ಇಂದು ವಿವಿಧ ಮೂರ್ತಿಗಳ ಪುರ ಪ್ರವೇಶ ಕಾರ್ಯಕ್ರಮ
ಶಿಗ್ಗಾವಿ 23 : ಪಟ್ಟಣದ ಐತಿಹಾಸಿಕ ಮೈಲಾರ ಲಿಂಗೇಶ್ವರ ದೇವಸ್ಥಾನದ ಉದ್ಘಾಟನೆ ಹಾಗೂ ನೂತನ ಮೂರ್ತಿ ಪ್ರತಿಷ್ಠಾಪನೆ ನಿಮಿತ್ಯ ವಿವಿಧ ದೇವರ ಮೂರ್ತಿಗಳಾದ ಮೈಲಾರಲಿಂಗೇಶ್ವರ, ಗಂಗಮಾಳವ್ವದೇವಿ, ಗಣಪತಿ, ಭೂಲಿಂಗೇಶ್ವರ, ನಾಗಲಿಂಗೇಶ್ವರ, ಪಾದುಕೆ, ತುಪ್ಪದ ಮಾಳವ್ವ, ಹೆಗ್ಗಪ್ಪಸ್ವಾಮಿ, ಆಂಜನೇಯ ಸ್ವಾಮಿ, ನವಗ್ರಹ ಮೂರ್ತಿಗಳ ಮೂಲಕ ಜ 24 ರಂದು ಶುಕ್ರವಾರ ಮದ್ಯಾಹ್ನ 2 ಗಂಟೆಗೆ ಪಟ್ಟಣದ ಗಂಗಿಭಾವಿ ಕ್ರಾಸದಿಂದ ವಿವಿಧ ವಾದ್ಯಗಳು ಹಾಗೂ ಮಹಿಳೆಯರಿಂದ ಕುಂಭ ಸೇವೆ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಸಿ ನಂತರ ದೇವಸ್ಥಾನದಲ್ಲಿ ಪುರ ಪ್ರವೇಶವಾಗಿ ವಿಶೇಷ ಪೂಜೆ ಮತ್ತು ವಿವಿಧ ಹೋಮ ಹವನಗಳು ನಡೆಯಲಿವೆ ಕಾರಣ ಸದ್ಬಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಫೆಗೆ ಪಾತ್ರರಾಗಬೇಕು ಎಂದು ಸಮಿತಿ ಅದ್ಯಕ್ಷ ಸುಭಾಸ ಚವ್ಹಾಣ ಪ್ರಕಟಣೆಗೆ ಕೋರಿದ್ದಾರೆ.