ಧಾರವಾಡ 25: ಕನರ್ಾಟಕ ವಿದ್ಯಾವರ್ಧಕ ಸಂಘದ ಅವಿಸ್ಮರಣೀಯ ಸೇವೆ ನನ್ನನ್ನು ಪುಳಕಿತನಾಗುವಂತೆ ಮಾಡುತ್ತದೆ. ಅದೇ ರೀತಿ ಈ ಸಂಘದ ಅಧ್ಯಕ್ಷ ನಾಡೋಜ ಡಾ. ಪಾಪುರವರ ಹೆಸರು ನನ್ನ ಕಿವಿಯ ಮೇಲೆ ಬಿದ್ದ ತಕ್ಷಣ ನಾನು ಪುಳಕಿತನಾಗುತ್ತೇನೆ. ಕನ್ನಡ ಭಾಷೆ ಉಳಿವು ಮತ್ತು ಬೆಳವಣಿಗೆಗೆ ಅವರು ಮಾಡಿದ ಹೋರಾಟ ನನ್ನ ಕಣ್ಣೆದುರು ಬಂದು ಪುಟ್ಟಪ್ಪನವರ ಧೀಮಂತ ವ್ಯಕ್ತಿತ್ವ ನನಗೆ ರೋಮಾಂಚನ ನೀಡುತ್ತದೆ. ನಾನು ಪುಟ್ಟಪ್ಪನವರ ಜೊತೆ ಕನ್ನಡ ಕಾವಲು ಸಮಿತಿಯ ಸದಸ್ಯನಾಗಿ ಅವರು ಮಾಡಿದ ಕಾರ್ಯವನ್ನು ಹತ್ತಿರದಿಂದ ಬಲ್ಲವನಾಗಿದ್ದೇನೆ. ಪುಟ್ಟಪ್ಪನವರು ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾದ ಕಾಲದಲ್ಲಿ ಕನರ್ಾಟಕದ ರಾಜ್ಯದ ಅಂದಿನ ರಾಜ್ಯಪಾಲ ಅಶೋಕನಾಥ ಬ್ಯಾನಜರ್ಿಯವರು, ತನಗೆ ಕನ್ನಡ ಬರುವುದಿಲ್ಲ, ಆದ್ದರಿಂದ ಈ ಸಭೆಯಲ್ಲಿ ಪಾಟೀಲ ಪುಟ್ಟಪ್ಪನವರು ಅನುಮತಿಸಿದರೆ ನಾಲ್ಕು ಮಾತು ಇಂಗ್ಲೀಷನಲ್ಲಿ ಮಾತನಾಡುತ್ತೇನೆ, ಇಲ್ಲದೇ ಹೋದಲ್ಲಿ ನಾನು ಮಾತನಾಡುವ ಸಾಹಸ ಮಾಡುವುದಿಲ್ಲ ಎಂದು ಪಾಟೀಲ ಪುಟ್ಪಪ್ಪನವರ ಅನುಮತಿ ಕೋರಿದ್ದಕ್ಕೆ ನಾನು ಸಾಕ್ಷಿಯಾಗಿದ್ದೇನೆ. ಈ ಘಟನೆ ಪಾಟೀಲ ಪುಟ್ಟಪ್ಪನವರ ಕನ್ನಡದ ಬದ್ಧತೆ ಮತ್ತು ಅವರ ಧೀಮಂತಿಕೆಯನ್ನು ಎತ್ತಿತೋರಿಸುತ್ತದೆ ಎಂದು ಖ್ಯಾತ ಸಾಹಿತಿ ಡಾ. ಸಿದ್ಧಲಿಂಗಯ್ಯ ಹೇಳಿದರು.
ಕನರ್ಾಟಕ ವಿದ್ಯಾವರ್ಧಕ ಸಂಘವು 63 ನೇ ಕನರ್ಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇಂದು ನೃಪತುಂಗ ಪ್ರಶಸ್ತಿಗೆ ಭಾಜನರಾದ ಡಾ. ಸಿದ್ಧಲಿಂಗಯ್ಯ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ, ನಮ್ಮ ನಾಡಿನಲ್ಲಿ ಆಗಿಹೋದ ಬಸವಾದಿ ಶರಣರು, ಹರಿದಾಸರು, ದಾರ್ಶನಿಕರು ಮತ್ತು ಮಹಾನ್ ವ್ಯಕ್ತಿಗಳು ಜಾತಿ ಮೀರಿದ ಸಮಾಜ ನಿಮರ್ಾಣವಾಗುವ ಹಿತೋಪದೇಶಗಳನ್ನು ನೀಡಿದ್ದಾರೆ. ಈ ಹಿತೋಪದೇಶಗಳನ್ನು ನಾವು ಇಂದು ಮರೆತಿದ್ದು, ನೆನಪಿಸಿಕೊಂಡು ಪಾಲಿಸೋಣ. ಆ ಮೂಲಕ ಸುಂದರ ಸಮಸಮಾಜ ಕಟ್ಟೋಣ. ಎಂದರು.
ಸಂಘದ ಸಹಕಾರ್ಯದಶರ್ಿ ಸದಾನಂದ ಶಿವಳ್ಳಿಯವರು `ಹಾಸ್ಯ-ಜಾದೂ-ನೃತ್ಯ ಸಂಜೆ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಾ ಮಾತನಾಡಿ, 129 ವರ್ಷಗಳ ಸಾರ್ಥಕ್ಯದ ಇತಿಹಾಸವುಳ್ಳ ಕನರ್ಾಟಕ ವಿದ್ಯಾವರ್ಧಕ ಸಂಘವು ಕನ್ನಡ ನಾಡು-ನುಡಿ-ನೆಲ-ಜಲಕ್ಕಾಗಿ ತನ್ನದೆ ಆದ ಅಪಾರ ಕೊಡುಗೆ ನೀಡುತ್ತಾ, ಸಾಹಿತ್ಯ, ಸಂಗೀತ, ನಾಟಕ ಮುಂತಾದ ಕಲೆ, ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಸಾಹಿತ್ಯಿಕ, ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುತ್ತ ಬಂದಿದೆ, ಸಂಘವು ನಾಡೋಜ ಡಾ. ಪಾಪುರವರ ನೇತೃತ್ವದಲ್ಲಿ ಸತತ 15 ದಿನಗಳ ಕಾಲ ವೈವಿಧ್ಯಮಯ, ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರ ಅಂಗವಾಗಿ ಇಂದು `ಹಾಸ್ಯ-ಜಾದೂ-ನೃತ್ಯ ಸಂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಸದಾವಕಾಶ ನನಗೆ ದೊರೆತಿದ್ದು ನನ್ನ ಸುದೈವ ಎಂದರು.
ಸಂಘದ ಹಿರಿಯ ಸದಸ್ಯ ಶ್ರೀನಿವಾಸ ವಾಡಪ್ಪಿ ಹಾಗೂ ಶಂಕರಗೌಡ ಕೆ. ಪಾಟೀಲ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಬಸವಪ್ರಭು ಹೊಸಕೇರಿ ನಿರ್ವಹಿಸಿದರು. ಪ್ರಫುಲ್ಲಾ ನಾಯಕ ಸನ್ಮಾನಿತರನ್ನು ಪರಿಚಯಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು. ಮೇಘಾ ಹುಕ್ಕೇರಿ ಹಾಗೂ ಸಾಕ್ಷಿ ಹುಕ್ಕೇರಿ ಹುಕ್ಕೇರಿ ಕನ್ನಡ ಗೀತೆ ಹಾಡಿದರು.
ಸವದತ್ತಿಯ ರಾಜು ಬದಾಮಿ ಹಾಸ್ಯ-ಜಾದೂ ಕಾರ್ಯಕ್ರಮ ನಡೆಸಿಕೊಟ್ಟರು. ಧಾರವಾಡದ ಸೀತಾ ಛಪ್ಪರ ಹಾಗೂ ತಂಡದಿಂದ ನೃತ್ಯ ಹಾಗೂ ಗಣೇಶ ನೃತ್ಯ ಶಾಲೆಯ ವಿದೂಷಿ ರೋಹಿಣಿ ಇಮಾರತಿ ಹಾಗೂ ತಂಡದವರು ಸೊಗಸಾಗಿ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಸಿಕೊಟ್ಟು ಸಭೀಕರ ಮನತಣಿಸಿದರು.
ಡಾ. ವ್ಹಿ. ಸಿ. ಐರಸಂಗ, ಭಾರತಿದೇವಿ ರಾಜಗುರು, ಪ್ರೊ. ವೀಣಾ ಸಂಕನಗೌಡರ, ಡಾ. ಶ್ರೀಧರ ಕುಲಕಣರ್ಿ, ಮಲ್ಲಪ್ಪ ಹೊಂಗಲ, ಎಸ್. ಬಿ. ಗುತ್ತಲ, ಜಿ. ಬಿ. ಹೊಂಬಳ, ಕೆ.ಎಚ್. ನಾಯಕ, ಪ್ರಭು ಹಂಚಿನಾಳ ವೀರಣ್ಣ ಒಡ್ಡೀನ, ಬಿ. ಕೆ. ಹೊಂಗಲ, ಚನ್ನಬಸಪ್ಪ ಅವರಾಧಿ, ಸಂತೋಷ ಮಹಾಲೆ, ರಾಘವೇಂದ್ರ ಕುಂದಗೋಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.