ಫೆ,14ಕ್ಕೆ ರನ್ನ ಬೆಳಗಲಿ ಮತ್ತು ಮುಗಳಖೋಡ ಕ್ಲಸ್ಟರ್ ಗಳ ಕಲಿಕಾ ಹಬ್ಬ : ಡಿ. ಆರ್‌. ಕ್ಯಾಡಿ

Ranna Belagali and Mugalakhoda cluster's learning festival on February 14: d. R. Caddy

ಫೆ,14ಕ್ಕೆ ರನ್ನ ಬೆಳಗಲಿ ಮತ್ತು ಮುಗಳಖೋಡ ಕ್ಲಸ್ಟರ್ ಗಳ ಕಲಿಕಾ ಹಬ್ಬ : ಡಿ. ಆರ್‌. ಕ್ಯಾಡಿ

ರನ್ನ ಬೆಳಗಲಿ 12 : ಮುಧೋಳ ತಾಲೂಕಿನ ಮುಗಳಖೋಡ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾ ಕೊಠಡಿಯಲ್ಲಿ  ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಮುಧೋಳ, ಸಮೂಹ ಸಂಪನ್ಮೂಲ ಕೇಂದ್ರ ರನ್ನ ಬೆಳಗಲಿ ಮತ್ತು ಮುಗಳಖೋಡ ಸಂಯುಕ್ತ ಆಶ್ರಯದಲ್ಲಿ "ಸರಕಾರಿ ಪ್ರಾಥಮಿಕ ಶಾಲೆಗಳ ಕಲಿಕಾ ಹಬ್ಬ, ಮುಖ್ಯೋಪಾಧ್ಯಾಯರ ಸಭೆ"ಜರುಗಿತು.ಶಿಕ್ಷಣ ಇಲಾಖೆಯ ಬಿ ಆರ್ ಪಿ ಗಳಾದ ಡಿ ಆರ್ ಕ್ಯಾಡಿ ಅವರು ಫೆಬ್ರುವರಿ 14 ರಂದು ರನ್ನ ಬೆಳಗಲಿ ಮತ್ತು ಮುಗಳಖೋಡ ಕ್ಲಸ್ಟರ್ ಗಳ ಕಲಿಕಾ ಹಬ್ಬವನ್ನು ಸ್ಥಳೀಯ ಮುಗಳಖೋಡ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ಒಂದ ರಿಂದ ಐದನೇ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳ ಕಲಿಕಾ ಮಟ್ಟವನ್ನು ಪ್ರೋತ್ಸಾಹಿಸಿ ಅಭಿನಂದಿಸಲು ಸರ್ಕಾರ ಹಮ್ಮಿಕೊಂಡ ಮಹತ್ವದ ಕಾರ್ಯಕ್ರಮವೇ ಕಲಿಕಾ ಹಬ್ಬ. ಈ ಕಲಿಕಾ ಹಬ್ಬದಲ್ಲಿ ಪಾಲಕ ಪೋಷಕ, ವಿದ್ಯಾರ್ಥಿ ವಿದ್ಯಾರ್ಥಿನಿಯರು, ಸಮುದಾಯ ಮತ್ತು ಶಾಲಾ ಎಸ್ ಡಿ ಎಂ ಸಿ ಜೊತೆ ಸೇರಿ ಆಚರಿಸುವ ಹಬ್ಬವಾಗಿದೆ. ತಳಪಾಯದ ಶಿಕ್ಷಣಕ್ಕೆ ಭದ್ರಬುನಾದಿ ಹಾಕುವ ಹಂತವೇ ಪ್ರಾಥಮಿಕ ಶಾಲಾ ಹಂತ, ಪ್ರತಿ ಮಕ್ಕಳು ಆ ಹಂತಗಳ ಆಯಾ ತರಗತಿಗಳ ಸಾಮರ್ಥ್ಯಗಳನ್ನು ಕಲಿತು ಮುಂದಿನ ತರಗತಿಗಳಿಗೆ ಸಿದ್ಧರಾಗುವಂತೆ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದರು.ಬಸವರಾಜ ಬಳ್ಳಾರಿ ಸಿ ಆರ್ ಪಿ ಗಳು ಕಲಿಕಾ ಹಬ್ಬದ ಪೂರ್ವ ಯೋಜತ ಮಾಹಿತಿ ನೀಡಿ, ಪ್ರತಿ ಶಾಲೆಯ ಏಳು ವಿದ್ಯಾರ್ಥಿಗಳು ಪ್ರತಿಯೊಂದು ಸ್ಪರ್ಧೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕೆಂದು ತಿಳಿಸಿ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪೂರಕ ತರಗತಿಗಳನ್ನು ಹಮ್ಮಿಕೊಳ್ಳುತ್ತ. ಮುಂದುವರೆದ ವಿದ್ಯಾರ್ಥಿಗಳ ಜೊತೆಗೆ ಎಲ್ಲ ವಿದ್ಯಾರ್ಥಿಗಳು ಕಲಿಕಾ ಸಾಮರ್ಥ್ಯ ಗಳಿಸುವಂತೆ ಪ್ರಯತ್ನಿಸಬೇಕೆಂದು ಶಿಕ್ಷಕರಲ್ಲಿ ತಿಳಿಸಿದರು. ಸ್ಥಳೀಯ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಮಾಳಪ್ಪ ಮಂಟೂರ ನಮ್ಮ ಶಾಲೆಯಲ್ಲಿ ಕಲಿಕಾ ಹಬ್ಬವನ್ನು ಹಮ್ಮಿಕೊಳ್ಳೊತ್ತಿರುವುದು ಸಂತಸವಾಗಿದೆ. ಮಕ್ಕಳ ಕಲಿಕಾ ಮಟ್ಟವನ್ನು ಸ್ಪರ್ಧೆಗಳ ಮೂಲಕ ಒರಗೆ ಹಚ್ಚಿ ಪ್ರಶಸ್ತಿ ನೀಡಿ ಅಭಿನಂದಿಸುವದು ವಿದ್ಯಾರ್ಥಿಗಳಿಗೆ ಸ್ಪೂರ್ತಿಯನ್ನು ನೀಡುತ್ತಿದೆ. ಈ ಕಾರ್ಯಕ್ರಮಕ್ಕೆ ಎಲ್ಲಾ ಬಗೆಯ ಸಹಾಯ ಸಹಕಾರ ನೀಡಿ, ಯಶಸ್ವಿಗೆ ಶ್ರಮಿಸುತ್ತೆವೆ ಎಂದು ತಿಳಿಸಿದರು.ಸ್ಥಳೀಯ ಶಾಲೆ ಪ್ರಭಾರ ಮುಖ್ಯೋಪಾಧ್ಯಾಯರಾದ ನಾಗರಾಜ ಬಟಾಟೆಪ್ಪಗೊಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯರಾದ ಸೈದಪ್ಪ ನಡುವಿನಕೇರಿ ಮುಖ್ಯ ಶಿಕ್ಷಕರಾದ ಎಸ್ ಪಿ ಇಮ್ಮಡಿ, ಬಿ ಆರ್ ಕರೆನ್ನವರ, ಬಿ ಆರ್ ಬಿಳಗಿ, ಶ್ರೀಮತಿ ಎಸ್‌ಎಲ್ ಕಠಾರೆ ಮತ್ತು 2 ಕ್ಲಸ್ಟರ್ ಗಳ ಮುಖ್ಯೋಪಾಧ್ಯಾಯರು  ಉಪಸ್ಥಿತರಿದ್ದರು. ಶಿಕ್ಷಕರಾದ ಶ್ರೀನಿವಾಸ ಭಜಂತ್ರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.