ಪ್ರಾ.ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಆರ್.ಲಿಂಗನಗೌಡ, ಉಪಾಧ್ಯಕ್ಷರಾಗಿ.ಎಂ.ರಂಗಯ್ಯ
ಕಂಪ್ಲಿ 11: ತಾಲೂಕಿನ ಹಂಪಾದೇವನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆರ್.ಲಿಂಗನಗೌಡ, ಉಪಾಧ್ಯಕ್ಷರಾಗಿ ಎಂ.ರಂಗಯ್ಯ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಎಸ್.ಈರೇಶ್ ಘೋಷಿಸಿದರು. ಅಧ್ಯಕ್ಷರಾಗಿ ಆರ್.ಲಿಂಗನಗೌಡ, ಮಾತನಾಡಿ, ಸಹಕಾರ ಸಂಘದಲ್ಲಿರುವ ಯೋಜನೆಗಳನ್ನು ರೈತರಿಗೆ ತಲುಪಿಸುವ ಜತೆಗೆ ಸಂಘವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲಾಗುವುದು ಎಂದರು. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಮಾಲಾರೆ್ಣ ಮಾಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ನಿರ್ದೇಶಕರಾದ ಕೆ.ದೊಡ್ಡಬಸಪ್ಪ, ಉಮೇಶಸ್ವಾಮಿ, ಕೆ.ದೊಡ್ಡಬಸಪ್ಪ, ಎಂ.ನರಸಪ್ಪ, ಹೆಚ್.ತಿಪ್ಪೇಸ್ವಾಮಿ, ಎನ್.ಈರಮ್ಮ, ಮಲ್ಲಮ್ಮ, ಉಪ್ಪಾರ ನರಸಮ್ಮ, ಯು.ಶಿವಪ್ಪ, ಜಿ.ಯರಿ್ರಸ್ವಾಮಿ, ಮುಖ್ಯಕಾರ್ಯನಿರ್ವಾಹಕ ಹೆಚ್.ದೊಡ್ಡಬಸಪ್ಪ, ಮುಖಂಡರಾದ ಎ.ಹುಲುಗಪ್ಪ, ಇಟಗಿ ಬಸಪ್ಪ, ರಾಮಣ್ಣ, ಯು.ಗುರುಮೂರ್ತಿ, ಬಳ್ಳಾಪುರ ಲಿಂಗಪ್ಪ, ಎಸ್.ವೆಂಕಟೇಶ, ಮಲ್ಲಿಕಾರ್ಜುನ, ಬಸವರಾಜ, ರಾಮಲಿಂಗಯ್ಯ, ಬಿ.ಮಾರೆಪ್ಪ ಸೇರಿದಂತೆ ಗ್ರಾಮಸ್ಥರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.