ರಾಜರಾಜೇಶ್ವರಿ ಮಹಿಳಾ ಕಾಲೇಜು : ಕವಿತಾ ಹೂಲಿ ಹಳ್ಳಿ, 9ನೇ ರಾಂಕ್
ರಾಣೇಬೆನ್ನೂರು 07: ನಗರದ ಕೆಎಲ್‌ಇ ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿ, ಕವಿತಾ ಗುಡ್ಡಪ್ಪ ಹೂಲಿಹಳ್ಳಿ ಅವರು, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ನಡೆಸಿದ ಬಿಎ ಅಂತಿಮ ವರ್ಷದ ಪರೀಕ್ಷೆಯಲ್ಲಿ 9ನೇ ರಾಂಕ್ ಗಳಿಸಿ, ವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾಳೆ. ಸಾಧನೆ ಮೆರೆದ ಕವಿತಾ ಹೂಲಿಹಳ್ಳಿ ಅವರಿಗೆ, ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಧ್ಯಕ್ಷ ವ್ಹಿ.ಪಿ. ಲಿಂಗನಗೌಡ್ರ, ಪ್ರಾಚಾರ್ಯ ಡಾ, ನಾರಾಯಣ ನಾಯಕ್ ಎಸ್, ಮತ್ತು ಸದಸ್ಯರು ಉಪನ್ಯಾಸಕರು ಸಿಬ್ಬಂದಿ ಹಾರ್ದಿಕವಾಗಿ ಅಭಿನಂದಿಸಿದ್ದಾರೆ.