ಕಲಾವಿದರ ತವರೂರು ರಾಣೆಬೆನ್ನೂರಿಗೆ ರಾಜಕೀಯ ಕ್ಷೇತ್ರದಲ್ಲಿ ನಮ್ಮ ಕುಟುಂಬಕ್ಕೆ ಆಸಕ್ತಿ ಇಲ್ಲ - ನಟ ಶಿವರಾಜ ಕುಮಾರ

ವಿವಿಧ ಕನ್ನಡ ಪರ ಸಂಘಟನೆಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು

ಕಲಾವಿದರ ತವರೂರು ರಾಣೆಬೆನ್ನೂರಿಗೆ ರಾಜಕೀಯ ಕ್ಷೇತ್ರದಲ್ಲಿ ನಮ್ಮ ಕುಟುಂಬಕ್ಕೆ ಆಸಕ್ತಿ ಇಲ್ಲ - ನಟ ಶಿವರಾಜ ಕುಮಾರ  

 ರಾಣೇಬೆನ್ನೂರು : ನ  26  ನಮ್ಮ ತಂದೆ ಡಾ, ರಾಜಕುಮಾರ್ ಅವರು ಸೇರಿದಂತೆ, ನಮ್ಮ ಕುಟುಂಬದ ಯಾರಿಗೂ ರಾಜಕೀಯದ ಬಗ್ಗೆ ಆಸಕ್ತಿ ಇಲ್ಲ. ಎಂದು ಚಿತ್ರನಟ, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಸ್ಪಷ್ಟಪಡಿಸಿದರು.    ಅವರು ಮಂಗಳವಾರ, ನಗರದ ಶಂಕರ್ ಚಲನಚಿತ್ರ ಮಂದಿರಕ್ಕೆ ಆಗಮಿಸಿದ್ದ ಅವರು, ಶಾಸಕ ಪ್ರಕಾಶ್ ಕೋಳಿವಾಡ ಅವರ ಗ್ರಹಸಭಾದಲ್ಲಿ,, ಶಾಸಕರ ಕುಟುಂಬದ ಗೌರವ ಸನ್ಮಾನ ಸ್ವೀಕರಿಸಿ, ಮಾಧ್ಯಮದವರೊಂದಿಗೆ ರಾಜಕೀಯ ಆಶಕ್ತಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.  

         ಭೈರತಿ ಕಣಗಲ್ ಚಲನಚಿತ್ರವು ಅತ್ಯಂತ ಮಾರ್ಮಿಕ  ಕಥಾ ಹಂದರ ಹೊಂದಿದೆ ಉತ್ತಮ ಕಥಾ ವಸ್ತುವುಳ್ಳ ಚಿತ್ರ. ರಾಜ್ಯಾದ್ಯಂತ ಅತ್ಯುತ್ತಮವಾಗಿ ಪ್ರದರ್ಶನಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ, ತಾವು ತಮ್ಮ ಪತ್ನಿ ಗೀತಾ ಜೊತೆಗೆಉತ್ತರ ಕರ್ನಾಟಕದ ಭಾಗದಲ್ಲಿ ಭೇಟಿ ನೀಡಿ, ಪ್ರೇಕ್ಷಕರೊಂದಿಗೆ ಸಂವಾದಿಸುತ್ತಿದ್ದೇನೆ ಎಂದರು.       ಕಲಾ ಕ್ಷೇತ್ರ ನಮ್ಮ ತಾತನವರ ಕಾಲದಿಂದಲೂ ಬಳುವಳಿಯಾಗಿ ನಮ್ಮ ಕುಟುಂಬಕ್ಕೆ ಸಿಕ್ಕಿದೆ. ತಂದೆ, ನಮ್ಮ ಸಹೋದರರು, ಮತ್ತು ಬಹುತೇಕ  ನಮ್ಮ ಕುಟುಂಬದ ಬಂಧು-ಬಳಗದವರು ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡು ನಾಡಿನ  ಪ್ರೇಕ್ಷಕರ ಪ್ರೀತಿ,ವಿಶ್ವಾಸ ಅಭಿಮಾನ ಗಳಿಸಿದ್ದೇವೆ, ಇದು ನಮ್ಮ ಪೂರ್ವಜನ್ಮದ ಪುಣ್ಯದ ಫಲ ಎಂದು ಭಾವಿಸಿದ್ದೇವೆ ಎಂದರು.  

      ಪತ್ನಿ ಗೀತಾ ಅವರು, ಮಾಜಿ ಮುಖ್ಯಮಂತ್ರಿ ಎಸ್ ಬಂಗಾರ​‍್ಪನವರ ಪುತ್ರಿಯಾಗಿದ್ದರಿಂದ ಅವರಿಗೆ ಸ್ವಲ್ಪ ರಾಜಕೀಯ ಆಶಕ್ತಿ ಇದೆ. ಈಗಾಗಲೇ ಎರಡು ಬಾರಿ ಸೋತಿದ್ದಾರೆ.ಭವಿಷ್ಯದಲ್ಲಿ ಗೆಲುವು ಸಾಧಿಸುತ್ತಾರೆ ಎನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.   

ಪ್ರೇಕ್ಷಕರು ಚಿತ್ರಮಂದಿರದತ್ತ ಧಾವಿಸುತ್ತಿಲ್ಲ ಎನ್ನುವ ಮಾತು ಶುದ್ಧ ಸುಳ್ಳು. ಉತ್ತಮ ಚಿತ್ರಗಳು ಮಾಡಿದರೆ ಪ್ರತಿಯೊಬ್ಬರೂ ಚಿತ್ರಮಂದಿರಕ್ಕೆ ಬರುತ್ತಾರೆ, ಚಿತ್ರ ನೋಡುತ್ತಾರೆ, ಅಷ್ಟೇ ಅಲ್ಲ,ಪ್ರೋತ್ಸಾಹಿಸುತ್ತಾರೆ ಎನ್ನುವ ಬಲವಾದ ನಂಬಿಕೆ ನಮ್ಮದಾಗಿದೆ ಎಂದರು.     ಇತಿಹಾಸದಲ್ಲಿನ ಚಲನಚಿತ್ರಗಳು ಸಾಕಷ್ಟು ಪ್ರದರ್ಶನ ಕಾಣುತ್ತಿದ್ದವು. ಪುನಹ ಆ ಕಾಲ  ಬರುವುದು ಬಹುತೇಕ ಕಷ್ಟ ಸಾಧ್ಯ. ಆದರೂ ಇತ್ತೀಚಿಗೆ ಬಿಡುಗಡೆಯಾದ  ಕೆಲವು ಚಿತ್ರಗಳು ಉತ್ತಮ ಪ್ರದರ್ಶನ ಕಾಣುತ್ತಿರುವುದು. ಭವಿಷ್ಯದ ಆಷಾದಾಯಕ ಬೆಳವಣಿಗೆ ಎಂದರು.  

      ಇಂದಿನ ಯುವ ಸಮುದಾಯ ಮಾದಕ ಚಟಗಳಿಗೆ ಬಲಿಯಾಗುತ್ತಿರುವುದು ಅತ್ಯಂತ ವಿಷಾದ ಸಂಗತಿ. ಮಧ್ಯಪಾನ ರಾಜ್ಯದಲ್ಲಿ ಸಂಪೂರ್ಣವಾಗಿ ನಿಷೇಧವಾಗಬೇಕಾಗಿದೆ, ಮುಕ್ತಗೊಳಿಸಲು ಸಾರ್ವಜನಿಕರು ಎಚ್ಚೆತ್ತುಕೊಂಡು ಎಲ್ಲರೂ ಕೈಜೋಡಿಸಬೇಕಾಗಿದೆ, ಪಾಲಕರು ತಮ್ಮ ಮಕ್ಕಳ ಬಗ್ಗೆ ಅತ್ಯಂತ ಕಾಳಜಿ ವಹಿಸಬೇಕಾದ ಇಂದಿನ ಅಗತ್ಯವಿದೆ ಎಂದರು.        ಇದೇ ಸಂದರ್ಭದಲ್ಲಿ ದ್ವಿತೀಯ ಬಾರಿಗೆ ನಗರಕ್ಕಾಗಮಿಸಿ, ಶಾಸಕರ ಮನೆಗೆ ಧಾವಿಸಿದ ಅವರನ್ನು, ಕೋಳಿವಾಡ ಕುಟುಂಬದವರು ಭವ್ಯ ಸ್ವಾಗತ ನೀಡಿ, ಅತಿಥಿ ಸತ್ಕಾರದೊಂದಿಗೆ, ಹಾವೇರಿ ಯಾಲಕ್ಕಿ ಮಾಲೆ, ಶ್ಯಾಲು,  ಫಲ, ಪುಷ್ಪ ಸ್ಮರಣಿಕೆ ತಾಂಬೂಲವನ್ನಿತ್ತು, ಸನ್ಮಾನಿಸಲಾಯಿತು.  ಈ ಸಂದರ್ಭದಲ್ಲಿ ಶಾಸಕ ಪ್ರಕಾಶ ಕೋಳಿವಾಡ, ಶ್ರೀಮತಿ ಪೂರ್ಣಿಮಾ ಕೋಳಿವಾಡ, ಪುಟ್ಟಪ್ಪ ಮರಿಯಮ್ಮನವರ, ರವೀಂದ್ರ ಗೌಡ ಪಾಟೀಲ್, ನಿತ್ಯಾನಂದ ಕುಂದಾಪುರ,ಕೊಟ್ರೇಶಪ್ಪ ಎಮ್ಮಿ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.