಧರಿಸಿ 1962 ರಲ್ಲಿ ಒಂದು ಚಿತ್ರ ನಿರ್ಮಾಣವಾಯ್ತು ಮತ್ತೆ 2012 ರಲ್ಲಿ ಸಂಗೊಳ್ಳಿ ರಾಯಣ್ಣ ಎಂಬ ಹೆರಿನಲ್ಲಿಯೇ ಮತ್ತೊಂದು ಅದ್ದೂರಿ ಚಿತ್ರವೂ ನಿರ್ಮಾಣವಾಯ್ತು. ಇಂತಹ ಮಹಾನ ಕ್ರಾಂತಿವೀರನ ಹೆಸರು ವಿಶ್ವದಲ್ಲಿಯೇ ಅಮರವಾಗಿದೆ.

  ಈ ವೇಳೆ ನಾರಾಯಣ ಮಾನೆ, ಬೀರಪ್ಪ ಮಹಾಂಕಾಲೆ, ವಿಠ್ಠಲ ಮಹಾಂಕಾಲೆ, ನೀತಿನ ಬಂಡಗರ, ಸುನೀಲ ಮಹಾಂಕಾಲೆ, ಟಿ ಆರ್ ಮಹಾಂಕಾಲೆ, ಪ್ರಕಾಶ ಮಹಾಂಕಾಲೆ, ಸುನೀಲ ಮಹಾಂಕಾಲೆ ಸೇರಿದಂತ ಅನೇಕ ಗಣ್ಯರು ಹಾಜರಿದ್ದರು. ರಾಜು ಅಂಕುಶ ಮಹಾಂಕಾಲೆ ಇವರು ಸ್ವಾಗತಿಸಿ ವಂದಿಸಿದರು. ಆನಂತರ ಸಂಗೊಳ್ಳಿ ರಾಯಣ್ಣನ ಭಾವಚಿತ್ರವನ್ನು ಸಕಲ ವಾದ್ಯ ವೃಂದದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.