ಲೋಕದರ್ಶನವರದಿ
ರಾಣೇಬೆನ್ನೂರ06: ಮಕ್ಕಳ ವ್ಯಕ್ತಿತ್ವ ವಿಕಾಸತೆಗೊಳಿಸುವ ನಿಟ್ಟಿನಲ್ಲಿ ಸಮಾಜ ಸಂಘ ಸಂಸ್ಥೆಗಳು ಮುಂದಾಗಿ ಅವರ ಸಮಗ್ರ ವಿಕಾಸತೆಗೆ ಪರಿಶ್ರಮಿಸಬೇಕಾದ ಇಂದಿನ ಅಗತ್ಯವಿದೆ ಎಂದು ತರಳಬಾಳು ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ|| ಎಂ.ಈ.ಶಿವಕುಮಾರ ಹೊನ್ನಾಳಿ ಹೇಳಿದರು.
ಅವರು ಸೋಮವಾರ ಹಲಗೇರಿ ರಸ್ತೆ ಬೀರೇಶ್ವರ ನಗರದ ಸಕರ್ಾರಿ ಶಾಲೆ ನಂ.4ರಲ್ಲಿ ವಿಶ್ವ ವ್ಯಂಗ್ಯ ಚಿತ್ರಕಾರರ ದಿನಾಚರಣೆ ನಿಮಿತ್ಯ ಶುಭಾರಂಭ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಕಾಗದ ಸಾಂಗತ್ಯ ವೇದಿಕೆ ಮತ್ತು ಸಕರ್ಾರಿ ಶಾಲೆ ಸಂಯುಕ್ತವಾಗಿ ಆಯೋಜಿಸಿದ್ದ ವಿಶ್ವ ವ್ಯಂಗ್ಯ ಚಿತ್ರಕಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವ್ಯಂಗ್ಯಚಿತ್ರಗಳು ಸಮಾಜದಲ್ಲಿರುವ ಮತ್ತು ರಾಜಕೀಯ ಇಂದಿನ ಸ್ಥಿತಿಗತಿ ಮತ್ತು ಬದುಕಿನ ನಿಜ ವಾಸ್ತವಿಕ ಪರಿಸ್ಥಿತಿಯನ್ನು ಪ್ರತಿಯೊಬ್ಬರಿಗೂ ಮನಮುಟ್ಟಿಸುವಲ್ಲಿ ಮತ್ತು ಪರಿಣಾಮ ಬೀರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಲಿದೆ. ವ್ಯಂಗ್ಯಚಿತ್ರ ಕೆಲವರಿಗೆ ನಗು ತಂದರೆ ಹಲವರ ಹೊಟ್ಟೆಯಲ್ಲಿ ಚುರುಕು ಬತ್ತಿ ಹೊತ್ತಿಸುತ್ತದೆ. ಮತ್ತೆ ಕೆಲವರನ್ನು ಚಿಂತನೆಗೆ ಗುರಿಮಾಡುತ್ತದೆ. ಚಿತ್ರಗಾರರಲ್ಲಿ ಇಲ್ಲದ್ದು ವ್ಯಂಗ್ಯಚಿತ್ರಗಾರರಲ್ಲಿ ಇರುತ್ತದೆ ಎಂದರು.
ವಿದ್ಯಾಥರ್ಿಗಳು ತಮ್ಮ ಶೈಕ್ಷಣಿಕ ಅಧ್ಯಯನ ಬದುಕಿನಲ್ಲಿ, ಆರಂಭದ ಹಂತದಲ್ಲಿಯೇ ದುಂಡು ಬರಹ ಬರೆಯುವುದನ್ನು ರೂಢಿಸಿಕೊಳ್ಳಬೇಕು. ಅದಕ್ಕೆ ಚಿತ್ರಕಲೆ ಸಹಕಾರಿಯಾಗುತ್ತದೆ. ಸಾಹಿತ್ಯದ ಅಧ್ಯಯನ, ವಿಷಯ ವಿಶ್ಲೇಷಣಾ ಗುಣ, ಎಲ್ಲರನ್ನೂ ಮರೆಮಾಚಿಸಿ ಗೊಳ್ಳನೆ ನಗಿಸುವ ಗುಣ ಇದ್ದರಷ್ಟೆ ಈ ರಂಗ ಒಲಿಯುವುದು. ಓರೆಕೋರೆಗಳನ್ನು ಬಳಸಿ ಕಡಿಮೆ ಗೆರೆಗಳಲ್ಲಿ ವ್ಯಕ್ತಿಯ ಭಾವಚಿತ್ರವನ್ನು ರಚಿಸುವ ಜಾಣ್ಮೆ ಇಲ್ಲದಿದ್ದರೆ ರಾಜಕೀಯ ವ್ಯಂಗ್ಯಚಿತ್ರಗಾರರಾಗಲು ಸಾಧ್ಯವಾಗುವುದಿಲ್ಲ ಎಂದರು.
ವ್ಯಂಗ್ಯಚಿತ್ರ ಆ ದಿನದ ರಾಜಕೀಯ ಪರಿಸ್ಥಿತಿಯ ಕನ್ನಡಿ. ವ್ಯಂಗ್ಯಚಿತ್ರಕಲೆ ಅಪರೂಪದ ಕಲೆ. ಸುಲಭವಾಗಿ ಸಿದ್ಧಿಸುವ ಕಲೆ ಅಲ್ಲ. ಪ್ರಯತ್ನಪೂರ್ವಕವಾಗಿ ಮೈಗೂಡಿಸಿಕೊಂಡಲ್ಲಿ ಮಾತ್ರ ಈ ಕಲೆ ವೃದ್ಧಿಸುತ್ತದೆ ಅಂತವರ ಸಾಲಿನಲ್ಲಿ ನಾಮದೇವ ಕಾಗದಗಾರ ನಿಲ್ಲುತ್ತಾರೆ.
ದೈನಂದಿನ ಬದುಕಿನ ಜಂಜಾಟಗಳನ್ನು ಕುಂಚದಲ್ಲಿ ಅರಳಿಸಿ ನೋಡುಗರ ಮುಖದ ಮೇಲೆ ನಗುವಿನ ಗೆರೆ ಎಳೆಯುವ, ವ್ಯಂಗ್ಯ, ಹಾಗೂ ವಿಡಂಬನೆಯ ಮೂಲಕ ಲೋಕದ ಡೊಂಕು ಎತ್ತಿ ತೋರುವ ಈ ವ್ಯಂಗ್ಯಚಿತ್ರಕಾರನದ್ದು ಅಪರೂಪದ ಗ್ರಹಿಕೆಯಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶುಭಾರಂಭ ಗ್ರಾಮೀಣಾಬಿವೃದ್ಧಿ ಸಂಸ್ಥೆಯ ಸಂಜೀವ್ ದೇಶಪಾಂಡೆ ಅವರು, ಚಿತ್ರಕಲಾವಿದರು ಹಲವಾರು ಜನರಿರುತ್ತಾರೆ ಆದರೆ ವ್ಯಂಗ್ಯಚಿತ್ರಕಾರರು ಬೆರಳೆಣಿಕೆಗೊಬ್ಬರು. ಈ ಜಿಲ್ಲೆಯ ವ್ಯಂಗ್ಯಚಿತ್ರಕಾರರಾದ ನಾಮದೇವ ಕಾಗದಗಾರ ಇವರು ಸಮಾಜದಲ್ಲಿ ಪ್ರಸ್ತುತ ವಿಷಯ ಕೈಗೆತ್ತಿಕೊಂಡು ಬದುಕಿನ ಮಗ್ಗುಲುಗಳಿಗೆ ರೇಖೇಯ ರೂಪ ನೀಡುವುದರ ಜೊತೆಗೆ ಅದಕ್ಕೊಂದು ಕಚಗುಳಿ ಇಡುವಂತಹ ವ್ಯಂಗ್ಯ, ವಿಡಂಬನೆಯ ಅರ್ಥ ನೀಡುವ ಪ್ರತಿಭೆಯಾಗಿದ್ದಾರೆ ಎಂದರು.
ವ್ಯಂಗ್ಯಚಿತ್ರವನ್ನು ಗಮನಿಸುವ ಜನ ಅದನ್ನು ರಚಿಸಿದ ವ್ಯಕ್ತಿಯನ್ನು ಗುತರ್ಿಸುವುದಿಲ್ಲ. ಹಾಗಾಗಿ ನಮ್ಮ ಶುಭಾರಂಭ ಗ್ರಾಮೀಣಭಿವೃದ್ಧಿ ಸಂಸ್ಥೆ ಇವರನ್ನು ಗುರುತಿಸಿ ಇಂದು ಈ ವಿಶ್ವ ವ್ಯಂಗ್ಯಚಿತ್ರಕಾರ ದಿನಾಚರಣೆಯಲ್ಲಿ ನಾಮದೇವ ರಚಿಸಿದ 250 ವ್ಯಂಗ್ಯಚಿತ್ರಗಳ ಪ್ರದರ್ಶನ ಆಯೋಜಿಸಲಾಗಿದೆ ಎಂದರು.
ಸಮಾರಂಭದಲ್ಲಿ ತಾಲೂಕ ಅಕ್ಷರ ದಾಸೋಹ ಸಹಾಯಕ ನಿದರ್ೇಶಕ ಲಿಂಗರಾಜ ಸುತ್ತಕೋಟೆ, ಪ್ರಧಾನ ಗುರುಮಾತೆ ಸಾವಿತ್ರಮ್ಮ ಮಲ್ಲನಗೌಡ್ರ, ಅಭಿರುಚಿ ಜನಪದ ಸಂಸ್ಥೆ ಕಾರ್ಯದಶರ್ಿ ಕೆ.ಎಸ್. ನಾಗರಾಜ, ವ್ಯಂಗ್ಯಚಿತ್ರಕಾರ ನಾಮದೇವ ಕಾಗದಗಾರ ಸಾಹಿತಿಗಳಾದ ಪ್ರಬಾಕರ ಶಿಗ್ಲಿ, ಮಂಜುನಾಥ ಕೊರವರ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪರಿಸರ ಜಾಗೃತಿ ಕುರಿತು ಚಿತ್ರಕಲಾ ಸ್ಪದರ್ೆ ಆಯೋಜಿಸಲಾಗಿತ್ತು. ನೂರಾರು ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು. ಸ್ಪದರ್ಾ ವಿಜೇತರಾದ ಅನುಷಾ.ಎಸ್.ಕೋಗಳೆ (ಪ್ರಥಮ), ಗಗನ್ ಪ್ರಕಾಶ ಬನಾಜೆ (ದ್ವಿತೀಯ), ಬೀರೇಶ್ ಕೊಳ್ಳೇರ (ತೃತೀಯ), ಪ್ರೌಢ ವಿಭಾಗ: ನಾಗವೇಣಿ ಕಂಬಳಿ (ಪ್ರ), ವಿಕಾಸ್.ಬಿ.ರಡ್ಡೇರ (ದ್ವಿ) ಮತ್ತು ಅನುಷಾ.ಬಿ.ತೆವರಿ (ತೃ) ಇವರುಗಳಿಗೆ ಬಹುಮಾನ ವಿತರಿಸಲಾಯಿತು. ಕಲಾವಿದ ನಾಮದೇವ ಕಾಗದಗಾರ ವ್ಯಂಗ್ಯಚಿತ್ರಗಳ ಪ್ರದರ್ಶನವು ನಡೆದು ಸಾರ್ವಜನಿಕರ ಗಮನ ಸೆಳೆದವು.