ಲೋಕದರ್ಶನ ವರದಿ
ರಾಣಿಬೆನ್ನೂರ 18: ತಾಲೂಕಿನ ರಾಹುತನಕಟ್ಟಿ ತಾಂಡೆಯಲ್ಲಿ ನಡೆದ ಗ್ರಾಮ ವಿಕಾಸ ಯೋಜನೆಯಡಿ ಅರಣ್ಯ ಮತ್ತು ಪರಿಸರ ಸಚಿವ ಆರ್. ಶಂಕರ್ ಅವರು ವಿವಿಧ ಅಭಿವೃದ್ದಿ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಾಂಡೆ ನಾಗರೀಕರ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವರು ತಾಂಡೆಗಳ ಅಭಿವೃದ್ದಿಗೆ ನಿಗಮ ಸ್ಥಾಪಿಸಲಾಗಿದೆ. ಅಂದಿನಿಂದ ಇಂದಿನವರೆಗೂ ತಾಂಡೆಗಳಲ್ಲಿ ಸಾಕಷ್ಟು ಅಭಿವೃದ್ದಿ ಕಾಮಗಾರಿಗಳಾಗಿದ್ದು ಅಲ್ಲಿನ ವಾಸಿಗಳು ಇತರರಂತೆ ಸಮಾನತೆಯಿಂದ ಸಾಮೂಹಿಕ ಜೀವನ ಸಾಗಿಸುವಂತಾಗಿದೆ ಎಂದರು.
ಅಭಿವೃದ್ದಿ ನಿಗಮದ ಜೊತೆ ಜೊತೆಗೆ ಗ್ರಾಮೀಣ ವಿಕಾಸ ಯೋಜನೆಯಲ್ಲಿಯೋಸಹ ಸಾಕಷ್ಟು ಕೆಲಸಗಳು ಸಾಗುತ್ತಲ್ಲಿವೆ ಇದರಿಂದ ತಾಂಡೆಗಳೂ ಸಹ ಅಭಿವೃದ್ದಿ ಕಾಣುತ್ತಿದ್ದು ಆರೋಗ್ಯ ಹಿತದೃಷ್ಟಿಯಿಂದ ನಿವಾಸಿಗಳು ಸುಂದರ ಮತ್ತು ಸ್ವಚ್ಚ್ ಪರಿಸರ ನಿಮರ್ಿಸಿಕೂಳ್ಳಲು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮಪಂಚಾಯಿತಿ ಅದ್ಯಕ್ಷ ಚಂದ್ರಪ್ಪ ಲಮಾಣಿ, ಉಪಾದ್ಯಕ್ಷ ನಾಗರಾಜ ಕಕ್ಕಗೋಳ, ಎ.ಪಿ.ಎಂ.ಸಿ ಸದಸ್ಯ,ವಿಶ್ವನಾಥ ರಾಹುತನಕಟ್ಟಿ, ಆನಂದ ಇಟಗಿ, ಕೆ.ಪಿ.ಜೆ.ಪಿ. ಜಿಲ್ಲಾ ಅದ್ಯಕ್ಷ, ರಾಜಪ್ಪಅಡಿವೆಪ್ಪನವರ, ಆರ್. ಶಂಕರ್ ಅಭಿಮಾನಿ ಸಂಘದ ಕಾರ್ಯದಶರ್ಿ ಚಂದ್ರಪ್ಪ ಕಾಳಪ್ಪನವರ, ನಗರ ಸಭಾ ಸದಸ್ಯ ನಿಂಗರಾಜ ಕೋಡಿಹಳ್ಳಿ, ಕುಮಾರ ಲಮಾಣಿ, ಮೂತರ್ಿ ಲಮಾಣಿ, ಪಾಪು ಲಮಾಣಿ ಗುತ್ತಿಗೆದಾರ ಎ. ವೇಣುಕುಮಾರ್ ರೆಡ್ಡಿ, ರುದ್ರೇಶ್, ಸೇರಿದಂತೆ ಗ್ರಾ.ಪಂ. ಸದಸ್ಯರು ಗ್ರಾಮದ ಮುಖಂಡರು ಯುವಕರು ಉಪಸ್ಥಿತರಿದ್ದರು.