ರಾಯಬಾಗ ಪಟ್ಟಣ; ದ್ಯಾಮವ್ವ, ಕಾಳಿಕಾದೇವಿ ಮೂತರ್ಿ ಪ್ರತಿಷ್ಠಾಪನೆ

ರಾಯಬಾಗ 29: ಪಟ್ಟಣದ ಬಡಿಗೇರ ಗಲ್ಲಿಯ ದ್ಯಾಮವ್ವ ಹಾಗೂ ಕಾಳಿಕಾದೇವಿ ಮೂತರ್ಿ ಪ್ರತಿಷ್ಠಾಪನೆ ಮೂರನೇ ವಾಷರ್ಿಕ ಮಹೋತ್ಸವವು ಶುಕ್ರವಾರದಂದು ಸಂಭ್ರಮದಿಂದ ಜರುಗಿತು. 

ಬೆಳಿಗ್ಗೆ ಪಟ್ಟಣದ ಹನುಮಾನ ಮಂದಿರದಿಂದ ಬಡಿಗೇರ ಗಲ್ಲಿಯ ಕಾಳಿಕಾದೇವಿ ದೇವಸ್ಥಾನದ ವರೆಗೆ ಕುಂಭಮೇಳದೊಂದಿಗೆ ದೇವಿಯ ಭಾವಚಿತ್ರ ಮಾಡಲಾಯಿತು. ನಂತರ ದೇವಸ್ಥಾನದಲ್ಲಿ ಉಡಿ ತುಂಬುವುದು ಮತ್ತು ಪೂಜಾ ಕಾರ್ಯಕ್ರಮಗಳು ನೆರವೇರಿದವು. 

ಮಧ್ಯಾಹ್ನ ಭಕ್ತಾದಿಗಳು ಮಹಾಪ್ರಸಾದ ಸ್ವೀಕರಿಸಿ, ದೇವಿ ದರ್ಶನ ಪಡೆದರು. ಉದಯ ಪೋತದಾರ, ಚಿದಾನಂದ ಸುತಾರ, ಮೊನೆಶ ಸುತಾರ, ಅಪ್ಪಾಸಾಬ ಸುತಾರ ಸೇರಿದಂತೆ ನೂರಾರು ಭಕ್ತಾದಿಗಳು ಮತ್ತು ಕುಂಭಹೊತ್ತ ಸುಮಂಗಲೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.