ರಂಜಾನ, ಹೋಳಿ ಹಬ್ಬ: ಶಾಂತಿ ಸಭೆ

Ranjana, Holi festival: Peace meeting

ರಂಜಾನ, ಹೋಳಿ ಹಬ್ಬ: ಶಾಂತಿ ಸಭೆ 

ಯಮಕನಮರಡಿ 13: ಸ್ಥಳಿಯ ಪೋಲಿಸ ಠಾಣೆ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಹೋಳಿ ಹಬ್ಬ ಹಾಗೂ ಮುಸ್ಲಿಂ ಬಾಂಧವರ ರಂಜಾನ ಹಬ್ಬ ಕುರಿತು ದಿ. 12ರಂದು ಸ್ಥಳಿಯ ಪೋಲಿಸ ಠಾಣೆಯಲ್ಲಿ ಶಾಂತಿ ಸಭೆ ಜರುಗಿತು.  ಸಭೆೆಯಲ್ಲಿ ವ್ಯಾಪ್ತಿಗೆ ಬರುವ ಎಲ್ಲ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದು  ತಮ್ಮ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.  ಸಭೆಯ ಉಸ್ತುವಾರಿ ವಹಿಸಿದ್ದ ಠಾಣಾ ಸಿಪಿಐ ಜಾವೇದ ಮುಸಾಪೂರಿಯವರು ಮಾತನಾಡುತ್ತಾ ಹೋಳಿ ಹಬ್ಬ ಹಾಗೂ ರಂಜಾನ ಹಬ್ಬವನ್ನು ಎಲ್ಲ ಗ್ರಾಮಗಳಲ್ಲಿ ಎಲ್ಲ ಸಮುದಾಯದರು ಭಾವೈಕ್ಯತೆಯಿಂದ ಆಚರಿಸಬೇಕು. ಯಾವುದೇ ತರಹದ ಕೋಮು ಗಲಭೆ ನಡೆದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.  ಹಿಂದೂ ಸಮುದಾಯದ ಮುಖಂಡರು ಮುಸ್ಲಿಂ ಸಮುದಾಯದ ಮುಖಂಡರು ಅತೀ ಪೂರ್ವದಿಂದ ಆಚರಿಸಿಕೊಂಡು ಬಂದಿರುವ ಪದ್ಧತಿಗಳನ್ನು ನಮ್ಮ ನಮ್ಮ ಗ್ರಾಮದಲ್ಲಿ ಶಾಂತಿಯುತವಾಗಿ ಆಚರಿಸಲಾಗುವುದೆಂದು ಹೇಳಿದರು. ನಮ್ಮಲ್ಲಿ ಯಾವುದೇ ತರಹದ ಬಿನ್ನಾಭಿಪ್ರಾಯ ಇರುವುದಿಲ್ಲ. ಎಲ್ಲರೂ ಒಂದೂಗೂಡಿ ಹಬ್ಬದ ಆಚರಣೆ ಮಾಡಲಾಗುವುದು ಎಂದು ಹೇಳಿದರು.