ರಾಣೆಬೆನ್ನೂರು -ಗುತ್ತಲ ರಸ್ತೆ ಗುಡ್ಡದ ಅನ್ವೇರಿ ಬಳಿ ವೈಜ್ಞಾನಿಕವಾಗಿ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹ
ರಾಣೆಬೆನ್ನೂರು 30 : ಬಾಗಲಕೋಟೆ ಬಿಳಿಗಿರಿರಂಗನ ಬೆಟ್ಟ ರಾಜ್ಯ ಹೆದ್ದಾರಿ ಸಂಖ್ಯೆ 57ಕ್ಕೆ ಸಂಬಂಧಿಸಿದಂತೆ ರಾಣೆಬೆನ್ನೂರು -ಗುತ್ತಲ ರಸ್ತೆಯ ಗುಡ್ಡದ ಅನ್ವೇರಿ ಬಳಿ ನಿರ್ಮಿಸಿರುವ ಹೆದ್ದಾರಿ ರಸ್ತೆಯು ಸಮರ್ಕವಾಗಿ ನಿರ್ಮಾಣವಾಗದೆ ಅಪೂರ್ಣವಾಗಿ ಅದು ಆವೈಜ್ಞಾನಿಕಯಿಂದ ಕೂಡಿದ್ದು ಪರಿಣಾಮ ಮೇಲಿಂದ ಮೇಲೆ ಅಪಘಾತಗಳು ಸಂಭವಿಸಿ ಅಮಾಯಕರು ಪ್ರಾಣ ಬಲಿ ಕೊಡುತ್ತಿದ್ದಾರೆ ಕೂಡಲೇ, ಅದನ್ನು ವೈಜ್ಞಾನಿಕವಾಗಿ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಆ ಭಾಗದ ನಾಗರಿಕರು, ಪ್ರತಿಭಟಿಸಿ ತಮ್ಮ ಮನವಿ ಸಲ್ಲಿಸಿದರು. ಗುಡ್ಡದ ಆನ್ವೇರಿ ಯಿಂದ ರಾಣೆಬೆನ್ನೂರು ಮತ್ತು ರಾಣಿಬೆನ್ನೂರಿನಿಂದ ಗುತ್ತಲ ಕಡೆ ಸಂಚರಿಸುವ ರಸ್ತೆಯಲ್ಲಿ ವಿಭಜಕಗಳು ಸರಿಯಾಗಿ ಇಲ್ಲದೆ, ಸಂಚಾರಿಗಳಿಗೆ ಮಾರ್ಗದರ್ಶಕವಾಗದೆ ಇಂತಹ ಅಪಘಾತಗಳು ಮೇಲಿಂದ ಮೇಲೆ ಸಂಭವಿಸಿದೆ. ಇತ್ತೀಚೆಗಷ್ಟೇ ಅಲ್ಲಿನ ಪೆಟ್ರೋಲ್ ಪಂಪ್ ಸನಿಹದಲ್ಲಿ ಪರಸ್ಪರ ಡಿಕ್ಕಿ ಸಂಭವಿಸಿ ಇಬ್ಬರು ಅಮಾಯಕರು ಸ್ಥಳದಲ್ಲಿಯೇ ಸಾವು ಕಂಡರೇ, ಮತ್ತೋರ್ವ ವ್ಯಕ್ತಿ, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಇದಕ್ಕೆ ಕಾರಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ, ಮತ್ತು ಅಭಿಯಂತರರ ಆ ವೈಜ್ಞಾನಿಕ ಹೆದ್ದಾರಿ ನಿರ್ಮಾಣವೇ ಕಾರಣ ಎಂದು ಸಲ್ಲಿಸಿರುವ ಮನವಿಯಲ್ಲಿ ಬಲವಾಗಿ ಆರೋಪಿಸಿದ್ದಾರೆ. ಧರಣಿ ಪ್ರತಿಭಟನೆಯ ಸ್ಥಳಕ್ಕೆ ಧಾವಿಸಿದ, ಬೆಂಗಳೂರಿನ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಬ ಎಇಇ ಪರಮೇಶ್ವರ್ ನಾಯಕ್ ಮತ್ತು ಸುದರ್ಶನ್ ಶರ್ಮಾ ಡೆಪ್ಯೂಟಿ ಕನ್ಸಲ್ಟ್ ಇಂಜಿನಿಯರ್ ದೇವರಗುಡ್ಡ ಮುಖ್ಯದ್ವಾರದ ಮುಂಭಾಗದಲ್ಲಿ ಸಾರ್ವಜನಿಕರು ನೀಡಿದ ಮನವಿ ಸ್ವೀಕರಿಸಿದ ಅವರು ಘಟನೆ ಕುರಿತಂತೆ ಪರೀಶೀಲನೆ ಮಾಡಲಾಗುವುದು, ಅಲ್ಲವೇ ಮನವಿಯಲ್ಲಿ ತಿಳಿಸಿರುವಂತೆ ಅತೀ ಶೀಘ್ರದಲ್ಲಿಯೇ,ಸಿಗ್ನಲ್, ಹಂಸ, ಬಾರ್ಡರ್ ಲೈನ್,ಎಚ್ಚರಿಕೆಯ ಜಾಗೃತಿ ದೀಪಗಳು, ಸರ್ಕಲ್ ನಿರ್ಮಾಣ, ಆನ್ವೇರಿ ಬಳಿ ವೇಗಮಿತಿ ಬ್ರೇಕರ್ ಮತ್ತಿತರ ವ್ಯವಸ್ಥೆ ಅಳವಡಿಸಲಾಗುವುದು ಅಲ್ಲದೆ ಸಮಗ್ರವಾಗಿ ಚರ್ಚಿಸಲು ಡಿಸೆಂಬರ್ 31 ರಂದು ಗ್ರಾಮಸ್ಥರ ಸಭೆ ಕರೇದು ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಭಟನಾಕಾರರು ಸಾವು ಕಂಡ ಅಮಾಯಕರ ಕುಟುಂಬಗಳಿಗೆ ತಲಾ ಹತ್ತು ಲಕ್ಷ ರೂಪಾಯಿ ಪರಿಹಾರ ಧನ ಮತ್ತು ಗಾಯಾಳುವಿಗೆ 5 ಲಕ್ಷ ರೂಗಳ ಪರಿಹಾರ ವಿತರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ರಸ್ತೆ ನಿರ್ಮಾಣ ಕರ್ನಾಟಕ ರಾಜ್ಯ ಹೆದ್ದಾರಿ ಯೋಜನೆಯ ವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಬೇಕು ಮೊನ್ನೆ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಅಮಾಯಕ ಯುವಕರು ಸಾವನ್ನಪ್ಪಿದ್ದಾರೆ ಈ ದುರ್ಘಟನೆಗೆ ಅವಜ್ಞಾನಿಕ ರಸ್ತೆ ನಿರ್ಮಾಣವೇ ಕಾರಣ ಆದ್ದರಿಂದ ಮೃತ ಕುಟುಂಬಗಳಿಗೆ 10ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು. ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ದೇವರಗುಡ್ಡ, ಗುಡ್ಡದ ಆನ್ವೇರಿ,ಹುಲ್ಲತ್ತಿ ಶಿಡಗನಾಳ, ಹೊನ್ನತ್ತಿ,ಯಲ್ಲಾಪುರ, ನೊಕಾಪುರ, ಎಲ್ಲಾಪುರ, ಗ್ರಾಮಗಳ ನೂರಾರು ಮುಖಂಡರು, ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಅಭಿಯಂತರ ಸುದರ್ಶನ್ ಶರ್ಮ, ಗ್ರಾಮದ ಮುಖಂಡರಾದ ಭರ್ಮಪ್ಪ ಉರ್ಮಿ, ಜಗದೀಶ್ ಕೆರೋಡಿ, ವೀರೇಶ್ ಗುಡೂರ್, ಕರಿಯಪ್ಪ ಉರ್ಮಿ, ಸುರೇಶ್ ಅಡೂರ್, ಮಾಲತೇಶ ಸಂಸಿ, ನಾಗರಾಜ್ ಲಾಠಿ, ದ್ಯಾಮಪ್ಪ ನಾಯರ್, ಹನುಮಂತಪ್ಪ ಕಣ್ಮಣಿ, ಬಸವರಾಜ್ ಮಿರ್ಜಿ, ಆನಂದ್ ಜಂಗಳಿ, ಕರಿಯಪ್ಪ ಆನ್ವೇರಿ, ಸಿಡಿಗ್ನಾಳ ಹೊನ್ನತಿ, ನೊಕಾಪುರ ಹನುಮಪ್ಪ ಮತ್ತಿತರರು ಪಾಲ್ಗೊಂಡಿದ್ದರು.