ಅನಸೂಯಾ ಮದನಬಾವಿಯವರಿಗೆ ರಾಣಿ ಅಬ್ಬಕ್ಕ ದೇವಿ ಪ್ರಶಸ್ತಿ

Rani Abbakka Devi award to Anasuya Madanabavi

ಅನಸೂಯಾ ಮದನಬಾವಿಯವರಿಗೆ ರಾಣಿ ಅಬ್ಬಕ್ಕ ದೇವಿ ಪ್ರಶಸ್ತಿ 

ಯರಗಟ್ಟಿ 04: ಸಮೀಪದ ಸಿಂದೋಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಅನಸೂಯಾ ಶಂಕರ​‍್ಪ ಮದನಬಾವಿಯವರಿಗೆ ಕರ್ನಾಟಕ ರಾಜ್ಯ ಮಹಿಳಾ ನೌಕರರ ಸಂಘದ ಆಶ್ರಯದಲ್ಲಿ ಕಲಬುರಗಿಯಲ್ಲಿ ಜರಗುತ್ತಿರುವ ರಾಜ್ಯ ಮಟ್ಟದ ಮಹಿಳಾ ದಿನಾಚರಣೆ ಅಂಗವಾಗಿ ರಾಣಿ ಅಬ್ಬಕ್ಕದೇವಿ ಪ್ರಶಸ್ತಿ ಗೌರವ ಲಭಿಸಿದೆ ಎಂದು ಕಲಬುರಗಿ ಜಿಲ್ಲೆಯ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ನಂದಿನಿ ಸನಬಾಳ್ ಪ್ರಕಟಣೆಯಲ್ಲಿ ತಿಳಿಸಿರುವರು. ಮಾರ್ಚ್‌ 9 ರಂದು ಕಲಬುರಗಿಯ ಅಪ್ಪ ಮೆಮೋರಿಯಲ್ ಹಾಲ್‌ನಲ್ಲಿ ಜರಗುವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.