ಗೃಹಲಕ್ಷ್ಮಿ ಹಣದಿಂದ ಉಳುಮೆ ಮಾಡಲು ರೋಟವೆಟರ್ ಖರೀದಿ
ಹಾವೇರಿ 22: ಜಿಲ್ಲೆಯ ಮಂಟಗಣಿ ಗ್ರಾಮದ ಶಾರದಾ ಜಗಣ್ಣನವರ (ಅತ್ತೆ)ಹಾಗೂ ಲಕ್ಷ್ಮೀ ಜಗಣ್ಣನವರ (ಸೊಸೆ) ಇವರು ಕರ್ನಾಟಕ ಸರಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಬಂದ ಹಣವನ್ನು ಕೂಡಿಟ್ಟುಕೊಂಡು ಜಮೀನು ಉಳುಮೆ ಮಾಡಲು ರೋಟವೆಟರ್ ಖರೀದಿಸಿದ್ದಾರೆ. ಗ್ಯಾರಂಟಿ ಯೋಜನೆಯ ಹಣವನ್ನು ವಿಭಿನ್ನವಾಗಿ ಕೃಷಿ ಕ್ಷೇತ್ರದ ಉಪಕರಣಕ್ಕೆ ಬಳಕೆ ಮಾಡಿ ಮಾದರಿಯಾದ ಅತ್ತೆ ಮತ್ತು ಸೊಸೆಯನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅವರ ಮನೆಗೆ ಹೋಗಿ ಗೌರವಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಳಸೂರ ಗ್ರಾಪಂ ಅಧ್ಯಕ್ಷರಾದ ಪವಿತ್ರಾ ಮಂಟಗಣಿ,ಸದಸ್ಯರಾದ ಶ್ರೀಧರ ದೊಡ್ಡಮನಿ,ಪುಟ್ಟಪ್ಪ ಮರಗಿ, ಗೀತಾ ಮೋಹನ್ ಹಾವೇರಿ,ಕಾಂಗ್ರೆಸ್ ಪಕ್ಷದ ಮುಖಂಡರಾದ ಭೂಪಾಲಪ್ಪ ಚೂಳಕಿ, ದೇವಕ್ಕ ಜಗಣ್ಣನವರ, ಬಸವಣ್ಣೆವ್ವ ಸವಣೂರ,ನಾಗಪ್ಪ ರಭಜ್ಜನವರ,ಶಿವರಾಜ ಹುರಳಿಕುಪ್ಪಿ,ಆಕಾಶ ಕರೇಚಿಕ್ಕಣ್ಣನವರ ಸೇರಿದಂತೆ ಅನೇಕರಿದ್ದರು.