ಶಿವಾಜಿ ಮಹಾರಾಜರ ಪುತ್ಥಳಿ ಲೋಕಾರೆ್ಣ ಕಾರ್ಯಕ್ರಮ
ಅಥಣಿ 04: ಅಥಣಿ ಪಟ್ಟಣದಲ್ಲಿ ಇತ್ತೀಚಿಗೆ ನಿರ್ಮಾಣಗೊಂಡ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಲೋಕಾರೆ್ಣ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಇವರನ್ನು ಸ್ಥಳೀಯ ಮರಾಠಾ ಸಮಾಜ ಬಾಂಧವರ ನಿಯೋಗ ಮಾಜಿ ಸಚಿವ ಶ್ರೀಮಂತ ಪಾಟೀಲ ನೇತೃತ್ವದಲ್ಲಿ ನವ ದೇಹಲಿಗೆ ತೆರಳಿ ಭೇಟಿ ಮಾಡಿ ಮನವಿ ಮಾಡಿತು.
ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಇವರನ್ನು ನವ ದೇಹಲಿಯ ಕಛೇರಿಯಲ್ಲಿ ಭೇಟಿ ಮಾಡಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಕುರಿತು ಮಾಹಿತಿ ನೀಡಿದರು ಜೊತೆಗೆ ಪುತ್ಥಳಿಯನ್ನು ತಾವೇ ಉದ್ಘಾಟಿಸಬೇಕು ಎಂದು ಮರಾಠಾ ಸಮಾಜ ಬಾಂಧವರ ನಿಯೋಗ ಮನವಿ ಮಾಡಿತು. ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡಿದ್ದು, ಎಪ್ರಿಲ್ ತಿಂಗಳಲ್ಲಿಯೇ ಪುತ್ಥಳಿ ಅನಾವರಣಗೊಳಿಸಲು ನಿರ್ಧರಿಸಲಾಗಿದೆ ದಿನಾಂಕ ಮತ್ತೊಮ್ಮೆ ಅವರೊಂದಿಗೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ, ಮಾಜಿ ಶಾಸಕ ಕುಮಾರ ಬಂಗಾರ್ಪ, ಬಿಜೆಪಿ ಮುಖಂಡ ಎನ್.ಆರ್.ಸಂತೋಷ, ಮರಾಠಾ ಸಮಾಜ ಬಾಂಧವರ ನಿಯೋಗದಲ್ಲಿ ಕೆ.ಎಮ್.ಎಫ್ ಮಾಜಿ ನಿರ್ದೇಶಕ ಅಪ್ಪಾಸಾಹೇಬ ಅವತಾಡೆ, ಮರಾಠಾ ಮಹಾ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಮುಖಂಡ ಭಾವುಸಾಹೇಬ ಜಾಧವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.