ರತನ ಟಾಟಾ ದೂರದೃಷ್ಟಿ ಪ್ರವರ್ತಕ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ
ಕಾಗವಾಡ 14: ಸಾತಂತ್ರ್ಯ ನಂತರ ಕೃಷಿ ಕ್ಷೇತ್ರದಲ್ಲಿ ಬಲಾಢ್ಯವಾಗಿರುವ ಭಾರತ ದೇಶ ಇಂದು ಕೈಗಾರಿಕಾ ವಲಯ ಕೂಡಾ ನಾಗಾಲೋಟದಲ್ಲಿ ಮುಂದೆ ಸಾಗುತ್ತಿದೆ. ಈ ನಿಟ್ಟಿನಲ್ಲಿ ವಿಶ್ವವಿಖ್ಯಾತ ಪ್ರವರ್ತಕ ಉದ್ಯಮ ಸಾಹಸಿ, ರತನ ಟಾಟಾರವರ ದೂರದೃಷ್ಟಿ ಚಿಂತನೆ ವಿಶ್ವದ ಜನಾಂಗಳದಲ್ಲಿ ನಮ್ಮ ದೇಶ ಹೆಗ್ಗುರುತು ಮೂಡಿಸುವಂತೆ ಮಾಡಿದೆಯೆಂದು ಚಿಕ್ಕೊಡಿ ಬಿ.ಕೆ. ಕಾಲೇಜಿನ ಪ್ರಾಧ್ಯಾಪಕ ಎನ್.ಬಿ. ಪಾಟೀಲ ಅಭಿಪ್ರಾಯ ಪಟ್ಟಿದ್ದಾರೆ. ಅವರು, ಇತ್ತಿಚಿಗೆ ಪಟ್ಟಣದ ಶಿವಾನಂದ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ರತನ ಟಾಟಾ ದೂರದೃಷ್ಟಿ ಪ್ರವರ್ತಕ ಎಂಬ ರಾಷ್ಟ್ರ ಮಟ್ಟದ ವಿದ್ಯಾರ್ಥಿ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಟಾಟಾ ಕಂಪನಿ ಪಶ್ಚಿಮ ಬಂಗಾಳದ ಭಾಗದಲ್ಲಿ ಕೇವಲ 12 ಸಾವಿರ ಹೂಡಿಕೆಯಿಂದ ಆರ್‌ಜೆಡಿ. ಟಾಟಾ ರವರಿಂದ ಸ್ಥಾಪಿತಗೊಂಡು, ಇಂದು ವಿಶ್ವದ ಅಗ್ರ ಕಂಪನಿಗಳ ಸಾಲಿನಲ್ಲಿ ನಿಂತಿದೆ ಎಂದರು. ದಿವ್ಯ ಸಾನಿಧ್ಯವನ್ನು ಯತೀಶ್ವರಾನಂದ ಸ್ವಾಮೀಜಿ ವಹಿಸಿದ್ದರು. ಅದ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಆಡಳಿತಾಧಿಕಾರಿ ಮೆ. ವ್ಹಿ.ಎಸ್. ತುಗಶೆಟ್ಟಿ ವಹಿಸಿ, ಮಾತನಾಡಿದರು. ಪ್ರಾಚಾರ್ಯ ಡಾ. ಎಸ್.ಎ. ಕರ್ಕಿ, ಕಾರ್ಯದರ್ಶಿ ಪ್ರೊ. ಬಿ.ಎ. ಪಾಟೀಲ, ಪ.ಪೂ. ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಪಿ.ಬಿ. ನಂದಾಳೆ, ಪ್ರೊ. ಬಿ.ಡಿ. ಧಾಮಣ್ಣವರ, ಕುಮಾರಿ ಪ್ರಗತಿ ಬಾಪಕರ ಸೇರಿದಂತೆ ವಿವಿಧ ಕಾಲೇಜುಗಳಿಂದ 35ಕ್ಕೂ ಅಧಿಕ ವಿದ್ಯಾರ್ಥಿ ತಂಡಗಳು, ಪ್ರಾಧ್ಯಾಪಕರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ಎಸ್.ಪಿ. ತಳವಾರ ಸ್ವಾಗತಿಸಿದರು. ಪ್ರೊ. ವ್ಹಿ.ಬಿ. ಬುರ್ಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಎಸ್.ಎಸ್. ಫಡತರೆ ನಿರೂಪಿಸಿದರು. ಪ್ರೊ. ಬಿ.ಡಿ. ಧಾಮಣ್ಣವರ ವಂದಿಸಿದರು. ಪ್ರೊ. ಎಸ್.ಎಂ. ಘೋರಪಡೆ ಮತ್ತು ಪ್ರೊ. ವ್ಹಿ.ವ್ಹಿ. ಪಾಟೀಲ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.