ಮಹಿಷಾಸುರ ಸೊಸೈಟಿಗೆ ಅಧ್ಯಕ್ಷರಾಗಿ ರಾಜು ಹೊನ್ನಾಳಿ
ರಾಣೇಬೆನ್ನೂರ 24 : ಸ್ಥಳೀಯ ಮಹಿಷಾಸುರ ಮರ್ದಿನಿ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ರಾಜು ಗಿರಿಯಪ್ಪ ಹೊನ್ನಾಳಿ ಹಾಗೂ ಉಪಾಧ್ಯಕ್ಷರಾಗಿ ಸುಮಾ ಗೋಪಾಲ ಕುಂದಾಪುರ ಅವಿರೋಧವಾಗಿ ಆಯ್ಕೆಗೊಂಡರುಎಂದು ಚುನಾವಣಾಧಿಕಾರಿ ಚಂದ್ರಶೇಖರ್ ಭಜಂತ್ರಿ ಮತ್ತು ಸೊಸೈಟಿ ವ್ಯವಸ್ಥಾಪಕ ರವೀಂದ್ರ ಮಡಿವಾಳರ ಘೋಷಿಸಿದರು. ಆನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಸೊಸೈಟಿಯ ಸರ್ವ ನಿರ್ದೇಶಕರುಗಳು, ಸಿಬ್ಬಂದಿಗಳು, ವಿವಿಧ ಸಂಘ- ಸಂಸ್ಥೆಗಳ ಮುಖಂಡರುಗಳು, ನಾಗರೀಕರು ನೂತನ ಅಧ್ಯಕ್ಷ- ಉಪಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಿದರು.