ಶೈಕ್ಷಣಿಕ ಅಭಿವೃದ್ದಿಗೆ ಶ್ರಮಿಸುತ್ತಿರುವ ರಂಭಾಪುರಿ ಮಹಾವಿದ್ಯಾಲಯ : ಹಿರೇಮಠ
ಶಿಗ್ಗಾವಿ 05: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನೊಳಗೊಂಡು ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶ್ರೀರಂಭಾಪುರಿ ಜಗದ್ಗುರು ವೀರ ಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾ ವಿದ್ಯಾಲಯದ ಕಾರ್ಯ ಶ್ಲಾಘನೀಯವಾದದ್ದು ಎಂದು ಕಾಲೇಜ ಶೈಕ್ಷಣಿಕ ನಿರ್ದೇಶಕ ಪ್ರೊ.ಪಿ.ಸಿ.ಹಿರೇಮಠ ಹೇಳಿದರು.
ಪಟ್ಟಣದ ಕಾಲೇಜಿನಲ್ಲಿ ನಡೆದ ಹಳೇ ವಿದ್ಯಾರ್ಥಿಗಳ ಸಂಘದ ನೂತನ ಪದಾಧಿಕಾರಿಗಳ ನೇಮಕ ಸಭೆಯಲ್ಲಿ ಮಾತನಾಡಿದ ಅವರು, ಕಾಲೇಜ ಶೈಕ್ಷಣಿಕ ಕಾಳಜಿ ಹೊಂದಿರುವ ಹಳೇ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಸದಾ ಪ್ರೋತ್ಸಾಹ ನೀಡಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಹಳೆಯ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವುದು ನಮ್ಮ ಅಭಿಲಾಷೆ. ಜತೆಗೆ ಕಾಲೇಜಿನ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರೆಯಲಿದೆ ಎಂದರು.
ಪ್ರಾಚಾರ್ಯ.ಬಿ.ವೈ.ತೊಂಡಿಹಾಳ ಮಾತನಾಡಿ, ಕಾಲೇಜ ಉಪನ್ಯಾಸಕರ ಜತೆಗೆ ಅನ್ಯೋನ್ಯ ಒಡನಾಟ ಹೊಂದಿರುವ ಹಳೇ ವಿದ್ಯಾರ್ಥಿಗಳ ನಿಸ್ವಾರ್ಥ ಸೇವೆ ಅನುಕರಣೀಯವಾಗಿದೆ. ಭವಿಷ್ಯದಲ್ಲಿ ಅವರ ಸೇವೆಯ ಸದ್ಬಳಕೆ ಮಾಡಿಕೊಂಡು ಮುಂದುವರೆಯುತ್ತವೆ ಎಂದರು.
ವಿನಯ್ ಎಚ್.ಕೆ.ರಾಜರತನ್ ದಾದುಗೌಡ್ರ, ಎನ್.ಎಫ್. ಬಂಕಾಪುರ, ಶೋಭಾ ಅಳಗವಾಡಿ ಉಪಸ್ಥಿತರಿದ್ದರು. ಗೂಳಪ್ಪ ಅರಳಿಕಟ್ಟಿ ನಿರ್ವಹಿಸಿದರು.
ಪಟ್ಟಣದ ಶ್ರೀ ರಂಭಾಪುರಿ ಜಗದ್ಗುರು ವೀರ ಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾ ವಿದ್ಯಾಲಯದ ಹಳೇ ವಿದ್ಯಾರ್ಥಿಗಳ ಸಂಘದ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಕರಡಿ, ಉಪಾಧ್ಯಕ್ಷರಾಗಿ ನಾಗರಾಜ ಬ್ರಹ್ಮಾವರ, ಪರಿಮಳಾ ಜೈನ್ ಕಾರ್ಯದರ್ಶಿ, ಎಸ್.ವಿ. ಕುಲಕರ್ಣಿ ಸಹ ಕಾರ್ಯದರ್ಶಿ, ಧೀರೇಂದ್ರ ಕುಂದಾಪುರ, ಲಿಂಗರಾಜ ಕುನ್ನೂರ ಸಂಘಟನಾ ಕಾರ್ಯದರ್ಶಿಗಳು, ಗುರು ಅಂಗಡಿ, ಗೂಳಪ್ಪ ಅರಳಿಕಟ್ಟಿ ಖಜಾಂಚಿ, ಹನುಮಂತಪ್ಪ ಬೆಂಗೇರಿ, ಮಂಗಳಾ ಪಾಟೀಲ, ಶಿವಾನಂದ ವನಹಳ್ಳಿ, ಜಿಶಾನಖಾನ್ ಪಠಾಣ, ಅರವಿಂದ ಗುಡ್ಡಣ್ಣನವರ, ರಾಜು ಕೆಂಭಾವಿ, ಸುಮಂಗಲಾ ಅತ್ತಿಗೇರಿ, ಅಶೋಕ ಶಿಗ್ಗಾಂವ, ವೀರಣ್ಣ ಹಳೇಮನಿ, ಸುರೇಶ ಯಲಿಗಾರ, ಬಸವರಾಜ ಹಂಚಿನಾಳ, ಮಂಜುನಾಥ ದುಬೆ, ಚನ್ನಮ್ಮ ಬಡ್ಡಿ ಸದಸ್ಯರು.