ರಾಣೇಬೆನ್ನೂರು ವಕೀಲರ ಸಂಘದ ಚುನಾವಣೆ

Ranebennur Bar Association Election

ರಾಣೇಬೆನ್ನೂರು ವಕೀಲರ ಸಂಘದ ಚುನಾವಣೆ  

ರಾಣೇಬೆನ್ನೂರು  14 :   ಜಿಲ್ಲೆಯ ವಾಣಿಜ್ಯ ನಗರದ  ರಾಣೇಬೆನ್ನೂರಿನ ವಕೀಲರ ಸಂಘಕ್ಕೆ ಬಹುದೊಡ್ಡ  ಇತಿಹಾಸ ಪರಂಪರೆ ಇದೆ.   ಸಂಘವು 630 ಕ್ಕೂ ಹೆಚ್ಚು ವಕೀಲರು ತಮ್ಮ ಸದಸ್ಯತ್ವ ಹೊಂದಿದ್ದಾರೆ.ದಿ, ಅಡ್ವೊಕೇಟ್ಸ್‌ ಅಸೋಸಿಯೇಷನ್, ನ ಚುನಾವಣೆಯು ಇದೇ ಡಿಸೆಂಬರ್ 18,2024 ರಂದು ಬುಧವಾರ ದಿವಸ ಮುಂಜಾನೆ 8 ರಿಂದ ಮತದಾನ ಪ್ರಕ್ರಿಯೆ ಆರಂಭ.ಸಂಜೆ 4-30: ರವರೆಗೆ ನಡೆದು, 5-30ಕ್ಕೆ ಮತಗಳ ಎಣಿಕೆ ನಂತರ ಅಂದೆ  ಫಲಿತಾಂಶ  ಪ್ರಕಟವಾಗಲಿದೆ ಎಂದು ಚುನಾವಣಾಧಿಕಾರಿ ಎಂ.ಬಿ. ಗೌಡಪ್ಪಗೌಡ್ರು, ಉಪ-ಚುನಾವಣಾಧಿಕಾರಿ ಎಂ. ಕೆ.ಹರವಿ  ಅವರು " " "ಲೋಕದರ್ಶನ "ಕ್ಕೆ ಚುನಾವಣೆ ಕುರಿತು ಮಾಹಿತಿ ನೀಡಿದರು.    ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಸಹ ಕಾರ್ಯದರ್ಶಿ ಸೇರಿ ಒಟ್ಟು 13 ಸದಸ್ಯರ ಬಲದ ಸಂಘಕ್ಕೆ, ಈಗಾಗಲೇ, ಕಾರ್ಯದರ್ಶಿ ಎಸ್‌. ಎಸ್‌. ದ್ಯಾವಕ್ಕಳವರ ಮತ್ತು ಮಹಿಳಾ ಪ್ರತಿನಿಧಿ ಮಂಜುಳಾ ಎಸ್‌. ರೆಡ್ಡೇರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  

         ಸಂಘದ ಅಧ್ಯಕ್ಷರಾಗಿ ನಾಲ್ಕು ಭಾರಿ ಅವಧಿ ಪೂರೈಸಿದ, ಬಿ. ಹೆಚ್‌. ಬುರಡಿಕಟ್ಟಿ ಪುನ: ಸ್ಪರ್ಧೆಯಲ್ಲಿದ್ದು, ಹಿರಿಯ ನ್ಯಾಯವಾದಿ ಪಿ.ಆರ್‌. ಕುಪ್ಪೇಲೂರ ಯುವ ನ್ಯಾಯವಾದಿ ಕೆ.ಜಿ. ಸಣ್ಣಮನಿ ಅವರೊ ಸಹ ಅಧ್ಯಕ್ಷ ಸ್ಥಾನಕ್ಕಾಗಿ  ಸ್ಪರ್ಧಾ ಕಣದಲ್ಲಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕಾಗಿ ಹೆಚ್‌.ಹೆಚ್‌. ತಿಮ್ಮೇನಹಳ್ಳಿ ಮತ್ತು ಕೆ.ಎಸ್‌.ಎಳೇಹೂಳೆ ಇದ್ದಾರೆ.  ಆರ್‌. ಎನ್‌. ಪಾಟೀಲ ಹಾಗೂ ಎಂ.ಎಸ್‌. ಭಿಕ್ಷಾವರ್ತಿಮಠ ಸಹ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.  

  ಕಾರ್ಯಕಾರಿ ಸಮಿತಿಗಾಗಿ ಎಸ್‌.ಡಿ. ಕೆಂಗಲ್, ಎಂ. ಸಿ. ಬಿದರಕಟ್ಟಿ, ಪಿ.ಪಿ. ಪಾರ್ವತಿ, ಎಂ.ಹೆಚ್ ಗುಡುಗೂರ,, ಎಸ್‌. ಕೆ. ಐರಣಿ, ಎಂ.ಜಿ. ರಂಗಮ್ಮನವರ, ಆರ್‌. ಜಿ. ಗಡ್ಡದ, ಡಿಎಲ್ ಬಡಪ್ಪಳವರ, ಮಂಜುನಾಥ ಇಂಗಳಗೊಂದಿ, ಹಾಗೂ ಡಿ.ಎಂ.ಮುದಿಗೌಡ್ರ ಸ್ಪರ್ಧಿಸಿದ್ದಾರೆ. ಒಟ್ಟಾರೆ, ರಾಣೆಬೆನ್ನೂರು ವಕೀಲರ ಸಂಘದ ಚುನಾವಣೆಯು, ಪ್ರತಿ ಭಾರಿಯೂ ಪೈಪೋಟಿ  ಸ್ಪರ್ಧಾ ಮನೋಭಾವನೆಯಲ್ಲಿ ಸಾಗಿದ್ದು, ಎಂದಿನಂತೆ ಈ ಬಾರಿಯೂ ಸಹ, ಪ್ರತಿಯೊಬ್ಬರಿಗೂ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ. ಅಧ್ಯಕ್ಷ ಉಪಾಧ್ಯಕ್ಷ - ಸಹ ಕಾರ್ಯದರ್ಶಿ ಸ್ಥಾನಗಳ ಆಕಾಂಕ್ಷಿ ಅಭ್ಯರ್ಥಿಗಳು ಭಾರಿ ಪ್ರಚಾರ ನಡೆಸಿದ್ದು, ವಿಜಯದ ಮಾಲೆ ಯಾರು ಧರಿಸುತ್ತಾರೋ ಕಾದು ನೋಡಬೇಕಾಗಿದೆ.