ರಾಹುಲ್ ಗಾಂಧಿ ಅಪ್ರಬುದ್ಧ ರಾಜಕಾರಣಿ: ಪ್ರಲ್ಹಾದ್ ಜೋಶಿ

ರಾಯಚೂರು, ಡಿ.14 ರಾಹುಲ್ ಗಾಂಧಿ ಓರ್ವ ಅಪ್ರಬುದ್ಧ ರಾಜಕಾರಣಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರಿಗೆ ಯಾರೋ ಭಾಷಣ ಬರೆದು ಕೊಡುತ್ತಾರೆ. ವಿದೇಶಕ್ಕೆ ಹೋಗಿ ಅವರ ಬುದ್ಧಿ ಭ್ರಮಣೆಯಾಗಿರಬೇಕು ಎಂದು ಕುಟುಕಿದರು. ಆರ್ ಟಿಪಿಎಸ್ ವೈಟಿಪಿಎಸ್ ಗೆ ಕಲ್ಲಿದ್ದಲು ನೀಡುವ ಕುರಿತು ಮಾತನಾಡಿದ ಅವರು, ರಾಜ್ಯಕ್ಕೆ ಒಳ್ಳೆಯ ರೀತಿಯಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತದೆ. ಶಾಖೋತ್ಪನ್ನ ಸ್ಥಾವರಗಳಿಗೆ ಕಲ್ಲಿದ್ದಲು ಕೊರತೆ ಇಲ್ಲ. ಪ್ರಧಾನ ಮಂತ್ರಿಯವರು ವಿದ್ಯುತ್ ಉತ್ಪಾದನೆಗೆ ವಿಶೇಷ ಆದ್ಯತೆ  ನೀಡಿದ್ದಾರೆ ಎಂದರು. ಧಾರವಾಡ  ಪೇಡ ಹಂಚಿದ್ದು ಬೇರೆ ಕಾರಣಕ್ಕೆ ಆದರೆ ,ಅದನ್ನು ಸಿಎಬಿಗೆ ಹಂಚಿದ್ದಾರೆ ಎಂದರೆ  ತಪ್ಪಿಲ್ಲ. ಸಿಎಬಿಯಿಂದ ಅಲ್ಪಸಂಖ್ಯಾತರಿಗೆ ಏನು ತೊಂದರೆಯಾಗುತ್ತದೆ ಹೇಳಿ ಎಂದು ಅವರು  ಪ್ರಶ್ನಿಸಿದರು. ಸಿಂಧನೂರಿನಲ್ಲಿ ಬಾಂಗ್ಲಾ ಶಿಬಿರದಲ್ಲಿರುವವರು ಹಲವು ಬಾರಿ ಪೌರತ್ವಕ್ಕಾಗಿ ಮನವಿ ಮಾಡಿದ್ದರು. ಸಿಎಬಿಯಲ್ಲಿ ನಾಗರಿಕತ್ವ ಕೊಡುವುದಿದೆಯೇ ಹೊರತು  ಕಸಿದುಕೊಳ್ಳುವುದಿಲ್ಲ. ರಾಷ್ಟ್ರೀಯ ವಿಷಯದಲ್ಲಿ ರಾಜಕೀಯ ಮಾಡಬಾರದು, ಆದರೆ ಕೆಲವರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.