ಮತದಾರನ ಮನ ತಲುಪುವ ಶಕ್ತಿ ಯೋಜನೆ ರಾಹುಲ್ ಕನಸು: ಗೊಂಡಬಾಳ

ಲೋಕದರ್ಶನ ವರದಿ

ಗಂಗಾವತಿ 26: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ಗಾಂಧಿಯವರೊಂದಿಗೆ ಮತದಾರ ನೇರ ಸಂಪರ್ಕ ಕಲ್ಪಿಸುವ ಶಕ್ತಿ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಕೆಪಿಸಿಸಿ ಕಾಮರ್ಿಕ ಘಟಕದ ರಾಜ್ಯ ಕಾರ್ಯದಶರ್ಿ, ಪತ್ರಕರ್ತ ಮಂಜುನಾಥ ಜಿ. ಗೊಂಡಬಾಳ ತಿಳಿಸಿದರು.

ಅವರು ಬ್ಲಾಕ್ ಕಾಂಗ್ರೆಸ್ ಕಾಯರ್ಾಲಯದಲ್ಲಿ ಭಾನುವಾರ ಯೋಜನೆ ಕುರಿತಂತೆ ಹಮ್ಮಿಕೊಂಡಿದ್ದ ಸರಳ ಕಾರ್ಯಕ್ರಮದಲ್ಲಿ ಬ್ಲಾಕ್ ಅಧ್ಯಕ್ಷ, ನಗರಸಭೆ ಸದಸ್ಯ ಶಾಮೀದ್ ಮನಿಯಾರ್ ಚಾಲನೆ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಬೂತಮಟ್ಟದ ಮತದಾರರನ್ನು ಶಕ್ತಿ ಯೋಜನೆ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ನೇರ ಸಂಪರ್ಕ ಕಲ್ಪಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ ವಿಚಾರಗಳನ್ನು, ಪಕ್ಷವನ್ನು ಏಕೆ ಬೆಂಬಲಿಸಬೇಕು ಎಂದು ಸಂದೇಶವನ್ನು ಖುದ್ದಾಗಿ ರಾಹುಲ್ಗಾಂಧಿಯವರು ತಿಳಿಸುತ್ತಾರೆ ಎಂದು ಹೇಳಿದರು.

70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಸುಭದ್ರ ರಾಷ್ಟ್ರ ನಿಮರ್ಾಣ ಮಾಡಿದೆ. ಬಿಜೆಪಿ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಚುನಾವಣಾ ಪೂರ್ವದಲ್ಲಿ ಪೊಳ್ಳು ಭರವಸೆಗಳನ್ನು ನೀಡುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದು ಜನರಿಗೆ ಮೋಸ ಮಾಡಿದ್ದಾರೆ ಎಂದರು.

ಬ್ಯಾಂಕ್ ಖಾತೆಗೆ ಪ್ರತಿಯೊಬ್ಬರಿಗೂ 15ಲಕ್ಷ ರೂ. ಜಮಾ ಆಗುತ್ತವೆ. ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂಬ ಭರವಸೆ ಏನಾಯಿತು ಎಂದು ಅವರು ಪ್ರಶ್ನಿಸಿದರು. ಕಪ್ಪು ಹಣ ಬಯಲಿಗೆ ತರುತ್ತೇನೆ ಎಂಬ ನೆಪದಲ್ಲಿ ನೋಟು ರದ್ದತಿಯಿಂದ ದುರ್ಬಲ ವರ್ಗಗಳ ಜನರಿಗೆ ತೊಂದರೆ ಉಂಟಾಗಿದೆ. ಈ ನೋವನ್ನು ಇಂದಿಗೂ ಜನಸಾಮಾನ್ಯರು ಅನುಭವಿಸುತ್ತಿದ್ದಾರೆ. ಕಪ್ಪು ಹಣ ಉಳ್ಳ ಭ್ರಷ್ಟರಿಗೆ ತೊಂದರೆ ಉಂಟಾಗಿಲ್ಲ ಅವರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು. ಜನ್ಧನ್ ಖಾತೆಯೂ ಸಹ ಯುಪಿಎ ಸರಕಾರದ ಜೀರೋ ಬ್ಯಾಲೆನ್ಸ್ ಅಕೌಂಟ್ನ ನಕಲು. ಒಟ್ಟಿನಲ್ಲಿ ಪುಗಸಟ್ಟೆ ಯೋಜನೆಗಳು ಮತ್ತು ಯುಪಿಎ ಯೋಜನೆಗಳ ಹೆಸರು ಬದಲಾವಣೆ ಮಾತ್ರ ಮೋದಿಯ ಐದು ವರ್ಷಗಳ ಸಾಧನೆ, ಸೋಲುವ ಭಯದಲ್ಲಿ ಈಗ ರಾಮ ಮತ್ತು ಅಯ್ಯಪ್ಪ ನೆನಪಾಗಿದ್ದಾರೆ, ಅವರ ಪಕ್ಷದ ಪ್ರಮುಖರು ಮತ್ತು ಅಧ್ಯಯನದ ಪ್ರಕಾಶ ಬಿಜೆಪಿ ಸೋಲಲಿದೆ ಅದಕ್ಕಾಗಿ ಹಿಂದುಗಳನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ, ಅದು ಒಬ್ಬ ಪ್ರಧಾನಿ ಮಾಡುವ ಅತ್ಯಂತ ಕೆಟ್ಟ ಕೆಲಸ ಎಂದರು.