ರಾಣೇಬೆನ್ನೂರು ನಗರಸಭೆ ಚುನಾವಣೆ: ಅಧ್ಯಕ್ಷ ಚಂಪಕ ಉಪಾಧ್ಯಕ್ಷ ನಾಗರಾಜ್

Ranebennur Municipal Council Election: President Champaka Vice President Nagaraj

ರಾಣೇಬೆನ್ನೂರು ನಗರಸಭೆ ಚುನಾವಣೆ: ಅಧ್ಯಕ್ಷ ಚಂಪಕ ಉಪಾಧ್ಯಕ್ಷ ನಾಗರಾಜ್  

ರಾಣೇಬೆನ್ನೂರು 28: ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದ್ದ ವಾಣಿಜ್ಯ ನಗರದ ನಗರಸಭೆ ಅಧ್ಯಕ್ಷ-ಉಪಾಛಿಧ್ಯಕ್ಷ ಸ್ಥಾನಕ್ಕೆ ಚುನಾವಣೆಯು ಮಂಗಳವಾರ ಸರ್‌.ಎಂ. ವಿಶ್ವೇಶ್ವರಯ್ಯ ಸಭಾಭವನದಲ್ಲಿ ನಡೆಯಿತು. ಚುನಾವಣೆ ಪ್ರಕ್ರಿಯೆ ನಡೆದು, ನೀರೀಕ್ಷೆಯಂತೆ ಕಾಂಗ್ರೆಸ್ನ ಚಂಪಕ್ಕ ರಮೇಶ್ ಬಿಸಲಹಳ್ಳಿ ಅಧ್ಯಕ್ಷೆಯಾಗಿ ಮತ್ತು ಕೆಪಿಜೆಪಿ ಯಿಂದ ನಾಗರಾಜ್ ಪವಾರ (ಕೆಎಮ್ಪಿ ಮಣಿ) ಉಪಾಧ್ಯಕ್ಷರಾಗಿ ಆಯ್ಕೆಯಾದರು.  

ಕಾಂಗ್ರೆಸ್ನಿಂದ ಶ್ರೀಮತಿ ಚಂಪಕ್ಕ ರಮೇಶ್ ಬಿಸಲಹಳ್ಳಿ ಮತ್ತು ಬಿಜೆಪಿಯಿಂದ ಕವಿತಾ ಹೆದ್ದೇರಿ ಅವರು ಅಧ್ಯಕ್ಷ ಸ್ಥಾನಕ್ಕೆ  ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೆಪಿಜೆಪಿ ಯಿಂದ ನಾಗರಾಜ ಪವಾರ (ಕೆಎಂಪಿ ಮಣಿ) ಮತ್ತು ಬಿಜೆಪಿಯಿಂದ ಗುರುರಾಜ ತಿಳವಳ್ಳಿ ತಮ್ಮ ಉಮೇದುವಾರಿಕೆಯನ್ನು ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ಚನ್ನಪ್ಪ ಅವರಿಗೆ ಸಲ್ಲಿಸಿದ್ದರು.  

ಒಟ್ಟು 35 ಸದಸ್ಯರ ಬಲ ಹೊಂದಿರುವ ನಗರಸಭೆಯಲ್ಲಿ ಶಾಸಕ ಮತ್ತು ಸಂಸದ ಸೇರಿ ಒಟ್ಟು 37 ಮತಗಳಿವೆ. ಅದರಲ್ಲಿ ಬಿಜೆಪಿಯ 10ನೇ ವಾರ್ಡಿನ ಮಲ್ಲಿಕಾರ್ಜುನ ಅಂಗಡಿ, 6ನೇ ವಾರ್ಡಿನ ಸುಮಂಗಳಾ ಪಾಟೀಲ, 22ನೇ ವಾರ್ಡಿನ ತ್ರಿವೇಣಿ ಪವಾರ, ಸಂಸದ ಬಸವರಾಜ ಬೊಮ್ಮಾಯಿ ಚುನಾವಣೆಗೆ ಗೈರಾಗಿದ್ದರು. ಅಂದರೆ, ಒಟ್ಟು 33 ಸದಸ್ಯರು ಚುನಾವಣೆಯಲ್ಲಿ ಪಾಲ್ಗೊಂಡಿದ್ದರು. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 18ನೇ ವಾರ್ಡಿನ ಸದಸ್ಯೆ ನೀಲಮ್ಮ ಬಸವರಾಜ ಮಾಕನೂರ ಚಂಪಕ್ಕನ ಪರವಾಗಿ ಮತ ಚಲಾಯಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಸಂದರ್ಭದಲ್ಲಿ ನೀಲಮ್ಮ ಅವರು ಅಸ್ವಸ್ಥರಾಗಿ ಪ್ರಜ್ಞೆ ತಿಪ್ಪಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.  

ಆಗ ಸದಸ್ಯರ ಬಲ 32ಕ್ಕೆ ಕುಸಿಯಿತು. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚಢಂಪಕ್ಕ ರಮೇಶ್ ಬಿಸಲಹಳ್ಳಿ 16 ಮತಗಳನ್ನು ಪಡೆದು ಬೀಗಿದರೆ ಕವಿತಾ ಹೆದ್ದೇರಿ 13 ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಾಗರಾಜ ಪವಾರ 18 ಮತಗಳನ್ನು ಪಡೆದು ನಗು ಬೀರಿದರೆ, ಗುರುರಾಜ ತಿಳವಳ್ಳಿ ಕೇವಲ 8 ಮತ ಪಡೆದು ಪರಾಭವಗೊಂಡರು.  

        ಅನೀರೀಕ್ಷಿತ ಬೆಳವಣಿಗೆ ಮತ್ತು ಆಂತರಿಕ ಒಳ ಒಪ್ಪಂದದಂತೆ ಮಂಗಳವಾರ ನಡೆದ ಚುನಾವಣೆ ಪ್ರಕ್ರಿಯೆ ರಾಜಕೀಯ ಜಾಣ್ಮೆಗೆ ಸಾಕ್ಷಿಯಾಗಿತ್ತು. 15 ಬಿಜೆಪಿ, 9 ಕಾಂಗ್ರೆಸ್, 9 ಆರ್‌.ಶಂಕರ್ ಹಾಗೂ ಎರಡು ಪಕ್ಷೇತರ ಸೇರಿ ಒಟ್ಟು 35 ಸದಸ್ಯರು. 15 ಸದಸ್ಯರ ಬಲ ಹೊಂದಿದ್ದರೂ ಸಹ ಬಿಜೆಪಿ ಪಕ್ಷ ಅಧ್ಯಕ್ಷ ಗಾದೆ ಏರುವಲ್ಲಿ ಎಡವಿತು. ಕೆಪಿಜೆಪಿ ರೂವಾರಿ ಆರ್‌.ಶಂಕರ ಹಾಗೂ ಪಕ್ಷೇತರರ ಬೆಂಬಲದಿಂದ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಗದ್ದುಗೆ ಏರಿದಂತಾಯಿತು. ಇತಿಹಾಸದಿಂದ ಪರಂಪರಾಗತವಾಗಿ ನಡೆದುಕೊಂಡು ಬಂದಿದ್ದ ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತವು ಪ್ರಸ್ತುತ ಗೆಲುವಿನಿಂದಾಗಿ ಮತ್ತೆ ನಗರಸಭೆ ಆಡಳಿತವು ಕಾಂಗ್ರೆಸ್ ತೆಕ್ಕೆಗೆ ಬಂದಂತಾಗಿದೆ. ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಇತ್ತ ಹೊರಗಡೆ ಜಮಾಯಿಸಿದ್ದ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಭಾರಿ ಪಟಾಕಿ ಸಿಡಿಸಿ ಸಂಭ್ರಮಿಸಿದರು