ರಂಜಾನ್ ಹಬ್ಬ ಆಚರಣೆ
ಹೊಸಪೇಟೆ 31: ಇಂದು ನಗರದಲ್ಲಿ ಪವಿತ್ರವಾದ ರಂಜಾನ್ ಹಬ್ಬವು ಬಹಳ ಸಡಗರ ಸಂಬ್ರಮದಿಂದ ಆಚರಣೆ ಮಾಡಿದ್ದು, ವಿವಿಧ ಪ್ರದೇಶಗಳಿಂದ ಆಗಮಿಸಿದ ಸಾವಿರಾರು ಮುಸ್ಲಿಂ ಬಾಂದವರು ಅಂಬೇಡ್ಕರ್ ಸರ್ಕಲ್ ಹತ್ತಿರದ ಈದ್ಗಾ ಮೈದಾನದಲ್ಲಿ ಸೇರಿ ಪ್ರಾರ್ಥನೆಯನ್ನು ಸಲ್ಲಿಸಿದರು,
ಹಾಗೂ ಈದ್ಗಾ ಮೈದಾನದಲ್ಲಿ ಪ್ರಾರ್ಥನೆಯ ಸಂದರ್ಭದಲ್ಲಿ ಹಬ್ಬವನ್ನು ಉದ್ದೇಶಿ ಮಾತಾನಾಡಿದ ಹೊಸಪೇಟೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಹಾಗು ಹೊಸಪೇಟೆ ಅಂಜುಮನ್ ಖಿದ್ಮತೆ ಇಸ್ಲಾಂ ಸಮಿತಿಯ ಅಧ್ಯಕ್ಷರು ಆದ ಎಚ್.ಎನ್. ಮಹಮ್ಮದ ಇಮಾಮ್ ನಿಯಾಜಿರವರು ಎಲ್ಲಾ ಮುಸ್ಲಿಂ ಬಾಂದವರು 30 ದಿನಗಳ ಉಪವಾಸವನ್ನು ಪೂರೈಸಿದ ನಂತರ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾ ಕೆಟ್ಟದ್ದನ್ನು ನೋಡಬಾರದು, ಕೆಟ್ಟದ್ದನ್ನು ಕೇಳಬಾರದು, ಕೆಟ್ಟದ್ದನ್ನು ಮಾಡಬಾರದು ಎಂದು ಪ್ರತಿಜ್ಞೆಯನ್ನು ಮಾಡುತ್ತಾ ಈ ಒಂದು ರಂಜಾನ್ ಹಬ್ಬದ ನಿಮಿತ್ತ ಸಾಮೂಹಿಕ ಪ್ರಾರ್ಥನೆಯನ್ನು ಭಗವಂತನಿಗೆ ಸಲ್ಲಿಸಿರುತ್ತೇವೆ. ಈ ವರ್ಷದ ರಂಜಾನ್ ಹಬ್ಬವು ನಮ್ಮ ಕ್ಷೇತ್ರದ ಸಮಸ್ತ ಜನತೆಗೆ ಹಾಗೂ ದೇಶದ ಪ್ರತಿಯೊಬ್ಬರಿಗೂ ಸುಃಖ, ಶಾಂತಿ, ಸಂಪತ್ತು, ನೆಮ್ಮದಿ ಸೌಹಾರ್ದತೆ, ನೀಡಿ ಪ್ರೀತಿ ಪ್ರೇಮ ವಾತ್ಸಲ್ಯದಿಂದ ಸಮೃದ್ದಿಗೊಂಡು ಉತ್ತಮ ಆರೋಗ್ಯ ನೀಡಲಿ ಆ ಭಗವಂತನಲ್ಲಿ ಪ್ರಾರ್ಥಿಸುತ್ತಾ ಸಮಸ್ತ ನಾಡಿನ ಎಲ್ಲಾ ಸಮಾಜಗಳ ಜನತೆಗೆ ರಂಜಾನ ಹಾಗು ಯುಗಾದಿ ಹಬ್ಬದ ಹಾರ್ಧಿಕ ಶುಬಾಶಯಗಳನ್ನು ತಿಳಿಸಿದರು. ನಂತರ ಅಂಜುಮನ್ ಸಂಸ್ಥೆಯ ಅಭಿವೃದ್ದಿ ಕಾರ್ಯಕ್ರಮಗಳ ಕುರಿತು ವಿವರಣೆ ನೀಡಿದರು.
ಈದ್ಗಾ ಮೈದಾನದಲ್ಲಿ ಈ ಒಂದು ಸಂದರ್ಭದಲ್ಲಿ ಅಂಜುಮನ್ ಕಮಿಟಿ ಉಪಾಧ್ಯಕ್ಷರಾದ ಎಮ್.ಎಮ್. ಫೈರೋಜ್ ಖಾನ್, ಕಾರ್ಯದರ್ಶಿಯಾದ ಅಬೂಬಕ್ಕರ್ ಅಶ್ರಫಿ, ಖಜಾಂಚಿಯಾದ ಅನ್ಸರ್ ಭಾಷ, ಜಂಟಿ ಕಾರ್ಯದರ್ಶಿಯಾದ ಡಾ. ದುರ್ವೆಶ್ ಮೈನುದ್ದೀನ್, ಸದ್ಯಸರಾದ ಸದ್ದಮ್ ಹುಸೇನ್, ಮೊಹಮ್ಮದ್ ಮೋಸಿನ್, ಗುಲಾಮ್ ರಸೂಲ್, ಹಾಗೂ ನಗರಸಭಾ ಸದಸ್ಯರಾದ ಖದೀರ, ಖಲಂದರ್, ಗೌಸ್, ಸಮಾಜದ ಹಿರಿಯ ಮುಖಂಡರು ಹಾಗು ಸಾವಿರಾರು ಮುಸ್ಲಿಂ ಭಾಂದವರು ಭಾಗವಹಿಸಿದರು.