ಪುರಸಭೆಯ.ಅಯ-ವ್ಯಯದ.ಪೂರ್ವಭಾವಿಸಭೆ.ಸಾರ್ವಜನಿಕರ ಸಲಹೆ-ಸೂಚನೆ
ಕಂಪ್ಲಿ:ಫೆ.05. ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನೇತೃತ್ವದಲ್ಲಿ 2024-25ನೇ ಸಾಲಿನ ಅಯ-ವ್ಯಯದ ಪೂರ್ವಭಾವಿ ಸಭೆ ಬುಧವಾರ ಜರುಗಿತು.ಅಧ್ಯಕ್ಷ ಭಟ್ಟ ಪ್ರಸಾದ್ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಕಂಪ್ಲಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ಇಲ್ಲಿನ ಪ್ರತಿಯೊಂದು ವಾರ್ಡ್‌ಗಳಲ್ಲಿರುವ ಸಮಸ್ಯೆಗಳನ್ನು ಅರಿತು, ಸೌಲಭ್ಯಗಳನ್ನು ಕಲಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಕಂಪ್ಲಿ ಪಟ್ಟಣದಲ್ಲಿ ಬಿಡಾರಿ ದನಗಳ ಹಾವಳಿಯಿಂದ ಜನರು ರೋಸಿ ಹೋಗಿದ್ದು, ಅಧಿಕಾರಿಗಳು ಹೆಚ್ಚಿನ ಕಾಳಜಿವಹಿಸಿ, ಸೂಕ್ತಕ್ರಮ ಕೈಗೊಳ್ಳಬೇಕು. ರಸ್ತೆಯ ಬದಿಗಳಲ್ಲಿ ಬಂಡಿಗಳನ್ನು ವ್ಯಾಪಾರಕ್ಕೆ ಹಾಕಿಕೊಳ್ಳುವುದರಿಂದ ಜನತೆಗೆ ತೊಂದರೆಯಾಗುತ್ತದೆ. ಆದ್ದರಿಂದ ಇದರ ಬಗ್ಗೆ ಗಮನಹರಿಸಬೇಕು. ಕಂಪ್ಲಿ ಸೋಮಪ್ಪ ಕೆರೆ ಅಭಿವೃದ್ಧಿ ಹಾಗೂ ಪಾರ್ಕ್‌ಗಾಗಿ ಅಮೃತ್ ಯೋಜನೆಯಡಿ ಸುಮಾರು 5 ಕೋಟಿ ಅನುದಾನ ನಿಗದಿಪಡಿಸಿದ್ದು, ಡಿಪಿಆರ್ ತಯಾರಿಸಿ ನಂತರ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗುವುದು. ಪಟ್ಟಣದಲ್ಲಿ ಒಳಚರಂಡಿಗಾಗಿ ಎಸ್‌ಟಿಪಿ ಘಟಕ ನಿರ್ಮಾಣ ಮಾಡಲು ಕಂಪ್ಲಿಯ ಅರಳಿಹಳ್ಳಿ ಸರ್ವೆ ನಂ.77/ಎ ರ ಭೂಮಿಯಲ್ಲಿ ಸುಮಾರು 5 ಎಕರೆ ವಿಸ್ತೀರ್ಣ ಭೂಮಿ ನಿಗದಿಪಡಿಸಿದ್ದು, ಜಿಲ್ಲಾಧಿಕಾರಿಗೆ ಪ್ರಾಸ್ತಾವನೆ ಸಲ್ಲಿಕೆಯಾಗಿದೆ. ಬಹುದಿನದ ಬೇಡಿಕೆಯಾಗಿದ್ದ ನಡುವಲ ಮಸೀದಿಯಿಂದ ಜೋಗಿ ಕಾಲುವೆವರೆಗಿನ ರಸ್ತೆ ಅಗಲೀಕರಣ ಮಾಡಿ, ರಸ್ತೆ ಅಭಿವೃದ್ಧಿಪಡಿಸಲು 2024-25ನೇ ಸಾಲಿನ ಎಸ್‌ಎಫ್‌ಸಿ ವಿಶೇಷ ಅನುದಾನದಲ್ಲಿ 2 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಇಲ್ಲಿನ ಮಾರುಕಟ್ಟೆ ಅಭಿವೃದ್ಧಿಗಾಗಿ ಎಸ್‌ಎಫ್‌ಸಿ ವಿಶೇಷ ಅನುದಾನದ ಸುಮಾರು 170 ಲಕ್ಷದಲ್ಲಿ ವಾರದ ಮಾರುಕಟ್ಟೆ ಅಭಿವೃದ್ಧಿಗಾಗಿ ಅಂದಾಜು ಪಟ್ಟಿ ತಯಾರಿಸಿ ತಾಂತ್ರಿಕ ಅನುಮೋದನೆ ಪಡೆದು ಟೆಂಡರ್ ಕರೆಯಲಾಗುವುದು ಎಂದು ಹೇಳುವ ಜತೆಗೆ ಪಟ್ಟಣದ ಅಭಿವೃದ್ಧಿಗೆ ಸಂಬಂಧಿಸಿದ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದು, ಬಜೆಟ್‌ನಲ್ಲಿ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದರು. ಸಲಹೆ-ಸೂಚನೆ: ಇಲ್ಲಿನ ಪೂರ್ವಭಾವಿ ಸಭೆಯಲ್ಲಿ ಕಂಪ್ಲಿಯ ಎಲ್ಲಾ ವಾರ್ಡ್‌ಗಳಲ್ಲಿ ಸ್ವಚ್ಚತೆ ಮಾಡಬೇಕು. ಎಸ್.ಬಿ.ಎಂ. 1.0 ಯೋಜನೆಯ ಅನುದಾನದಲ್ಲಿ ರೂ.99 ಲಕ್ಷಗಳಿಗೆ ಸಗ್ರಿಗೇಷನ್ ಮಿಷನ್ ಶೆಡ್ ನಿರ್ಮಾಣ, ರಸ್ತೆ, ಚರಂಡಿ ನಿರ್ಮಾಣ ಮಾಡಲು ಕ್ರಿಯಾ ಯೋಜನೆಗೆ ಅನುಮೋದನೆ ಮಾಡುವುದು, ಉದ್ಯಾನವನಗಳ ಅಭಿವೃದ್ಧಿ ಮತ್ತು ಆಟಿಕೆ ಮತ್ತು ವ್ಯಾಯಾಮ ಉಪಕರಣಗಳ ಅಳವಡಿಕೆ ಸೇರಿದಂತೆ ನಾನಾ ವಿಷಯಗಳನ್ನು ಚರ್ಚಿಸಿ, ಅಭಿಪ್ರಾಯ ಪಡೆಯಲಾಯಿತು. ಮತ್ತು ಬಿಡಾಡಿ ದನಗಳ ಉಪಟಳ, ರಸ್ತೆ, ಚರಂಡಿ ನಿರ್ಮಾಣ, ಹೀಗೆ ನಾನಾ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಲಹೆ, ಸೂಚನೆಗಳನ್ನು ಸಂಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಕೆ.ದುರುಗಣ್ಣ, ಉಪಾಧ್ಯಕ್ಷೆ ಸುಶೀಲಮ್ಮ, ಸದಸ್ಯರಾದ ಸಿ.ಆರ್.ಹನುಮಂತ, ವೀರಾಂಜನೇಯ, ಆರ್.ಆಚಿಜನೇಯ, ಮೌಲಾ ಹಾಗೂ ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ, ಡಾ.ಎ.ಸಿ.ದಾನಪ್ಪ, ಕರೇಕಲ್ ಮನೋಹರ, ಬೂದಗುಂಪಿ ಹುಸೇನ್‌ಸಾಬ್, ಎಂ.ಸಿ.ಮಾಯಪ್ಪ, ಜಿ.ರಾಮಣ್ಣ, ಬಿ.ದೇವೇಂದ್ರ, ಅಕ್ಕಿ ಜಿಲಾನ್, ಸುಧಾಕರ, ರಮೇಶ, ಕೃಷ್ಣ, ಮೌನೇಶ, ರಂಗಪ್ಪ ಸೇರಿದಂತೆ ಸಿಬ್ಬಂದಿಗಳು ಹಾಗೂ ಸಂಘ-ಸಂಸ್ಥೆಯವರು ಉಪಸ್ಥಿತರಿದ್ದರು. ಫೆ002ಕಂಪ್ಲಿಯಲ್ಲಿ ನಡೆದ ಆಯ-ವ್ಯಯದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷ ಭಟ್ಟ ಪ್ರಸಾದ್ ಮಾತನಾಡಿದರು.