ಮಾರ ಥೋಮಾ ಶಾಲೆಯಲ್ಲಿ ಕ್ವೆಸ್ಟ - 2018

ಲೋಕದರ್ಶನ ವರದಿ

ಹೊನ್ನಾವರ 16: ಮಕ್ಕಳ ದಿನಾಚರಣೆಯ ಉದ್ದಿಶ್ಯ ಹೊನ್ನಾವರದ ಮಾರ ಥೋಮಾ ಆಂಗ್ಲ ಮಾಧ್ಯಮ  ಹಾಗೂ ಕೇಂದ್ರೀಯ ವಿದ್ಯಾಲಯದಲ್ಲಿ ಗಿ ರಿಂದ ಘಿ ತರಗತಿಗಳ ವಿದ್ಯಾಥರ್ಿಗಳಿಗೆ ಕ್ವೆಸ್ಟ -2018 ಹೆಸರಿನಲ್ಲಿ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಮಾದರಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಮಾರ ಥೋಮಾ ಸಂಸ್ಥೆ ಹಾಗೂ ಲಯನ್ಸ ಕ್ಲಬ್ ಹೊನ್ನಾವರ ಇವರ ಜಂಟಿ ಆಶ್ರಯದಲ್ಲಿ ನಡೆದ ಈ ಪ್ರದರ್ಶನದ ಮುಕ್ತಾಯ ಸಂದರ್ಭದಲ್ಲಿ ವಿದ್ಯಾಥರ್ಿಗಳಿಗೆ ಬಹುಮಾನ ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ . ಸೀತಾ ಭಾಗ್ವತ ಸುರತ್ಕಲ್ ಭಾಗವಹಿಸಿದ್ದರು. ಲಯನ್ಸ ಕ್ಲಬ್ ಅಧ್ಯಕ್ಷರಾದ ಲಯನ್.ರಾಜೇಶ ಸಾಲೇಹಿತ್ತಲ, ಖಜಾಂಚಿಗಳಾದ ಯೋಗೇಶ ರಾಯ್ಕರ ಉಪಸ್ಥಿತರಿದ್ದರು.

ಮಾರ ಥೋಮಾ ಸಂಸ್ಥೆಯ ಮೆನೇಜರ ರೆ||ಜಾನ್ ಉಮ್ಮನ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಖಜಾಂಚಿ ಕೆ.ಸಿ.ವಗರ್ೀಸ, ಶೈಕ್ಷಣಿಕ ನಿದರ್ೇಶಕ ಎಚ್.ಎನ್.ಪೈ, ಸಿ.ಬಿ.ಎಸ್.ಇ ಪ್ರಿನ್ಸಿಪಾಲ ತೆರೆಸಾ ಫನರ್ಾಂಡಿಸ, ಪ್ರಭಾರೆ ಮುಖ್ಯಾಧ್ಯಾಪಕ ವಿನೋದ ಲೋಪಿಸ ಉಪಸ್ಥಿತರಿದ್ದರು.

ನೂರಾರು ಮಾದರಿಗಳ ವ್ಯವಸ್ಥಿತ ಪ್ರದರ್ಶನವನ್ನು ಕಂಡು ಪಾಲಕರು ಹಾಗೂ ವಿದ್ಯಾಭಿಮಾನಿಗಳು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.